ಕಳಪೆ ಕಾಲುವೆ ಕಾಮಗಾರಿ ಆರೋಪ, 4 ದಶಕಗಳ ಕನಸು ನನಸಾದ್ರೂ ರೈತರಲ್ಲಿಲ್ಲ ಸಂತಸ
ರಾಯಚೂರು: ದೇಶದ ಬೆನ್ನೆಲಬು ರೈತನಿಗೆ ಕೃಷಿಗಾಗಿ ನೀರು ಅಗತ್ಯ. ಆದ್ರೆ ಈ ನೀರು ಪೂರೈಸುವ ಕಾಲುವೆಯ ದುರಸ್ತಿ ಕಾರ್ಯದಲ್ಲಿ ಗೋಲ್‌ಮಾಲ್ ನಡೆಯತ್ತಿದೆ ಎಂಬ ಅನುಮಾನ ರಾಯಚೂರಿನ ರೈತರ ನಿದ್ದೆಗೆಡಿಸಿದೆ. ಹೌದು, ರೈತರ ಬದುಕು ಹಸುನಾಗಿಸುವ ಕಾಲುವೆಯ ದುರಸ್ಥಿಗೆ ನಾಲ್ಕು ದಶಕಗಳ ನಂತರ ಚಾಲನೆ ಸಿಕ್ಕಿದೆ. ಈದೀಗ ಕಾಲುವೆಯ ದುರಸ್ತಿ ಕೆಲಸ ಭರದಿಂದ ಸಾಗಿದೆ. ಆದ್ರೆ ದುರಸ್ತಿ ಕೆಲಸ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಜಿಲ್ಲೆಯ ರೈತರು ರೊಚ್ಚಿಗೆದ್ದಿದ್ಧಾರೆ. ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ ರಾಯಚೂರು ಜಿಲ್ಲೆ […]
ರಾಯಚೂರು: ದೇಶದ ಬೆನ್ನೆಲಬು ರೈತನಿಗೆ ಕೃಷಿಗಾಗಿ ನೀರು ಅಗತ್ಯ. ಆದ್ರೆ ಈ ನೀರು ಪೂರೈಸುವ ಕಾಲುವೆಯ ದುರಸ್ತಿ ಕಾರ್ಯದಲ್ಲಿ ಗೋಲ್‌ಮಾಲ್ ನಡೆಯತ್ತಿದೆ ಎಂಬ ಅನುಮಾನ ರಾಯಚೂರಿನ ರೈತರ ನಿದ್ದೆಗೆಡಿಸಿದೆ.
ಹೌದು, ರೈತರ ಬದುಕು ಹಸುನಾಗಿಸುವ ಕಾಲುವೆಯ ದುರಸ್ಥಿಗೆ ನಾಲ್ಕು ದಶಕಗಳ ನಂತರ ಚಾಲನೆ ಸಿಕ್ಕಿದೆ. ಈದೀಗ ಕಾಲುವೆಯ ದುರಸ್ತಿ ಕೆಲಸ ಭರದಿಂದ ಸಾಗಿದೆ. ಆದ್ರೆ ದುರಸ್ತಿ ಕೆಲಸ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಜಿಲ್ಲೆಯ ರೈತರು ರೊಚ್ಚಿಗೆದ್ದಿದ್ಧಾರೆ.
ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ ರಾಯಚೂರು ಜಿಲ್ಲೆ ದೇವದುರ್ಗ ಮತ್ತು ರಾಯಚೂರು ತಾಲ್ಲೂಕಿನ ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ. ಹೀಗಾಗಿ ಸರ್ಕಾರ ಈ ಕಾಲುವೆ ದುರಸ್ತಿಗೆ 900 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಸಂಬಂಧ ಗುತ್ತಿಗೆ ಪಡೆದ ಏಜೆನ್ಸಿ ದುರಸ್ತಿ ಕೆಲಸ ಆರಂಭಿಸಿದೆ. ಆದ್ರೆ ರೈತರಲ್ಲಿ ಸಂತಸಕ್ಕೆ ಕಾರಣವಾಗಬೇಕಿದ್ದ ಈ ಕಾಮಗಾರಿ ಕೆಲಸ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಇದಕ್ಕೆ ಕಾರಣ ಕಾಲುವೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ.
40 ವರ್ಷಗಳ ನಂತರ ಶುರುವಾದ ಕಾಮಗಾರಿ ಕಳೆದ 40 ವರ್ಷದಿಂದ ದುರಸ್ತಿ ಕಾಣದ ನಾರಾಯಣಪುರ ಬಲದಂಡೆ ಕಾಲುವೆಯನ್ನ ಈದೀಗ ದುರಸ್ತಿ ಮಾಡಲಾಗ್ತಿದೆ. ಸುಮಾರು 95 ಕಿಲೋ ಮೀಟರ್ ಉದ್ದ ನಡೆಯಬೇಕಿರುವ ಕಾಮಗಾರಿ ಕಳಪೆ ಗುಣಮಟ್ಟದಲ್ಲಿದೆಯನ್ನುವುದು ರೈತರನ್ನು ರೊಚ್ಚಿಗೆಬ್ಬಿಸಿದೆ. ಈಗಾಗಲೇ ಹತ್ತಾರು ಬಾರಿ ಕಾಲುವೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾದ ಉದಾಹರಣೆಗಳಿವೆ. ಹೀಗಾಗಿ ನಾಲ್ಕು ದಶಕಗಳ ನಂತರ ನಡೆಸಲಾಗುತ್ತಿರುವ ಕಾಲುವೆ ದುರಸ್ತಿ ಕಾಮಗಾರಿ ಒಳ್ಳೆಯ ಗುಣಮಟ್ಟದಿಂದ ಮಾಡಬೇಕೆನ್ನುವುದು ರೈತರ ಒತ್ತಾಸೆ.
ಅಗತ್ಯ ಕ್ರಮದ ಭರವೆ ನೀಡಿದ ಲಕ್ಷ್ಮಣ ಸವದಿ ಆದ್ರೆ ಗುತ್ತಿಗೆ ಪಡೆದ ಏಜೆನ್ಸಿ ದುರಸ್ತಿ ನೆಪದಲ್ಲಿ ಬೇಕಾಬಿಟ್ಟಿ ಕೆಲಸ ಮಾಡಿ ಕೋಟಿ ಕೋಟಿ ಲೂಟಿಗೆ ಸ್ಕೆಚ್ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಅವರನ್ನ ಕೇಳಿದ್ರೆ, ಅವರು ಈ ವಿಷಯವನ್ನ ನೀರಾವರಿ ಸಚಿವರ ಗಮನಕ್ಕೆ ತರುತ್ತೇನೆ. ಕಳಪೆ ಕಾಮಗಾರಿ ಮಾಡಿದ್ರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ. ಹೀಗಾಗಿ ಸರ್ಕಾರ ಅದ್ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತೆ ಅನ್ನೋದನ್ನ ರೈತರು ಕಾದು ನೋಡುತ್ತಿದ್ದಾರೆ. -ಸಿದ್ದು ಬಿರಾದಾರ್
Published On - 3:23 pm, Wed, 24 June 20