AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರಿಕೆ: ಶತಕದತ್ತ ದಾಪುಗಾಲು, ಗ್ರಾಹಕರು ಶಾಕ್

ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ಕೆಜಿಗೆ 70 ರೂ.ನಿಂದ 80ರ ವರೆಗೆ ಕೆಲವೆಡೆ ಮಾರಾಟವಾಗುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿ ದರ ನೂರರ ಗಡಿ ತಲುಪುವ ಸಾಧ್ಯತೆ ಇದೆ. ಅಕಾಲಿಕ ಮಳೆ, ಬೆಳೆ ಹಾನಿ ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಸದ್ಯದ ದರ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರಿಕೆ: ಶತಕದತ್ತ ದಾಪುಗಾಲು, ಗ್ರಾಹಕರು ಶಾಕ್
ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರಿಕೆ
Poornima Agali Nagaraj
| Updated By: Ganapathi Sharma|

Updated on: Nov 09, 2024 | 10:32 AM

Share

ಬೆಂಗಳೂರು, ನವೆಂಬರ್ 9: ದಿನದಿಂದ ದಿನಕ್ಕೆ ಸಾಮಾನ್ಯ ಜನರ ಬದುಕು ದುಬಾರಿಯಾಗುತ್ತಿದೆ. ಅಗತ್ಯ ವಸ್ತುಗಳ‌ ಬೆಲೆ‌ ದುಬಾರಿಯಾಗುತ್ತಿದ್ದು ಬಡವರು, ಮಧ್ಯಮವರ್ಗದವರು ಜೀವನ ನಡೆಸುವುದು ಕಷ್ಟವಾಗಿ ಹೋಗಿದೆ.‌ ಈ ಮಧ್ಯೆ, ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರಿಗೆ ಕಣ್ಣಿರಿಳಿಸುತ್ತಿದೆ. ಸದ್ಯ ರಾಜ್ಯದಲ್ಲಿ‌ ಮಳೆ ತಗ್ಗಿದೆ. ಆದರೂ ಕಳೆದ ತಿಂಗಳು ಬಂದಂತಹ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರು‌ಪಾಲಾಗಿದ್ದು, ಮಳೆಯಿಂದ ರಕ್ಷಿಸಿದ ಈರುಳ್ಳಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹೀಗಾಗಿ ದರ ಏರಿಕೆಯಾಗಿದೆ. ಕೆಜಿಗೆ 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗಾ 60 ರಿಂದ 80 ರೂಪಾಯಿ ವರೆಗೆ ಏರಿಕೆಯಾಗಿದೆ.

ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?

ಕಳೆದ ಮೂರು ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ. ಮಳೆ ಇಲ್ಲದಿದ್ದರೂ ಬೆಲೆ 70 ರ ಗಡಿ ದಾಟಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಯ ಪರಿಣಾಮ ನಿರೀಕ್ಷೆಯಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಬಂದಂತಹ ಅಲ್ಪಸ್ವಲ್ಪ ಈರುಳ್ಳಿಯ ಗುಣಮಟ್ಟವೂ ಚೆನ್ನಾಗಿಲ್ಲ.‌ ಹೀಗಾಗಿ ಸದ್ಯ ಈರುಳ್ಳಿಯನ್ನು ಮಹಾರಾಷ್ಟದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.‌ ಆದರೆ, ಮಹಾರಾಷ್ಟ್ರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ‌ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

ಹೆಚ್ಚಿದ ಈರುಳ್ಳಿ ಬೇಡಿಕೆ

ಒಂದೆಡೆ ಪೂರೈಕೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಬೇಡಿಕೆಯೂ ಗಣನೀವಾಗಿ ಹೆಚ್ಚಿದೆ. ಪರಿಣಾಮವಾಗಿ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಈಗೆಷ್ಟಿದೆ ಈರುಳ್ಳಿ ಬೆಲೆ?

ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 70 ರಿಂದ 80 ರೂ. ಇದ್ದರೆ, ಸಣ್ಣಪುಟ್ಟ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟ ದರ 90 ರೂ. ಆಗಿದೆ.‌ ಮುಂದಿನ ದಿನಗಳಲ್ಲಿ 100 ರ ಗಡಿದಾಟುವ ಸಾಧ್ಯತೆಗಳಿವೆ.

ಇದನ್ನೂ ಓದಿ: ತಿಂಡಿ ಪ್ರಿಯರೆ ಎಚ್ಚರ: ಕೇರಳದಿಂದ ಆಮದು ಆಗುತ್ತಿರುವ ಈ ಆಹಾರ ಪದಾರ್ಥ ತಿಂದರೆ ನಿಮ್ಮ ಆರೋಗ್ಯಕ್ಕೆ ಅಪಾಯ

ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) 100,480 ಚೀಲ ಈರುಳ್ಳಿ ಬಂದಿದ್ದು, ಈ ಪೈಕಿ ಮಹಾರಾಷ್ಟ್ರದಿಂದ 8-10 ಲಾರಿ ಉತ್ತಮ ಗುಣಮಟ್ಟದ ಹಳೆಯ ದಾಸ್ತಾನು ಈರುಳ್ಳಿ ಬಂದಿದೆ. ಈ ಉನ್ನತ ದರ್ಜೆಯ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 7,200 ರಿಂದ 7,500 ರೂ.ಗಳ ದರದಲ್ಲಿ ಮಾರಾಟವಾಗುತ್ತಿದೆ. ಕಡಿಮೆ ಗುಣಮಟ್ಟದ ಸ್ಥಳೀಯ ಈರುಳ್ಳಿ ಕ್ವಿಂಟಲ್‌ಗೆ 1,500 ರಿಂದ 5,500 ರೂ. ವರೆಗೆ ಮಾರಾಟವಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು