ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಪೋಸ್ಟ್; ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾ ಸಸ್ಪೆಂಡ್
ರಾಷ್ಟ್ರನಾಯಕನ ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನ ಬರೆದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಾಟ್ಸಾಪ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿದಕ್ಕೆ ಸನಾವುಲ್ಲಾರನ್ನು ಅಮಾನತ್ತು ಮಾಡಿ ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಆದೇಶ ನೀಡಿದ್ದಾರೆ.
ರಾಯಚೂರು: ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ. ರಾಷ್ಟ್ರನಾಯಕನ ಸ್ವಾಮಿ ವಿವೇಕಾನಂದರ (Swami Vivekananda) ಬಗ್ಗೆ ಅವಹೇಳನಕಾರಿ ಲೇಖನ ಬರೆದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಾಟ್ಸಾಪ್ ಗ್ರೂಪ್ನಲ್ಲಿ (Whats app group) ಪೋಸ್ಟ್ ಮಾಡಿದಕ್ಕೆ ಸನಾವುಲ್ಲಾರನ್ನು ಅಮಾನತ್ತು(Suspend) ಮಾಡಿ ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಆದೇಶ ನೀಡಿದ್ದಾರೆ.
ಇದೇ ಜನವರಿ 12ರ ವಿವೇಕಾನಂದರ 150 ನೇ ಜಯಂತಿಯಂದು ಸನಾವುಲ್ಲಾ ಪೋಸ್ಟ್ ಮಾಡಿದ್ದರು. ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ, ಬದುಕಿನ ಬಗ್ಗೆ ಅವಹೇಳನ ಮಾಡಿದ್ದು, ಸರ್ಕಾರಿ ನೌಕರನಾಗಿ ರಾಷ್ಟ್ರನಾಯಕನ ಬಗ್ಗೆ ಅವಹೇಳನ ಮಾಡಿದ ಆರೋಪದಡಿ ಅಮಾನತು ಮಾಡಲಾಗಿದೆ.
ಬೆಂಗಳೂರು: ಸಿಎಂಗೆ ಪತ್ರದ ಮೂಲಕ ದೂರು ನೀಡಿದ ದಿನೇಶ್ ಗೂಳಿಗೌಡ
ಕೆಮಿಕಲ್ ಫ್ಯಾಕ್ಟರಿ ವಿರುದ್ಧ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿಯ ಕಾರೇಕಟ್ಟಿ ಬಳಿ ಇರುವ ಕೆಮಿಕಲ್ ಫ್ಯಾಕ್ಟರಿಯಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ. ವಿಷಾನಿಲದಿಂದ ಜನ, ಜಾನವಾರುಗಳಿಗೆ ಅನಾರೋಗ್ಯಕ್ಕೀಡುತ್ತಿದ್ದಾರೆ. ಬೆಳೆಗಳು ನಾಶವಾಗುತ್ತಿವೆ. ರೈತರಿಗೆ ಕಾರ್ಖಾನಿಯಿಂದಲೇ ನಷ್ಟಪರಿಹಾರ ಕೊಡಿಸಬೇಕು. ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ದಿನೇಶ್ ಗೂಳಿಗೌಡ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೊಡಗು: ಕಡತ ವರ್ಗಾವಣೆ ಮಾಡಿಕೊಡಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಶಿರಸ್ತೆದಾರ ಎಸಿಬಿ ಬಲೆಗೆ
ಕಡತ ವರ್ಗಾವಣೆ ಮಾಡಿಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಶಿರಸ್ತೆದಾರನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದ್ದು, ಶಿರಸ್ತೆದಾರ್ ವಿನೋದ್ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೆಳೆ ಸೆರೆ ಹಿಡಿಯಲಾಗಿದೆ. ಅಂದಗೋವೆ ಬೆಳ್ಳಿಯಪ್ಪ ಎಂಬುವರಿಂದ ಕಚೇರಿ ಬಳಿ ಕ್ಯಾಂಟೀನ್ನಲ್ಲಿ ಲಂಚ ಸ್ವೀಕರಿಸುವಾಗ ಶಿರಸ್ತೆದಾರ್ ವಿನೋದ್ ಸೆರೆಸಿಕ್ಕಿದ್ದಾರೆ.
ಸಿಎಂ ನಿವಾಸದ ಬಳಿ ಪೊಲೀಸರಿಂದ ಗಾಂಜಾ ಮಾರಾಟ: ಸರಿಯಾದ ತನಿಖೆ ನಡೆಸಿಲ್ಲವೆಂದು ಅಧಿಕಾರಿಗಳಿಬ್ಬರ ಅಮಾನತು
ಸಿಎಂ ನಿವಾಸದ ಬಳಿ ಪೊಲೀಸರಿಂದ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆರ್.ಟಿ.ನಗರ ಠಾಣೆ ಇನ್ಸ್ಪೆಕ್ಟರ್ ಅಶ್ವತ್ಥ್ಗೌಡ, ಆರ್.ಟಿ.ನಗರ ಠಾಣೆ ಸಬ್ಇನ್ಸ್ಪೆಕ್ಟರ್ ವೀರಭದ್ರ ಅವರನ್ನು ಸರಿಯಾದ ತನಿಖೆ ನಡೆಸಿಲ್ಲ ಎಂದು ಅಮಾನತು ಮಾಡಲಾಗಿದೆ. ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ.
ಇಂತಹ ಸಿಬ್ಬಂದಿಗಳ ಪೂರ್ವ ಪರ ಪರಿಶೀಲನೆ ನಡೆಸದೆ ಸಿಎಂ ನಿವಾಸಕ್ಕೆ ನಿಯೋಜನೆ ಮಾಡಿದ್ದ ಕಾರಣ ಡಿಸಿಪಿ ಸೌತ್ ಈಸ್ಟ್ ಶ್ರೀನಾಥ್ ಜೋಶಿಗೆ ಕಮಿಷನರ್ ಮೆಮೊ ನೀಡಿದ್ದಾರೆ. ಸಿಎಂ ನಿವಾಸದ ಭದ್ರತೆಯಯಲ್ಲಿ ಹಾಗೂ ನಿಯೋಜಿತ ಸಿಬ್ಬಂದಿಗಳ ಮೇಲೆ ನಿಗಾ ಇರಿಸುವುದು ಹಾಗೂ ಸರಿಯಾದ ರೀತಿಯಲ್ಲಿ ಭದ್ರತೆ ನೀಡದಿರುವ ಕಾರಣ ವಿಐಪಿ, ಡಿಸಿಪಿ ಮಂಜುನಾಥ್ ಬಾಬುಗೆ ಮೆಮೊ ನೀಡಿದ್ದಾರೆ.
ಇದನ್ನೂ ಓದಿ: ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತ್ತು ಮಾಡುವಂತೆ ಒತ್ತಾಯ; ಶಾಲಾ ಕೊಠಡಿಗೆ ಬೀಗ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
ವಸತಿ ಯೋಜನೆಯಡಿ ಅಕ್ರಮಗಳ ಕರಾಮತ್ತು; ಗ್ರಾಮ ಪಂಚಾಯತಿ ಪಿಡಿಓಗಳ ಅಮಾನತ್ತು
Published On - 6:02 pm, Wed, 19 January 22