ನಮ್ಮ ಸರ್ಕಾರ ಅಲ್ಲಾಡಿಸಲು ಸಾಧ್ಯವಿಲ್ಲ, ಅದು ನಿಮ್ಮ ಭ್ರಮೆ, ತಿರುಕನ‌ ಕನಸು: ಡಿಕೆ ಶಿವಕುಮಾರ್​

ರಾಮನಗರದಲ್ಲಿ ನಡೆದ ಕಾಂಗ್ರೆಸ್​​​ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಸರ್ಕಾರ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ನಿಮ್ಮ ಭ್ರಮೆ, ತಿರುಕನ ಕನಸು ಎಂದು ವಾಗ್ದಾಳಿ ಮಾಡಿದ್ದಾರೆ. 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಅಲ್ಲಾಡಿಸಲು ಸಾಧ್ಯವಿಲ್ಲ, ಅದು ನಿಮ್ಮ ಭ್ರಮೆ, ತಿರುಕನ‌ ಕನಸು: ಡಿಕೆ ಶಿವಕುಮಾರ್​
ನಮ್ಮ ಸರ್ಕಾರ ಅಲ್ಲಾಡಿಸಲು ಸಾಧ್ಯವಿಲ್ಲ, ಅದು ನಿಮ್ಮ ಭ್ರಮೆ, ತಿರುಕನ‌ ಕನಸು: ಡಿಕೆ ಶಿವಕುಮಾರ್​
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2024 | 3:43 PM

ರಾಮನಗರ, ಆಗಸ್ಟ್​ 3: ನಮ್ಮ‌ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಅದು ನಿಮ್ಮ ಭ್ರಮೆ. ತಿರುಕನ‌ ಕನಸು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ವಾಗ್ದಾಳಿ ಮಾಡಿದ್ದಾರೆ. ಮುಡಾ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಪಾದಯಾತ್ರೆಗೆ (Padayatra) ಟಕ್ಕರ್ ಕೊಡಲು ರಾಮನಗರದಲ್ಲಿ ನಡೆದ ಕಾಂಗ್ರೆಸ್​​​ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್​​, ಡಿಸೆಂಬರ್​ಗೆ ಸರ್ಕಾರ ಪಲ್ಟಿ ಮಾಡುತ್ತೇವೆ ಅಂತಾರೆ. ಅದೇನು ಹೊಡೆಯೋಕೆ ಮಡಕೆನಾ ಎಂದು ಟಾಂಗ್ ನೀಡಿದ್ದಾರೆ.

2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ

ಪಾದಯಾತ್ರೆಗೆ ಮುನ್ನ ಆಗ ನಿಮ್ಮ ಮಂತ್ರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ. ಆರ್ಟಿಜಿಎಸ್​ನಲ್ಲಿ‌ ಅಕೌಂಟ್​ಗೆ ಹಣ ಹೋಗಿದೆ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ದೇಶವನ್ನ ಆಳುವ ಶಕ್ತಿ‌ ಮತ್ತೆ ಉದ್ಭವ ಆಗುತ್ತೆ. 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುವುದು ನಿಶ್ಚಿತ: ಭವಿಷ್ಯ ನುಡಿದ ಯಡಿಯೂರಪ್ಪ

ಪಾದಯಾತ್ರೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ನಿನ್ನೆ ಜೆಡಿಎಸ್ ಬಾವುಟವೇ ಇರಲಿಲ್ಲ. ನಾವು ನಿನ್ನೆ ಮಾತಾಡಿದ್ದಕ್ಕೆ ಜೆಡಿಎಸ್ ಬಾವುಟ ಹಾಕಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಕಿಡಿ

ಬಿಜೆಪಿ ಶಾಸಕ ಯತ್ನಾಳ್, ಪತ್ರಿಕಾ ಜಾಹೀರಾತಿಗೆ ಬಿಜೆಪಿ ಉತ್ತರ ಕೊಡಬೇಕು. ಕಾವೇರಿ, ಮೇಕೆದಾಟು ನೀರಿಗೆ ಹೆಜ್ಜೆ ಹಾಕಿಲ್ಲ. ಈಗ ಕುಮಾರಸ್ವಾಮಿ ಮಂತ್ರಿ ಆಗಿದ್ದಾರೆ. ಫ್ಯಾಕ್ಟರಿ ಮಾಡ್ತೀನಿ ಅಂದಿದ್ದೀರಿ. ಉದ್ಯೋಗಿ‌ ಕೊಡಿ, ಖಾಲಿ‌ ಮಾತನಾಡಬೇಡಿ. ಚನ್ನಪಟ್ಟಣಕ್ಕೆ ಹೋಗಿದ್ದಾಗ 22 ಸಾವಿರ ಜನ ಅರ್ಜಿ ಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರ ಆಮೇಲೆ ಮಾತನಾಡುತ್ತೀನಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: BJP JDS Padayatra: ಮೈಸೂರು ಚಲೋ ಸಮಾವೇಶದ ಪೋಟೋಸ್​ ಇಲ್ಲಿವೆ

ನಾನು ಬರುವಾಗ ವಿಪರೀತ ಮಳೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ‌ ಬಂದಿದ್ದೀರಿ. ಪಾದಯಾತ್ರೆ ಮಾಡುವವರಿಗೆ ನೀವು ಪ್ರಶ್ನೆ ಕೇಳಿ. ನುಡಿದಂತೆ ನಡೆದಿದ್ದೇನೆ, ಬದುಕನ್ನ‌ ಬದಲಾವಣೆ ಮಾಡಿದ್ದೇವೆ. ಯಾವುದೇ ಈ ರೀತಿಯ ಕಾರ್ಯಕ್ರಮ ಬಿಜೆಪಿ ಮಾಡಿಲ್ಲ. ನಿಮ್ಮ‌ ಬದುಕು ನಮ್ಮ ಉಸಿರು ಎಂದರು.

ಯಡಿಯೂರಪ್ಪನವರು ಜೈಲಿಗೆ ಹೋಗಲು ಜೆಡಿಎಸ್​​ನವರು ಕಾರಣ

ಪೆನ್‌ ಡ್ರೈವ್ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ. ಪ್ರಧಾನಿ ಮೋದಿ ಬಳಿ ಯಾಕೆ ಮಾತನಾಡುತ್ತಿಲ್ಲ. ಬಿಜೆಪಿ ಯಾಕೆ ಬಾಯಿ ಮುಚ್ಚಿಕೊಂಡಿದೆ. ಬಿಚ್ಚಿ ಬಿಚ್ಚಿ ರಾಜ್ಯದ ಜನತೆಯ ಮುಂದೆ ಇಡಬೇಕು. ಭ್ರಷ್ಟಾಚಾರ ಪಿತಾಮಹ ಎಂದಿದ್ದಾರೆ. ನಿಮ್ಮ‌ ತಂದೆ ಯಾಕೆ‌ ರಾಜೀನಾಮೆ ಕೊಟ್ಟರು. ಕಣ್ಣೀರು ಹಾಕಿ ಹೋದವರು ಯಾರು? ಯಾಕೆ ರಾಜೀನಾಮೆ ಅಂಗೀಕಾರ ಮಾಡಿದರು. ಯಡಿಯೂರಪ್ಪನವರು ಜೈಲಿಗೆ ಹೋಗಲು ಜೆಡಿಎಸ್​​ನವರು ಕಾರಣ. ಈಗ ಅವರೊಂದಿಗೆ ಪಾದಯಾತ್ರೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು