ಗಣೇಶೋತ್ಸವ ಹೆಸರಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು: ಸಾರ್ವಜನಿಕರಲ್ಲಿ ಜಿ ಪರಮೇಶ್ವರ್​ ಮನವಿ

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಗಣೇಶೋತ್ಸವ ಆರಂಭಗೊಳ್ಳಲಿದೆ. ಹಾಗಾಗಿ ರಾಜ್ಯದಲ್ಲಿ ಪೊಲೀಸ್ ಭದ್ರತೆ ವಿಚಾರವಾಗಿ ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ಶಾಂತಿಯಿಂದ ಗಣೇಶೋತ್ಸವ ಆಚರಿಸೋಣ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಯಾರಾದ್ರೂ ಅಂತಹ ಪ್ರಯತ್ನ ಮಾಡಿದ್ರೆ ಕಾನೂನು ಕ್ರಮ ಆಗುತ್ತೆ ಎಂದಿದ್ದಾರೆ.

ಗಣೇಶೋತ್ಸವ ಹೆಸರಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು: ಸಾರ್ವಜನಿಕರಲ್ಲಿ ಜಿ ಪರಮೇಶ್ವರ್​ ಮನವಿ
ಗಣೇಶೋತ್ಸವ ಹೆಸರಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು: ಸಾರ್ವಜನಿಕರಲ್ಲಿ ಜಿ ಪರಮೇಶ್ವರ್​ ಮನವಿ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 15, 2024 | 3:07 PM

ತುಮಕೂರು, ಆಗಸ್ಟ್​ 15: ಗಣೇಶೋತ್ಸವ (Ganesh Chaturthi) ಹೆಸರೇಳಿಕೊಂಡು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಯಾರಾದರೂ ಅಂತಹ ಪ್ರಯತ್ನ ಮಾಡಿದರೆ ಕಾನೂನು ಕ್ರಮ ಆಗುತ್ತೆ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ (G. Parameshwara) ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ನಾನು ಮನವಿ ಮಾಡಿಕೊಳುತ್ತೇನೆ. ಶಾಂತಿಯಿಂದ ಗಣೇಶೋತ್ಸವ ಆಚರಿಸೋಣ. ಅದಕ್ಕೆ ಬೇಕಾದಂತಹ ವಾತಾವರಣ ನಾವು ತಮಗೆ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಬಾರಿ ಸೆಪ್ಟೆಂಬರ್​ನಲ್ಲಿ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಈ ಬಾರಿಯೂ ಸೆ.7ರಂದು ಗಣಪತಿಯ ಉತ್ಸವ ಪ್ರಾರಂಭ ಆಗುತ್ತೇವೆ. ನನಗೆ ವಿಶ್ವಾಸ ಇದೆ, ನಮ್ಮ ಕರ್ನಾಟಕದ ಜನತೆ ಶಾಂತಿ ಪ್ರಿಯರು. ಅಂತಹ ಘಟನೆಗಳು ನಡೆಯೋದಕ್ಕೆ ಬಿಡಲ್ಲ. ಎಲ್ಲಾ ಸಹಕಾರ ಇರಲಿ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಭಿನ್ನಮತಕ್ಕೆ ದಿನಕ್ಕೊಂದು ಆಯಾಮ: ಬಳ್ಳಾರಿ ಪಾದಯಾತ್ರೆಗೆ ಶಾಸಕಾಂಗ ಪಕ್ಷದ ನಾಯಕರಿಂದಲೇ ಬೆಂಬಲ

ರಾಜ್ಯದ ಜನರಿಗೆ ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿತ್ತು. ಯಾವುದೇ ಅಹಿತಕರವಾದ ಘಟನೆಗಳು ನಡೆಯೋದಕ್ಕೆ ನಾವು ಬಿಡಲ್ಲ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಎಲ್ಲಾ ಸಮುದಾಯಗಳು ಶಾಂತಿಯಿ‌ಂದ ಬಾಳಬೇಕೆಂದು ನಾವು ಹೇಳಿದ್ದೇವೆ.

ರಾಜ್ಯದಲ್ಲಿ ಕಳೆದ 1 ವರ್ಷದಿಂದ ಯಾವುದೇ ಕೋಮುಗಲಭೆಗಳಾಗಲಿ, ಅಹಿತಕರವಾದಂತಹ ಗಲಾಟೆಗಳನ್ನು ನಡೆಯೋದಕ್ಕೆ ರಾಜ್ಯ ಸರ್ಕಾರ ಮತ್ತು ವಿಶೇಷವಾಗಿ ಗೃಹ ಇಲಾಖೆ ಅವಕಾಶ ಕೊಟ್ಟಿಲ್ಲ. ರಾಜ್ಯದ ಜನರು ಸಹಕರಿಸಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ

ಗ್ಯಾರಂಟಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸರ್ಕಾರ ಜನ ಸಮುದಾಯಕ್ಕೆ ಬೇಕಾದ ಆಡಳಿತವನ್ನ ಕೊಡುತ್ತೇವೆ ಅಂತ ಹೇಳಿದ್ದೇವೆ. ಬಡತನ ನಿರ್ಮೂಲನೆ ಮಾಡುವ ಕಾರ್ಯಕ್ರಮಗಳನ್ನ ಹಾಕಿಕೊಳುತ್ತೇವೆ ಅಂತ ಹೇಳಿದ್ದೇವೆ. ಐದು ಗ್ಯಾರಂಟಿಗಳನ್ನ ಚುನಾವಣೆಗೂ ಮೊದಲೇ ಪ್ರಕಟಣೆ ಮಾಡಿದ್ದೇವೆ. ಅದರ ಮೂಲ ಉದ್ದೇಶ, ಬಡತನ ರೇಖೆಗಿಂತ ಕೆಳಗೆ ಇದ್ದಾರೆ ಅವರ ಬಡತನ ನಿರ್ಮೂಲನೆ ಮಾಡುವ ಪ್ರಯತ್ನ ಅಷ್ಟೇ.

ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ: ಕುಮಾರಸ್ವಾಮಿ ನಿರ್ಧಾರದ ಮೇಲೆ ಯೋಗೇಶ್ವರ್ ಭವಿಷ್ಯ

ಆರ್ಥಿಕ ಸಹಾಯ ಕೆಲವು ಸವಲತ್ತುಗಳನ್ನ ಕೊಡುವ ಮೂಲಕ ಬಡತನದ ಮೇಲೆತ್ತುವ ಕೆಲಸ ಮಾಡಿದ್ದೇವೆ. ಸಾವಿರಾರು ರೂಪಾಯಿ ಹಣವನ್ನ ಅವರಿಗಾಗಿ ಈಗಾಗಲೇ ಕೊಟ್ಟಿದ್ದೇವೆ. ಟೀಕೆ ಟಿಪ್ಪಣಿಗಳು ಬಂದಿರಬಹುದು. ವಿರೋಧ ಪಕ್ಷದ ನಾಯಕರು ಬಜೆಟ್​ನಲ್ಲಿರುವ ಹಣವನ್ನ ಪೋಲ್ ಮಾಡ್ತಿದ್ದಾರೆ ಎಂದು ಟೀಕೆ ಮಾಡ್ತಿರಬಹದು ಹಲವು ವ್ಯಾಖ್ಯಾನ ಮಾಡಿರಬಹುದು. ಆದರೆ ನಮ ಉದ್ದೇಶ ಆ ಬಡ ಜನರನ್ನ ಮೇಲೆತ್ತುವ ಉದ್ದೇಶ ಅಷ್ಟೇ. ಈಗಲು ಸಹ ಅದಕ್ಕೆ ಗೊಂದಲ ಸೃಷ್ಟಿ ಮಾಡುವ ಕೆಲಸ ನಡಿಯುತ್ತಿದೆ. ಅದು ಯಾವುದೇ ಸಂದರ್ಭದಲ್ಲಿಯೂ ಸಹ ಆ ಕಾರ್ಯಕ್ರಮಗಳನ್ನ ಸ್ಥಗಿತ ಮಾಡಲ್ಲ. ನಾವು ಯಾವ ನಿಯಮಗಳನ್ನ ಹೊಸದಾಗಿ ಸೇರಿಸುವುದಕ್ಕೆ ಹೊಗಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ