ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್​ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ

ಕೇಂದ್ರ ಕಾರಾಗೃಹ ದೊಡ್ಡ ಕಾಂಪೌಂಡ್​ ಹಿಂಭಾಗ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾಗ ಅಬಕಾರಿ ಪೊಲೀಸರು ದಾಳಿ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಇನ್ನೊಂದೆಡೆ, ಲಂಚ ಪಡೆಯುತ್ತಿದ್ದ ಹೆಚ್​ಡಿ ಕೋಟಿ ಪೊಲೀಸ್ ಠಾಣೆಯ ಮಹಿಳಾ ಎಎಸ್​ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್​ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ
ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್​ ಹಿಂಭಾಗ ಗಾಂಜಾ ಮಾರಾಟಕ್ಕೆ ಯತ್ನ
Follow us
ರಾಮ್​, ಮೈಸೂರು
| Updated By: Rakesh Nayak Manchi

Updated on: Nov 23, 2023 | 8:13 AM

ಮೈಸೂರು, ನ.23: ಜಿಲ್ಲೆಯ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕೇಂದ್ರ ಕಾರಾಗೃಹ ದೊಡ್ಡ ಕಾಂಪೌಂಡ್​ ಹಿಂಭಾಗ ಗಾಂಜಾ (Ganja) ಮಾರಾಟ ವೇಳೆ ಅಬಕಾರಿ (Excise) ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಅಬಕಾರಿ ಎಸ್​ಪಿ ಪಿ.ಮಹೇಶ್ ಕುಮಾರ್ ಮಾರ್ಗದರ್ಶನಲ್ಲಿ‌ ಉಪ ನಿರೀಕ್ಷಕ ರವಿಕುಮಾರ್ ನೇತೃತ್ವದ ತಂಡದಿಂದ ಈ ದಾಳಿ ನಡೆದಿದೆ.

ದಾಳಿ ವೇಳೆ ಪೊಲೀಸರನ್ನು ಕಂಡ ಕೂಡಲೇ ಆರೋಪಿಗಳು ಬೈಕ್​ ಬಿಟ್ಟು ಪರಾರಿಯಾಗಿದ್ದು, ಬೈಕ್​ ಅನ್ನು ಜಪ್ತಿ ಮಾಡಲಾಗಿದ್ದು, ಬೈಕ್ ಮಾಲೀಕರ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ಮಹಿಳಾ ಎಎಸ್​ಐ ಲೋಕಾಯುಕ್ತ ಬಲೆಗೆ

ಮೈಸೂರು: ಲಂಚ ಸ್ವೀಕರಿಸುತ್ತಿದ್ದಾಗ ಮಹಿಳಾ ಎಎಸ್​ಐ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಕೀಲಾವತಿ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಹೆಚ್​.ಡಿ.ಕೋಟೆ ಪೊಲೀಸ್ ಠಾಣೆ ಎಎಸ್​ಐ.

ಇದನ್ನೂ ಓದು: ಕೋಲಾರದಲ್ಲಿ ಅಕ್ರಮ ಗಾಂಜಾ, ಡ್ರಗ್ಸ್​ ಕೃತ್ಯ ಹೆಚ್ಚಳ; ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಗೆ ಚಳಿ ಬಿಡಿಸಿದ ಅಬಕಾರಿ, ಪೊಲೀಸ್​ ಇಲಾಖೆ

ಕೆಂಡಗಣ್ಣ ನಾಯ್ಕ ಎಂಬುವರು ನಾಗೇಂದ್ರಗೆ 1.25 ಲಕ್ಷ ಸಾಲ ನೀಡಿದ್ದರು. ಈ ಮೊತ್ತದಲ್ಲಿ ನಾಗೇಂದ್ರ ಅವರು 25 ಸಾವಿರ ರೂಪಾಯಿ ವಾಪಸ್​​ ನೀಡಿದ್ದು, 1 ಲಕ್ಷ ರೂ. ಬಾಕಿ ಇರಿಸಿಕೊಂಡು ಕೆಂಡಗಣ್ಣ ಅವರಿಗೆ ಸತಾಯಿಸುತ್ತಿದ್ದನು. ಈ ಬಗ್ಗೆ ಕೆಂಡಗಣ್ಣ ಅವರು ಹೆಚ್​ಡಿ ಕೋಟಿ ಠಾಣೆಗೆ ದೂರು ನೀಡಿದ್ದರು.

ಆದರೆ, ಸಾಲದ ಹಣ ವಾಪಸ್​​ ಕೊಡಿಸುವುದಕ್ಕೆ ಎಎಸ್​ಐ ಶಕೀಲಾವತಿ ಅವರು ಮೂರು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕೆಂಡಗಣ್ಣ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ನಡೆದ ಟ್ರಾಪ್​ನಲ್ಲಿ ಕೆಂಡಗಣ್ಣ ಅವರಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ