AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿ ಬದಲಾದರೂ ಅಚ್ಚರಿ ಇಲ್ಲ: ಶಾಸಕ ಸಮೃದ್ಧಿ ಮಂಜುನಾಥ್ ಸ್ಫೋಟಕ ಹೇಳಿಕೆ

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್​ ಶಾಸಕ ಸಮೃದ್ಧಿ ಮಂಜುನಾಥ್​, ಕಾಂಗ್ರೆಸ್ ಸರ್ಕಾರ ಗೊಂದಲಮಯ ವಾತಾವರಣದಲ್ಲಿದೆ. ಕಾಂಗ್ರೆಸ್ ಪಕ್ಷ​ ಮನೆಯೊಂದು ಮೂರು ಬಾಗಿಲು ಆಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾದರೂ ಅಚ್ಚರಿ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಕೆಟ್ಟ ಸರ್ಕಾರ ತೊಲಗಿ ಒಳ್ಳೆಯ ಸರ್ಕಾರ ಬರಬೇಕು ಎಂದಿದ್ದಾರೆ.

ಮುಖ್ಯಮಂತ್ರಿ ಬದಲಾದರೂ ಅಚ್ಚರಿ ಇಲ್ಲ: ಶಾಸಕ ಸಮೃದ್ಧಿ ಮಂಜುನಾಥ್ ಸ್ಫೋಟಕ ಹೇಳಿಕೆ
ಮುಖ್ಯಮಂತ್ರಿ ಬದಲಾದರೂ ಅಚ್ಚರಿ ಇಲ್ಲ: ಶಾಸಕ ಸಮೃದ್ಧಿ ಮಂಜುನಾಥ್ ಸ್ಫೋಟಕ ಹೇಳಿಕೆ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Aug 14, 2024 | 8:41 PM

Share

ಕೋಲಾರ, ಆಗಸ್ಟ್​​ 14: ಕಾಂಗ್ರೆಸ್​ ಸರ್ಕಾರ (congress govt) ಗೊಂದಲಮಯ ವಾತಾವರಣದಲ್ಲಿದೆ. ಮನೆಯೊಂದು ಮೂರು ಬಾಗಿಲಾಗಿದೆ. ಗುಂಪುಗಾರಿಕೆ ಇದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾದರೂ ಆಶ್ಚರ್ಯವಿಲ್ಲ ಎಂದು ಜೆಡಿಎಸ್​ ಶಾಸಕ ಸಮೃದ್ಧಿ ಮಂಜುನಾಥ್ (Samruddhi V Manjunath) ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕೆಟ್ಟ ಸರ್ಕಾರ ತೊಲಗಿ ಒಳ್ಳೆಯ ಸರ್ಕಾರ ಬರಬೇಕು ಎಂದು ಹೇಳಿದ್ದಾರೆ.

ಅಭಿವೃದ್ಧಿ ಕಡೆ ಗಮನ ಕೊಡಿ ಎಂದ ಶಾಸಕ ಸಮೃದ್ಧಿ ಮಂಜುನಾಥ್

ಗ್ಯಾರಂಟಿಗಳನ್ನು ತೊಲಗಿಸಿ ಅಭಿವೃದ್ಧಿ ಕಡೆ ಗಮನ ಕೊಡಿ. ಅನುದಾನ ಇಲ್ಲದೆ ಬರಿಗೈನಲ್ಲಿ ಸಂಸಾರ ಮಾಡುವಂತಾಗಿದೆ. 5 ಗ್ಯಾರಂಟಿ ಘೋಷಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ. ಜನರ ಕಿವಿಗೆ ದಾಸವಾಳ ಹೂ ಇಟ್ಟು ಅಧಿಕಾರಕ್ಕೆ ಬಂತು. ಯಾವ ಶಾಸಕರ ಕ್ಷೇತ್ರಕ್ಕೂ ಅನುದಾನ ಇಲ್ಲದಂತಾಗಿದೆ. ಮನೆಯಲ್ಲಿ ಊಟ ಇಲ್ಲದಿರುವಾಗ ಪಕ್ಕದ ಮನೆಗೆ ಕಳ್ಳತನಕ್ಕೆ ಹೋಗುವಂತಾಗಿದೆ ಪರಿಸ್ಥಿತಿ. ಅದೇ ಕಾರಣಕ್ಕೆ ಎಸ್​ಸಿಪಿ, ಟಿಎಸ್​ಪಿ ಹಣ ದುರ್ಬಳಕೆ, ವಾಲ್ಮೀಕಿ ನಿಗಮ, ಮುಡಾ ಹಗರಣದಂತ ಹಗರಣ ಆಗುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹ ಮತ್ತೊಂದು ಬಣದಲ್ಲಿ ಗುರುತಿಸಿಕೊಂಡಿರುವುದು ನನಗೆ ಸಂಬಂಧಿಸದ ವಿಷಯ: ಯದುವೀರ್

500, 600 ಕೋಟಿ ರೂ. ಅದ್ಯಾವ ಅನುದಾನ ಯಾವ ಕ್ಷೇತ್ರಕ್ಕೂ ಬಂದಿಲ್ಲ. ಕೇಂದ್ರ ಸರ್ಕಾರದ ಅನುದಾನ ಬಂದಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಕೋಟಿಗಳ ಅನುದಾನ ಬಂದಿಲ್ಲ. ಕೋಲಾರ ಶಾಸಕರು ಸುಧಾ ಮೂರ್ತಿಯವರ ಕೆರೆ ಅಭಿವೃದ್ದಿಗೆ ಕೊಟ್ಟಿರುವ ಅನುದಾನ ಸೇರಿ ಹೇಳಿರಬೇಕು. ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ: ಕಾಂಗ್ರೆಸ್​ಗೆ ರೇವಣ್ಣ ಎಚ್ಚರಿಕೆ

ಮಂಡ್ಯ ಭಾಗದ ಶಾಸಕರು ತಾವು ಹೈಲೈಟ್​ ಆಗೋದಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಬಗ್ಗೆ ಮಾತಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ದಾಖಲಾತಿಗಳನ್ನು ಇಟ್ಟುಕೊಂಡು ಮಾತನಾಡಿದರೆ ಅದಕ್ಕೆ ಉತ್ತರ ಕೊಡುತ್ತೇವೆ. ಇಲ್ಲ ಅಂದರೆ ಅದು ಎಲುಬಿಲ್ಲದ ನಾಲಿಗೆಯಂತೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.