AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಅಲ್ಲು ಅರ್ಜುನ್​ ಕಟೌಟ್​ಗೆ ನಿಂಬೆ ಹಣ್ಣಿನ ಹಾರದ ಜತೆ ಟಗರಿನ ತಲೆ ಪೋಣಿಸಿದ ಅಭಿಮಾನಿಗಳು

ಅಲ್ಲು ಅರ್ಜುನ್​ ಅಭಿಮಾನಿಗಳು ಕಟೌಟ್​ಗೆ ನಿಂಬೆ ಹಣ್ಣಿನ ಹಾರದ ಜತೆ ಟಗರಿನ ತಲೆಯನ್ನೂ ಪೋಣಿಸಿದ್ದಾರೆ. ಇದನ್ನು ನೋಡಿ ಜನ ದಂಗಾಗಿದ್ದಾರೆ.

ರಾಯಚೂರು: ಅಲ್ಲು ಅರ್ಜುನ್​ ಕಟೌಟ್​ಗೆ ನಿಂಬೆ ಹಣ್ಣಿನ ಹಾರದ ಜತೆ ಟಗರಿನ ತಲೆ ಪೋಣಿಸಿದ ಅಭಿಮಾನಿಗಳು
ನಿಂಬೆ ಹಣ್ಣಿನ ಹಾರಕ್ಕೆ ಟಗರಿನ ತಲೆ ಪೋಣಿಸಿದ ಅಭಿಮಾನಿಗಳು
TV9 Web
| Edited By: |

Updated on: Dec 18, 2021 | 5:40 PM

Share

ರಾಯಚೂರು: ಅಲ್ಲು ಅರ್ಜುನ್​ ನಟನೆಯ ಬಹುನಿರೀಕ್ಷಿತ ಪುಷ್ಪ ಚಿತ್ರ ಡಿಸೆಂಬರ್ 17ರಂದು ಬಿಡುಗಡೆಯಾಗಿದೆ. ತೆಲುಗು ಮಾತ್ರವಲ್ಲದೆ ಕನ್ನಡದಲ್ಲೂ ಚಿತ್ರ ತೆರೆಕಂಡಿದೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಕ್ಯೂಟ್​ ಆಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಚಂದನ ಕಳ್ಳ ಸಾಗಾಣಿಕೆಯ ಕಥಾಹಂದರ ಹೊಂದಿರುವ ಪುಷ್ಪ ಚಿತ್ರಕ್ಕೆ ತಕ್ಕಮಟ್ಟಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ನಡುವೆ ರಾಯಚೂರಿನಲ್ಲಿ ಅಲ್ಲು ಅರ್ಜುನ್​ ಫ್ಯಾನ್ಸ್ ಅಭಿಮಾನ ಕಂಡು ಥಿಯೇಟರ್​ಗೆ ಬಂದ ಜನರು ಶಾಕ್​ ಆಗಿದ್ದಾರೆ. ಪುಷ್ಪ ಚಿತ್ರದ ನಿನ್ನೆ ತೆರೆಕಂಡಿದ್ದು ಅಲ್ಲು ಅರ್ಜುನ್​ ಅಭಿಮಾನಿಗಳು ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದ ಮುಂದೆ ದೊಡ್ಡದಾಗಿ ಕಟೌಟ್ ಮಾಡಿ ಹಾಕಿದ್ದಾರೆ. ಇದಕ್ಕೆ ಅಷ್ಟೇ ಉದ್ದದ ನಿಂಬೆ ಹಣ್ಣಿನ ಹಾರವನ್ನು ಹಾಕಿದ್ದಾರೆ. ಅಷ್ಟೇ ಆಗಿದ್ದರೆ ಜನ ಶಾಕ್​ ಆಗುತ್ತಿರಲಿಲ್ಲ. ಆದರೆ ಹಾರದ ತುದಿಗೆ ಟಗರಿನ ತಲೆ ಪೋಣಿಸಿದ್ದಾರೆ. ಟಗರಿನ ತಲೆ ಕಡಿದು ಲಿಂಬೆ ಹಾರಕ್ಕೆ ಪೋಣಿಸಿದ ಅಲ್ಲು ಅರ್ಜುನ್ ಪ್ಯಾನ್ಸ್ ನ ಹುಚ್ಚು ಅಭಿಮಾನ ಕಂಡು ಜನ ದಂಗಾಗಿದ್ದಾರೆ.

ಪುಷ್ಪ ಸಿನಿಮಾ ನೀರೀಕ್ಷಿತ ಮಟ್ಟದಲ್ಲಿ ವಿಮರ್ಶೆ ಪಡೆಯಲಿಲ್ಲ. ಚಿತ್ರ ನೋಡಿದವರು ಸಮಯ ದೀರ್ಘವಾಯಿತು ಎಂದು ಉದ್ಘರಿಸಿದ್ದಾರೆ. ತಮಿಳುನಾಡಿನಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಪುಷ್ಪಕ್ಕೆ ಪೈರಸಿ ಕಾಟವೂ ತಗುಲಿದೆ. ಇದರಿಂದ ಬಾಕ್ಸ್​ಆಫೀಸ್​ ಕಲೆಕ್ಷನ್​ ಕೂಡ ಕುಸಿದಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 10 ಕೋಟಿ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಪುಷ್ಪ ಚಿತ್ರದ ಮೊದಲ ದಿನದ ಕಲೆಕ್ಷನ್​ ಕೇವಲ 4 ಕೋಟಿ ಮಾತ್ರ ಆಗಿತ್ತು.

ಪಕ್ಕಾ ಹಳ್ಳಿ ಹುಡುಗನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್​ ಲುಕ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕರ್ನಾಟಕ ಸೇರಿದಂತೆ ತಮಿಳುನಾಡಿನಲ್ಲಿಯೂ ಚಿತ್ರದ ಬಗ್ಗೆ ಅಂದುಕೊಂಡಷ್ಟು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಇದನ್ನೂ ಓದಿ:

ತಗ್ಗಿದ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಕಲೆಕ್ಷನ್; ಬಾಕ್ಸ್​ ಆಫೀಸ್​ ಗಳಿಕೆ​ ಬಗ್ಗೆ ಇಲ್ಲಿದೆ ಮಾಹಿತಿ

Follow Us
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ