AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ ವೈಷ್ಣವ್​ರನ್ನ ಭೇಟಿ ಮಾಡಿದ ಯದುವೀರ್: ಮೈಸೂರು ರೈಲ್ವೆ ಯೋಜನೆಗಳನ್ನ ತ್ವರಿತವಾಗಿ ಪೂರ್ಣಗೊಳಿಸಲು ಮನವಿ

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ರನ್ನು ಭೇಟಿ ಮಾಡಿ ಮೈಸೂರಿನ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ. ಐತಿಹಾಸಿಕ ಮೈಸೂರು ರೈಲ್ವೆ ನಿಲ್ದಾಣದ ಆಧುನೀಕರಣ ಮತ್ತು ವಿಮಾನ ನಿಲ್ದಾಣ ವಿಸ್ತರಣೆಗೆ ರೈಲ್ವೆ ಹಳಿ ಸ್ಥಳಾಂತರ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.

ಅಶ್ವಿನಿ ವೈಷ್ಣವ್​ರನ್ನ ಭೇಟಿ ಮಾಡಿದ ಯದುವೀರ್: ಮೈಸೂರು ರೈಲ್ವೆ ಯೋಜನೆಗಳನ್ನ ತ್ವರಿತವಾಗಿ ಪೂರ್ಣಗೊಳಿಸಲು ಮನವಿ
ಅಶ್ವಿನಿ ವೈಷ್ಣವ್​, ಯದುವೀರ್
ರಾಮ್​, ಮೈಸೂರು
| Edited By: |

Updated on:Apr 05, 2025 | 9:14 AM

Share

ಮೈಸೂರು, ಏಪ್ರಿಲ್​ 05: ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ರನ್ನು (Ashwini Vaishnaw) ಭೇಟಿ ಮಾಡಿರುವ ಸಂಸದ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಮೈಸೂರಿನ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ. ಐತಿಹಾಸಿಕ ಮೈಸೂರು ರೈಲ್ವೆ ನಿಲ್ದಾಣದ ಆಧುನೀಕರಣಗೊಳಿಸುವುದು ಮತ್ತು ಏರ್​​ಪೋರ್ಟ್​ ವಿಸ್ತರಣೆಗೆ ಅನುಕೂಲವಾಗುವಂತೆ ರೈಲ್ವೆ ಹಳಿ ಸ್ಥಳಾಂತರ ಬಗ್ಗೆ ಚರ್ಚೆ ಮಾಡಲಾಗಿದ್ದು, ನಮ್ಮ ಮನವಿಗೆ ಸಚಿವ ವೈಷ್ಣವ್​ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಯದುವೀರ್​ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಯದುವೀರ್, ನಿನ್ನೆ ದೇಹಲಿಯಲ್ಲಿ ಕೇಂದ್ರ ಸರ್ಕಾರದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದೆ. ಮೈಸೂರಿನಲ್ಲಿರುವ ರೈಲ್ವೆ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಹಾಗೂ ಐತಿಹಾಸಿಕ ಮೈಸೂರು ರೈಲ್ವೆ ನಿಲ್ದಾಣದ ಆಧುನೀಕರಣಗೊಳಿಸುವ ಕುರಿತು ಮತ್ತು ಮೈಸೂರಿನಲ್ಲಿ ವಿಮಾನ ನಿಲ್ದಾಣದ ವಿಸ್ತರಣೆಗೆ ಅನುಕೂಲವಾಗುವಂತೆ ರೈಲ್ವೆ ಹಳಿಗಳ ಸ್ಥಳಾಂತರ ವಿಷಯದ ಕುರಿತು ಸಚಿವರಿಗೆ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಸದರಿ ಯೋಜನೆಗಳ ತ್ವರಿತ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
ಕೋವಿಡ್ ಹಗರಣದ ವಿಸ್ತೃತ ಮಾಹಿತಿಗೆ ಮತ್ತೊಂದು‌ ಸಮಿತಿ: ಅಧಿಕಾರಿಗಳಿಗೂ ಢವಢವ
Image
ದೇವೇಗೌಡ, ಹೆಚ್​ಡಿಕೆ ಆಯ್ತು, ಇನ್ನಿಬ್ಬರು ನಾಯಕರ ಭೇಟಿಗೆ ಮುಂದಾದ ಸತೀಶ್‌
Image
ಸಿಹಿ ಸುದ್ದಿ ನೀಡಿದ ಅಮಿತ್​​ ಶಾ: ಓಲಾ-ಊಬರ್ ರೀತಿ ಸಹಕಾರಿ ಟ್ಯಾಕ್ಸಿ ಆರಂಭ
Image
Narendra Modi: ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಮೈಸೂರು ಕುಶಾಲನಗರ ಹೆದ್ದಾರಿ ಯೋಜನೆ; ಪ್ರಧಾನಿ ಮೋದಿ

ಯದುವೀರ್ ಟ್ವೀಟ್​

ನಮ್ಮ ಎಲ್ಲಾ ಬೇಡಿಕೆಗಳಿಗೆ, ಮೈಸೂರಿನ ಅಭಿವೃದ್ದಿ ಯೋಜನೆಗಳಿಗೆ ಸಹಕರಿಸಿ, ಬೆಂಬಲಿಸಿ ಅವುಗಳನ್ನು ಶೀಘ್ರ ಅನುಷ್ಠಾನಕ್ಕೆ ತರಲು ನೆರವಾಗುತ್ತಿರುವ ಸಚಿವರಿಗೆ ಈ ಮೂಲಕ ಮೈಸೂರು-ಕೊಡಗು ಜನತೆಯ ಪರವಾಗಿ ಸಂಸದ ಯದುವೀರ್ ಒಡೆಯರ್ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್ ಸಾವಿಗೆ ಸಂಸದ ಯದುವೀರ್ ಸಂತಾಪ

ಕೊಡಗು ಬಿಜೆಪಿ ಸೆಲ್ನ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ ವಿನಯ್ ಅವರ ದುರಂತ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರ ಡೇತ್ ನೋಟ್ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳಿಂದ ನಿರಂತರ ಕಿರುಕುಳ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದ್ದರಿಂದ ಅವರು ಅಪಾರ ಮಾನಸಿಕ ಒತ್ತಡದಲ್ಲಿದ್ದರು ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ಕುಶಾಲನಗರ ಹೆದ್ದಾರಿ ನಿರ್ಮಾಣ: ಕೇಂದ್ರದಿಂದ ಕರ್ನಾಟಕಕ್ಕೆ ಗುಡ್ ನ್ಯೂಸ್

ಸಣ್ಣಪುಟ್ಟ ವಿಷಯಗಳಿಗೆ ಪದೇ ಪದೇ ಎಫ್ಐಐ ದಾಖಲಾಗುವುದರಿಂದ ಕೊಡಗಿನ ಅಭಿವೃದ್ಧಿಗಾಗಿ ಸಮರ್ಪಿತವಾಗಿರುವ ಯುವ ಕಾರ್ಯಕರ್ತನ ಮೇಲೆ ಅಸಹನೀಯ ಒತ್ತಡ ಉಂಟಾಗಿದೆ. ರಾಜಕೀಯ ಸೇಡಿನ ಈ ಕೃತ್ಯವು ಅತ್ಯಂತ ಖಂಡನೀಯ ಎಂದರು.

ಯದುವೀರ್ ಟ್ವೀಟ್​

ವಿನಯ್​ಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ನಾವು ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸುತ್ತೇವೆ ಮತ್ತು ಈ ದುಃಖ ದ ಸಂಧರ್ಭದಲ್ಲಿ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಕೊಡಗಿನ ಜನರ ಸೇವೆಯಲ್ಲಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ವಿನಯ್ ಅವರ ಕುಟುಂಬ, ಸ್ನೇಹಿತರು ಮತ್ತು ಎಲ್ಲಾ ಸಹ ಕಾರ್ಯಕರ್ತರ ಜೋತೆ ಸದಾ ನಿಲ್ಲುತೇನೆ ಎಂದು ಹೇಳಿದ್ದಾರೆ.

ಕರ್ನಾಟದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:12 am, Sat, 5 April 25

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ