ಸುಮ್ಮನಿರುವ ಮುಸಲ್ಮಾನರನ್ನ ಕಂಟ್ರೋಲ್ ಮಾಡೋದೇ ಕಷ್ಟ, ಅಂಥದ್ರಲ್ಲಿ ಕೈಯಲ್ಲಿ ಶಸ್ತ್ರ ಇರೋ ಮುಸಲ್ಮಾನರನ್ನ ತಡಿಯಲಿಕ್ಕೆ ಆಗುತ್ತಾ? -ಚಕ್ರವರ್ತಿ ಸೂಲಿಬೆಲೆ

ರಾಯಚೂರಿನಲ್ಲಿ ನಡೆದ ಉಘೆ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪಿಎಫ್​​ಐ ಸಂಘಟನೆ ಮುಸ್ಲೀಂ ಸಮುದಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಸುಮ್ಮನಿರುವ ಮುಸಲ್ಮಾನರನ್ನ ಕಂಟ್ರೋಲ್ ಮಾಡೋದೇ ಕಷ್ಟ, ಅಂಥದ್ರಲ್ಲಿ ಕೈಯಲ್ಲಿ ಶಸ್ತ್ರ ಇರೋ ಮುಸಲ್ಮಾನರನ್ನ ತಡಿಯಲಿಕ್ಕೆ ಆಗುತ್ತಾ? -ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ
TV9kannada Web Team

| Edited By: Ayesha Banu

Sep 25, 2022 | 10:02 AM

ರಾಯಚೂರು: ದೇಶಾದ್ಯಂತ ಪಿಎಫ್​​ಐ (PFI) ಕಚೇರಿಗಳ ಮೇಲೆ ಎನ್​ಐಎ(NIA) ದಾಳಿ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರಿನಲ್ಲಿ ನಡೆದ ಉಘೆ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ ನಮಗೆ ಗೊತ್ತಿಲ್ಲದ ರೀತಿ ನಮ್ಮ ಸುತ್ತಲೂ ಷಡ್ಯಂತ್ರ ನಡೀತಿದೆ ಎಂದು ಪಿಎಫ್​​ಐ ಸಂಘಟನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಮುಸ್ಲೀಂ ಸಮುದಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಪಿಎಫ್​​ಐ ಸಂಘಟನೆ ಮುಖ್ಯಸ್ಥ 24 ಗಂಟೆ ಸಮಯ ನೀಡಿದ್ದ. ಜೈಲಿನಿಂದ ಎಲ್ಲರನ್ನು ಬಿಡುಗಡೆ ಮಾಡದಿದ್ರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಬಸ್​ಗಳಿಗೆ ಕಲ್ಲು ಹೊಡೆಯುತ್ತೇವೆ ಅಂತಾ ಬೆದರಿಕೆ ಹಾಕಿದ್ದ. ಆಶ್ಚರ್ಯ ಅಂದ್ರೆ 24 ಗಂಟೆಯಾದ್ರೂ ಬಿಡುಗಡೆ ಮಾಡಲಿಲ್ಲ. ಯಾರು ಕೂಡ ಪ್ರತಿಭಟನೆ ಮಾಡಲಿಲ್ಲ. ಕೇರಳದಲ್ಲಿ ಪ್ರತಿಭಟನಾಕಾರರನ್ನು ಸ್ಥಳೀಯರೇ ಹೊಡೆದಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಹೋದಾಗ ಪಿಎಫ್​ಐ ಮುಖಂಡರ ವಿರುದ್ಧ ವ್ಯಾಪಾರಸ್ಥರೇ ತಿರುಗಿ ಬಿದ್ದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.

PFI ಕಚೇರಿಗಳ ಮೇಲೆ ಎನ್​ಐಎ ದಾಳಿ ಪ್ರಕರಣದ ಬಗ್ಗೆ ಮೊದಲು ಪ್ರತಿಕ್ರಿಯಿಸಿದ್ದೆ ಪಸ್ಮಂಡಾ ಮುಸಲ್ಮಾನರು. ಪಸ್ಮಂಡಾ ಅಂದರೆ ಮುಸಲ್ಮಾನರಲ್ಲಿರುವ ದಲಿತ ಸಮುದಾಯ. ಪಿಎಫ್​ಐನಿಂದ ನಮ್ಮ ಹೆಸರು ಹಾಳಾಗಿದೆ ಅಂತಾ ಹೇಳಿದ್ದಾರೆ. ನಮ್ಮ ಬೆಂಬಲವಿಲ್ಲ, PFI ಬ್ಯಾನ್ ಮಾಡಿ ಅಂತಲೂ ಹೇಳಿದ್ದಾರೆ. ಟರ್ಕಿಯಿಂದ ಪ್ರತಿವರ್ಷ ನೂರಾರು ಕೋಟಿ ಹಣ ಬರುತ್ತೆ. ಬೇರೆ ಬೇರೆ ಅಕೌಂಟ್​​ಗಳಿಗೆ ಕೋಟ್ಯಂತರ ಹಣ ಜಮೆ ಆಗ್ತಿದೆ. ಒಂದೇ ದಿನ ಏಕಕಾಲದಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಮಗೆ ಗೊತ್ತಿಲ್ಲದ ರೀತಿ ನಮ್ಮ ಸುತ್ತಲೂ ಷಡ್ಯಂತ್ರ ನಡೀತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ನಾಗರಿಕ ಸನ್ಮಾನ: ಸಿದ್ಧತೆ ಚುರುಕು, ಶೆಟ್ಟರ್​ ಹೆಸರು ಕೈಬಿಟ್ಟಿದ್ದಕ್ಕೆ ಬಿಜೆಪಿಯಲ್ಲಿ ಅಪಸ್ವರ

ಹೋರಾಟಗಾರರ ವಿರುದ್ಧ ಸೂಲಿಬೆಲೆ ಕಿಡಿ

ಇನ್ನು ಇದೇ ವೇಳೆ ಕನ್ನಡ ಹೋರಾಟಗಾರರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರ ಹಾಕಿದ್ದಾರೆ. ಎಲ್ಲೊ ಬೆಂಗಳೂರಿನಲ್ಲಿ ಕೂತು ಕನ್ನಡ ಹೋರಾಟಗಾರರು ಅಂತ ಕರೆಸಿಕೊಳ್ಳೊರೂ ಬೀದರ್ ಗೆ ಹೋಗಬೇಕು. ಓರ್ವ ಸ್ವಾಮಿಜಿ ಮಠದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ, ಒಳಗಡೆ ಕನ್ನಡ ಮಿಡಿಯಮ್ ಸ್ಕೂಲ್‌ ನಡೆಸಿದ್ರು. ಈ ಮೂಲಕ ಇವತ್ತಿನ ವರೆಗೆ ಕನ್ನಡ ಉಳಿಸೊ ಪ್ರಯತ್ನ ಮಾಡಿದ್ರು. ಅದು ಕನ್ನಡ ಉಳಿಸೋ ನಿಜವಾದ ಹೋರಾಟದ ಸ್ವರೂಪ. ಕನ್ನಡ ಹೋರಾಟಗಾರರಲ್ಲ, ವೋಲಾಟಗಾರರು ಎಂದ ವ್ಯಂಗ್ಯವಾಡಿದ್ದಾರೆ.

ಕೆಲವು ಕನ್ನಡ ಹೋರಾಟಗಾರರು ಎಷ್ಟು ನೀಚ ಮಟ್ಟಕ್ಕೆ ಬಂದಿದ್ದಾರೆ ಅಂದ್ರೆ, ಸರ್ದಾರ್ ಪಟೇಲ್ರು ಗುಜರಾತ್ ನವ್ರು ಅವರ ಬಗ್ಗೆ ಮಾತಾಡ್ತಿರಾ ಅಂತಾರೆ. ಅವರು ಕಲ್ಯಾಣ ಕರ್ನಾಟಕ ವಿಮೋಚನೆ ಮಾಡಿದ್ದು, ಗುಜರಾತ್ ಚೆನ್ನಾಗಿರ್ಲಿ ಅಂತಲ್ಲ. ಭಾರತ ಚನ್ನಾಗಿರ್ಲಿ ಅಂತ ಎಂದು ಸರ್ದಾರ್ ವಲ್ಲಭ ಭಾಯ್ ಪಟೇಲ್ ಕುರಿತು ಹೇಳೊ ವೇಳೆ ಕನ್ನಡ ಹೋರಾಟಗಾರರ ವಿರುದ್ಧ ಸೂಲಿಬೆಲೆ ಕಿಡಿಕಾರಿದ್ದಾರೆ.

ಮುಸ್ಲೀಂ ಸಮುದಾಯದ ವಿರುದ್ಧ ವ್ಯಂಗ್ಯವಾಡಿದ ಸೂಲಿಬೆಲೆ

ಇತಿಹಾಸದ ಬಗ್ಗೆ ವಿವರಿಸುವ ವೇಳೆ ಒಂದು ಸಮುದಾಯದ ವಿರುದ್ಧ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ. ಸುಮ್ಮನಿರೊ ಮುಸಲ್ಮಾನರನ್ನ ಕಂಟ್ರೋಲ್ ಮಾಡೋದೇ ಕಷ್ಟ. ಅಂಥದ್ರಲ್ಲಿ ಕೈಯಲ್ಲಿ ಶಸ್ತ್ರ ಇರೋ ಮುಸಲ್ಮಾನರನ್ನ ತಡಿಯಲಿಕ್ಕೆ ಆಗುತ್ತಾ? ಎಂದರು. ಇದನ್ನೂ ಓದಿ: ಕೇರಳದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆರ್ಯಾಡನ್ ಮುಹಮ್ಮದ್ ನಿಧನ

ಇನ್ನು ಇದೇ ವೇಳೆ, ಸಾವರ್ಕರ್ ಕುರಿತು ವ್ಯಂಗ್ಯವಾಡಿದೋರಿಗೆ ಯಾವುದರಲ್ಲಿ ಹೊಡಿಬೇಕು? 11 ವರ್ಷ ಅಂಡಮಾನ್ ಜೈಲಿನಲ್ಲಿ ಕತ್ತಲೆ ಕೋಣೆಯಲ್ಲಿದ್ರು. ಅವರು ಹುಚ್ಚರಾಗ್ಲಿ ಅಂತ ಬ್ರಿಟಿಷರು ಅಂದುಕೊಂಡ್ರು ಅದು ಆಗ್ಲಿಲ್ಲ. ಆದ್ರೆ ಬುಲ್ ಬುಲ್ ಹಕ್ಕಿ ಅಲ್ಲಿ ಗೂಡು ಕಟ್ಟಿಕೊಂಡಿತ್ತು. ನನಗೆ ಮಾತಾಡಲು ಜನರೇ ಇರ್ಲಿಲ್ಲ. ಹೀಗಾಗಿ ನಾನೂ ಆ ಬುಲ್ ಬುಲ್ ಹಕ್ಕಿ ಜೊತೆ ಮಾತಾನಾಡ್ತಿದ್ದೆ, ಕಣ್ಣೀರು ಹಾಕಿದ್ದೆ. ನನ್ನ ಕವನಗಳನ್ನ ಅವುಗಳಿಗೆ ಹೇಳ್ತಿದ್ದೆ. ನಮ್ಮ ದೇಶಕ್ಕೆ ಹೋಗಿ, ನಮ್ಮೋರಿಗೆ ಹೇಳು. ನಮ್ಮೋರಿಗೆ ಜಾಗೃತರಾಗಲು ಹೇಳು ಅಂತ ಹೇಳುತ್ತಿದ್ದೆ ಅಂತ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇಂಥ ಕಲ್ಪನಾ ಲೋಕದಲ್ಲಿ ಇಡೀ ದೇಶ ಸುತ್ತಿತ್ತಿದ್ದೆ. ಹೀಗಂತ ಕಲ್ಪನಾ ಲೋಕದ ಬಗ್ಗೆ ಬರೆದ್ರೆ ಆಡಿಕೊಳ್ತಾರೆ. ಅವರಿಗೆ ಯಾವುದರಲ್ಲಿ ಹೊಡಿಬೇಕು ಎಂದು ಸೂಲಿಬೆಲೆ ಪ್ರಶ್ನಿಸಿದ್ರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada