ರಾಯಚೂರು: ಮಟನ್ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ದುರ್ಮರಣ; ಆಗಿದ್ದೇನು?
ಅದು ತಾವಾಯ್ತು, ತಮ್ಮ ಕೆಲಸ ಆಯ್ತು ಎಂದು ಜೀವನ ನಡೆಸುತ್ತಿದ್ದ ಕುಟುಂಬ. ಯಾರೋಬ್ಬರ ತಂಟೆಗೂ ಹೋಗದ ಆ ಅಮಾಯಕ ಕುಟುಂಬ, ಏಕಾಏಕಿ ಸಾವಿನ ಮನೆ ಸೇರಿದೆ. ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟರೆ, ಒಬ್ಬ ಮಗಳು ಸಾವು ಮದುಕಿನ ಮಧ್ಯೆ ಹೋರಾಡುತ್ತಿದ್ದು, ಕೋಮಾದಲ್ಲಿದ್ದಾಳೆ. ಹಾಗದರೆ ಆಗಿದ್ದೇನು?
ರಾಯಚೂರು, ಆ.02: ಇಂದು(ಶುಕ್ರವಾರ) ಇಡೀ ರಾಯಚೂರು(Raichur) ಬೆಚ್ಚಿ ಬೀಳಿಸೊ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭೀಮಣ್ಣ ಎನ್ನುವವರ ಒಂದೇ ಕುಟುಂದ ನಾಲ್ವರು ಮಟನ್-ಚಪಾತಿ ಊಟ ಮಾಡಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. 60 ವರ್ಷದ ಭೀಮಣ್ಣ, ಪತ್ನಿ ಈರಮ್ಮ(50), ಮಗಳಾದ ಪಾರ್ವತಿ (17) ಹಾಗೂ ಮಗ ಮಲ್ಲೇಶ್(19)ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗಳು ಮಲ್ಲಮ್ಮ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಆಗಿದ್ದೇನು?
ಭೀಮಣ್ಣ ಹಾಗೂ ಕುಟುಂಬಸ್ಥರು ಇದೇ ಬುಧವಾರ ಮನೆಯಲ್ಲಿ ಮಟನ್, ಚಪಾತಿ, ಚವಳೆಕಾಯಿ ಪಲ್ಯ ಅಡುಗೆ ಮಾಡಿದ್ದರು. ಬಳಿಕ ಎಲ್ಲಾ ಐದು ಜನ ಮನೆಯಲ್ಲಿ ಊಟ ಮುಗಿಸಿ, ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದರು. ಭೀಮಣ್ಣಗೆ ವಯಸ್ಸಾಗಿದ್ದರಿಂದ ಆತ ಮನೆಯಲ್ಲೇ ಇರುತ್ತಿದ್ದನಂತೆ. ಆದ್ರೆ, ಹೊಲಕ್ಕೆ ಹೋಗಿದ್ದ ಭೀಮಣ್ಣನ ಪತ್ನಿ ಈರಮ್ಮ, ಮಕ್ಕಳಾದ ಮಲ್ಲೇಶ್, ಪಾರ್ವತಿ, ಮಲ್ಲಮ್ಮಗೆ ತೀವ್ರವಾದ ವಾಂತಿ-ಬೇಧಿ, ಸುಸ್ತು ಕಾಣಿಸಿಕೊಂಡಿದೆ. ಇತ್ತ ಭೀಮಣ್ಣಗೂ ಸಮಸ್ಯೆ ಶುರುವಾಗಿತ್ತು. ಬಳಿಕ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರಾದರೂ ವಾಂತಿ-ಬೇಧಿ ನಿಂತಿರ್ಲಿಲ್ಲ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ರೈಲಿಗೆ ತಲೆ ಕೊಟ್ಟು ಅಣ್ಣ-ತಂಗಿ ದಾರುಣ ಸಾವು
ಬಳಿಕ ಹೆಚ್ಚುವರಿ ಚಿಕಿತ್ಸೆಗೆ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಲೂ ಆರೋಗ್ಯದಲ್ಲಿ ಚೇತರಿಕೆ ಕಂಡಿಲಿಲ್ಲ. ಬಳಿಕ ಅಸ್ವಸ್ಥಗೊಂಡಿದ್ದ ಎಲ್ಲರನ್ನೂ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಭೀಮಣ್ಣ ಮೃತಪಟ್ಟಿದ್ದ. ಮೇಲ್ನೋಟಕ್ಕೆ ಇದು ವಿಷಪೂರಿತ ಆಹಾರ ಸೇವಿಸಿದ್ದರಿಂದ ಘಟನೆ ನಡೆದಿದೆ. ಫುಡ್ ಪಾಯ್ಸನ್ಗೆ ಸಂಬಂಧಿಸಿದ ಲಕ್ಷಗಳು ಕಂಡು ಬಂದಿವೆ ಎಂದು ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಘಟನೆ ಬೆಳಕಿಗೆ ಬರ್ತಿದ್ದಂತೆಯೇ ಕೌಟುಂಬಿಕ ಕಲಹ ಹಿನ್ನೆಲೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನುವ ಗಾಳಿ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಮೃತರ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಇದು ಆತ್ಮಹತ್ಯೆಯಲ್ಲ, ಆಹಾರದಲ್ಲಿ ವ್ಯತ್ಯಾಸ ಆಗಿದ್ದರಿಂದ ದುರ್ಘಟನೆ ನಡೆದಿದೆ. ಭೀಮಣ್ಣ ಹಾಗೂ ಕುಟುಂಬ ಬಹಳ ಸಂಭಾವಿತ ಕುಟುಂಬ. ಜಗಳವಾಗಲಿ, ಹಣಕಾಸಿನ ವೈಷಮ್ಯ ಇರಲಿಲ್ಲ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇತ್ತ ಘಟನೆ ಬಳಿಕ ರಾಯಚೂರು ಎಸ್ಪಿ ಪುಟ್ಟಮಾದಯ್ಯ ಹಾಗೂ ಸಿರವಾರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಎಂಎಲ್ಸಿಯಲ್ಲಿ ಉಲ್ಲೇಖಿಸಿದಂತೆ ಫುಡ್ ಪಾಯ್ಸನ್ ಅಡಿಯಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಅದೆನೆ ಇರಲಿ ಬಡ ಕುಟುಂಬ ಒಂದೊಳ್ಳೆ ಬಾಟೂಟ ಸವಿದು ಹೊಲ ಮನೆ ಕೆಲಸದಲ್ಲಿ ತೊಡಗಬೇಕಿದ್ದೋರೊ ಮಸಣ ಸೇರಿದ್ದು ದುರಂತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ