ಚೆಕ್ ಪೋಸ್ಟ್ ಸ್ಥಾಪಿಸದೇ ರೈಲ್ವೆ ಪೊಲೀಸರ ನಿರ್ಲಕ್ಷ್ಯ: ತರಾಟೆ ತೆಗೆದುಕೊಂಡ ಬಾಗಲಕೋಟೆ ಡಿಸಿ, ಎಸ್ಪಿ

ರಾಜ್ಯದಲ್ಲಿ ಲೋಕಸಭೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಆದರೆ ಚೆಕ್ ಪೋಸ್ಟ್ ಸ್ಥಾಪಿಸದೇ ರೈಲ್ವೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಚುನಾವಣಾ ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಧಿಡೀರ್ ಭೇಟಿ ನೀಡಿದ್ದು, ಚೆಕ್ ಪೋಸ್ಟ್ ಪರಿಶೀಲನೆ ಮಾಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಸಿದ್ಧಪ ಬಾರ್ಕಿ ಮೇಲೆ ಅಧಿಕಾರಿಗಳು ಗರಂ ಆಗಿದ್ದಾರೆ.

ಚೆಕ್ ಪೋಸ್ಟ್ ಸ್ಥಾಪಿಸದೇ ರೈಲ್ವೆ ಪೊಲೀಸರ ನಿರ್ಲಕ್ಷ್ಯ: ತರಾಟೆ ತೆಗೆದುಕೊಂಡ ಬಾಗಲಕೋಟೆ ಡಿಸಿ, ಎಸ್ಪಿ
ಬಾಗಲಕೋಟೆ ರೈಲ್ವೆ ನಿಲ್ದಾಣಕ್ಕೆ ಚುನಾವಣಾಧಿಕಾರಿಗಳ ದಿಢೀರ್ ಭೇಟಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 30, 2024 | 8:58 PM

ಬಾಗಲಕೋಟೆ, ಮಾರ್ಚ್ 30: ರಾಜ್ಯದಲ್ಲಿ ಲೋಕಸಭೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಆದರೆ ಚೆಕ್ ಪೋಸ್ಟ್ ಸ್ಥಾಪಿಸದೇ ರೈಲ್ವೆ ಪೊಲೀಸರು (railway police) ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಚುನಾವಣಾ ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಧಿಡೀರ್ ಭೇಟಿ ನೀಡಿದ್ದು, ಚೆಕ್ ಪೋಸ್ಟ್ ಪರಿಶೀಲನೆ ಮಾಡಿದ್ದಾರೆ. ಡಿಸಿ ಜಾನಕಿ, ಸಿಇಒ ಶಶಿಧರ್‌ ಕುರೆರ್‌, ಎಸ್‌ಪಿ ಅಮರನಾಥರೆಡ್ಡಿಯನ್ನು ರೈಲ್ವೆ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌, ಸಿಬ್ಬಂದಿಗೆ ಅಧಿಕಾರಿಗಳಿಂದ ತರಾಟೆ ತೆಗೆದುಕೊಂಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಸಿದ್ಧಪ ಬಾರ್ಕಿ ಮೇಲೆ ಅಧಿಕಾರಿಗಳು ಗರಂ ಆಗಿದ್ದಾರೆ.

ನೀವು ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೀರಿ ನೆನಪಿಟ್ಟುಕೊಳ್ಳಿ. ಈ ತರಹ ನಿಷ್ಕಾಳಜಿ ಮಾಡಿದರೆ ಆಗಲ್ಲ. ಇಲ್ಲೇ ಇದ್ದರೂ ಮೀಟಿಂಗ್ ಕರೆದಾಗ ಯಾಕೆ ಬರಲ್ಲ ನೀವು. ಇಲ್ಲಿಯವರೆಗೆ ಒಂದಾದರೂ ಪ್ರಕರಣ ಪತ್ತೆ ಮಾಡಿದ್ದೀರಾ ನೀವು. ಚೆಕ್ ಮಾಡಲ್ಲ ಅಂದರೆ ಎಲ್ಲಿ ಪತ್ತೆ ಮಾಡುತ್ತೀರಾ ಎಂದು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ದಾಖಲೆ ಇಲ್ಲದೆ ಸರ್ಕಾರಿ ಬಸ್​ನಲ್ಲಿ ಸಾಗಿಸುತ್ತಿದ್ದ 2 ಲಕ್ಷ ರೂ. ಹಣ ಜಪ್ತಿ

ದಾಖಲೆ ಇಲ್ಲದೆ ಸರ್ಕಾರಿ ಬಸ್​ನಲ್ಲಿ ಸಾಗಿಸುತ್ತಿದ್ದ 2 ಲಕ್ಷ ರೂ. ಹಣವನ್ನು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸರ್ಕಾರಿ ಬಸ್​ನಲ್ಲಿ ಶಿವಾನಂದ ಬುರುದ್ ಎಂಬಾತ 2 ಲಕ್ಷ ರೂ. ನಗದು ಸಾಗಿಸುತ್ತಿದ್ದ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: Lok Sabha Elections: ಚುನಾವಣಾ ಕಣದಲ್ಲಿ ಕೋಟಿ ಕೋಟಿ ಹಣ: ಈವರೆಗೆ ಸೀಜ್ ಆದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ!

ಬಳ್ಳಾರಿ ತಾಲೂಕಿನ ಹಲಕುಂದಿ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 405 ಮಿಕ್ಸರ್ ಗ್ರೈಂಡರ್‌ಗಳನ್ನು ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳಿಂದ ಲಾರಿ ಜಪ್ತಿ ಮಾಡಲಾಗಿದೆ. 5.25 ಲಕ್ಷ ರೂ. ಮೌಲ್ಯದ ಮಿಕ್ಸರ್ ಗ್ರೈಂಡರ್‌ಗಳು ಜಪ್ತಿ ಮಾಡಲಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಂತೆ ಕಂತೆ ಹಣ ಸೀಜ್

ಗದಗ; ಚೆಕ್ ಪೋಸ್ಟ್​ಗಳಲ್ಲಿ ಪೊಲೀಸ್ ಇಲಾಖೆ ಕಂತೆ ಕಂತೆ ಹಣ ಸೀಜ್ ಮಾಡುತ್ತಿದ್ದಾರೆ. ಸೂಕ್ತ ದಾಖಲೆ ಇಲ್ದೆ ಸಾಗಿಸುತ್ತಿದ್ದ ಲಕ್ಷ ಲಕ್ಷ ರೂ. ಹಣ ಮುಂಡರಗಿ ಪೊಲೀಸ್ರು ಸೀಜ್ ಮಾಡಿದ್ದಾರೆ. ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಚೆಕ್ ಪೋಸ್ಟ್​ನಲ್ಲಿ ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ: 2.83 ಕೋಟಿ ಮೌಲ್ಯದ ವಸ್ತುಗಳು ಪತ್ತೆ

ವ್ಯಕ್ತಿಯೊಬ್ಬ ಸಾರಿಗೆ ಬಸ್​ನಲ್ಲಿ ಹಣ ತಗೆದುಕೊಂಡು ಹೊರಟ್ಟಿದ್ದ ಹಗರಿಬೊಮ್ಮನಹಳ್ಳಿಯಿಂದ ಗದಗ ತೆರಳುತ್ತಿದ್ದ. ಮೂರು ಲಕ್ಷ ರೂ. ಹಣ ತಗೆದುಕೊಂಡು ಹೊರಟ್ಟಿದ್ದ ವೀರಯ್ಯ ಎಂಬಾತನನ್ನು ವಿಚಾರಣೆ ಮಾಡಿದ್ದಾರೆ. ಆದರೆ ಸೂಕ್ತ ದಾಖಲೆ ಇಲ್ದೆ ಇಲ್ಲದ ಕಾರಣ ಹಣ ಸೀಜ್ ಮಾಡಿದ್ದಾರೆ. ಪೊಲೀಸರು ಅಧಿಕಾರಿಗಳಿಂದ ಬಸ್ ಪರಿಶೀಲನೆ‌ ವೇಳೆ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:57 pm, Sat, 30 March 24

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ