AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಜಂಬೂ ಸವಾರಿಗೆ ಸಿದ್ಧಗೊಳ್ಳುತ್ತಿವೆ ಗಜಪಡೆ: ನಿತ್ಯ ಪೌಷ್ಟಿಕ ಆಹಾರ, ತಿಂಡಿಪೋತ ಭೀಮ!

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಅರಮನೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ. ಶಕ್ತಿ ವೃದ್ಧಿ, ತೂಕ ಹೆಚ್ಚಿಸಲು ದಿನಕ್ಕೆ ಎರಡು ಬಾರಿ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಭೀಮನೇ ತಿಂಡಿಪೋತ ಆನೆ ಅಂತೆ.

ಮೈಸೂರು ಜಂಬೂ ಸವಾರಿಗೆ ಸಿದ್ಧಗೊಳ್ಳುತ್ತಿವೆ ಗಜಪಡೆ: ನಿತ್ಯ ಪೌಷ್ಟಿಕ ಆಹಾರ, ತಿಂಡಿಪೋತ ಭೀಮ!
ಗಜಪಡೆಗೆ ವಿಶೇಷ ಪೌಷ್ಟಿಕ ಆಹಾರ
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 17, 2025 | 8:21 AM

Share

ಮೈಸೂರು, ಆಗಸ್ಟ್​​ 17: ಜಂಬೂ ಸವಾರಿ (jamboo savari) ಅಂದರೆ ಅದು ಮೈಸೂರು ದಸರಾ (Mysuru Dasara) ಅಂತ ಇಡೀ ವಿಶ್ವಕ್ಕೆ ಗೊತ್ತು. ದಸರಾ ಹಬ್ಬದಂದು ಎಲ್ಲರ ಕಣ್ಣು ಅಂಬಾರಿ ಮತ್ತು ಆ ಅಂಬಾರಿ ಹೊತ್ತ ಆನೆಗಳ ಮೇಲಿರುತ್ತದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಅರಮನೆಯಲ್ಲಿ ದಸರಾ ಗಜಪಡೆಗೆ ರಾಜಾತಿಥ್ಯ ನೀಡಲಾಗುತ್ತಿದೆ. ಪ್ರತಿನಿತ್ಯ 2 ಬಾರಿ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಪ್ರತ್ಯೇಕ ವಿಶೇಷ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದೆ. ಒಟ್ಟು 14 ಆನೆಗಳ ಆಹಾರದ ವೆಚ್ಚ 55 ರಿಂದ 60 ಲಕ್ಷ ರೂ.

ವಿಶೇಷ ಅಡುಗೆ ಕೋಣೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಕ್ಯಾಪ್ಟನ್ ಅಭಿಮನ್ಯು ಪಡೆ ಸಿದ್ಧವಾಗುತ್ತಿದೆ. ಹಾಗಾಗಿ 14 ಆನೆಗಳಿಗೆ ಮೈಸೂರಿನ ಅರಮನೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ. ಅದರಲ್ಲೂ ಅವುಗಳ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅದಕ್ಕಾಗಿ ವಿಶೇಷ ಅಡುಗೆ ಕೋಣೆ ನಿರ್ಮಿಸಲಾಗಿದೆ. ಇದಕ್ಕಾಗಿ ಅಡುಗೆ ತಯಾರಕರ ತಂಡವೇ ಇದೆ. ಒಂದು ಆನೆಗೆ 10 ಕೆಜಿಯಷ್ಟು ಆಹಾರ ನೀಡಲಾಗುತ್ತಿದೆ.

ಇದನ್ನೂ ಓದಿ: ಮೈಸೂರು ದಸರಾ ಗಜಪಡೆ: ತೂಕದಲ್ಲಿ ಕ್ಯಾಪ್ಟನ್​ ಅಭಿಮನ್ಯುಗಿಂತ ಭೀಮ ಹೆಚ್ಚು ! ನಂ.1

ಇದನ್ನೂ ಓದಿ
Image
ಮೈಸೂರು ದಸರಾ ಗಜಪಡೆ: ತೂಕದಲ್ಲಿ ಕ್ಯಾಪ್ಟನ್​ ಅಭಿಮನ್ಯುಗಿಂತ ಭೀಮ ಹೆಚ್ಚು !
Image
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
Image
ಮೈಸೂರು ದಸರಾ 2025 ರ ಉದ್ಘಾಟಕರು ಯಾರು? ಸಚಿವ ಮಹದೇವಪ್ಪ ಕೊಟ್ಟರು ಸುಳಿವು
Image
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ತಾಲೀಮು ಮುಗಿಸಿ ಬಂದ ನಂತರ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆ ಮೂಲಕ ಆನೆಗಳ ಶಕ್ತಿ ವೃದ್ಧಿ, ತೂಕ ಹೆಚ್ಚಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹಾಗಾಗಿ ಹಸಿರು ಕಾಳು ಸೇರಿ ವಿವಿಧ ಬಗೆಯ ವಿಶೇಷ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಸೌತೆಕಾಯಿ, ಮೂಲಂಗಿ, ಕ್ಯಾರೆಟ್, ಬೀಟ್ರೂಟ್ ಸೇರಿ ವಿವಿಧ ತರಕಾರಿಗಳನ್ನು ಬೇಯಿಸಿ ದೊಡ್ಡ ದೊಡ್ಡ ತಟ್ಟೆಯಲ್ಲಿಟ್ಟು ಉಂಡೆ ಕಟ್ಟಿ ಗಜಪಡೆಗೆ ನೀಡಲಾಗುತ್ತದೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ 2025: ಜಂಬೂ ಸವಾರಿಗಾಗಿ ತಾಲೀಮು ಆರಂಭಿಸಿದ ಗಜಪಡೆ

ಈ ಕುರಿತಾಗಿ ಟಿವಿ9ಗೆ ಡಿಸಿಎಫ್ ಡಾ.ಪ್ರಭುಗೌಡ ಹೇಳಿಕೆ ನೀಡಿದ್ದು, ದಸರಾದಲ್ಲಿ ಪಾಲ್ಗೊಳ್ಳುವ 14 ಆನೆಗಳ ಆಹಾರ ವೆಚ್ಚ 55 ರಿಂದ 60 ಲಕ್ಷ ರೂ ಆಗುತ್ತದೆ. ಆನೆಗಳನ್ನು ಅರಮನೆಯಲ್ಲಿ ರಾಯಲ್ ಆಗಿ ನೋಡಿಕೊಳ್ಳುತ್ತೇವೆ. ನಿತ್ಯ ಗಂಡಾನೆಗೆ 750 ಕೆಜಿ ಆಹಾರ, ಹೆಣ್ಣಾನೆಗೆ 450 ಕೆಜಿ ಆಹಾರ ನೀಡುತ್ತಿದ್ದೇವೆ. ಸದ್ಯ ಅರಮನೆಯಲ್ಲಿರುವ ಅಭಿಮನ್ಯು ನೇತೃತ್ವದ 9 ಆನೆಗಳು ಇದ್ದು, ಕೆಲವೇ ದಿನಗಳಲ್ಲಿ ಕಾಡಿನಿಂದ ನಾಡಿಗೆ 5 ಆನೆಗಳು ಆಗಮಿಸಲಿವೆ ಎಂದು ಅವರು ಹೇಳಿದರು.

ತಿಂಡಿಪೋತ ಭೀಮ 

ನಿತ್ಯ ಆನೆಗಳಿಗೆ ಹಸಿರು ಹುಲ್ಲು, ಭತ್ತದ ಹುಲ್ಲು, ಕಬ್ಬು, ತರಕಾರಿಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಭೀಮ ತಿಂಡಿಪೋತ. ಇನ್ನು 25 ವರ್ಷದ ಭೀಮನಿಗೆ 750 ಕೆಜಿ ಊಟ ಕೊಟ್ಟರು ಮತ್ತೆ ಬೇಕು ಎನ್ನುತ್ತಾನೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:20 am, Sun, 17 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ