ರಾಯಚೂರು ತಲುಪಿದ ಶ್ರೀಶೈಲ ಪಾದಯಾತ್ರೆ: ಭಜನೆ, ಪೂಜೆಗೆ ಸ್ಥಳೀಯರ ಸಹಯೋಗ

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಮಳಸಾವಳಗಿ ಗ್ರಾಮಕ್ಕೂ ಶ್ರೀಶೈಲಕ್ಕೂ 550 ಕಿಮೀ ದೂರವಿದೆ. ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನವಾಗಿ ರಥವೊಂದನ್ನು ನಿರ್ಮಿಸಲಾಗಿದೆ.

ರಾಯಚೂರು ತಲುಪಿದ ಶ್ರೀಶೈಲ ಪಾದಯಾತ್ರೆ: ಭಜನೆ, ಪೂಜೆಗೆ ಸ್ಥಳೀಯರ ಸಹಯೋಗ
ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಯುವಕರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 20, 2022 | 11:39 AM

ರಾಯಚೂರು: ವಿಜಯಪುರ ಜಿಲ್ಲೆ ಮುಳಸಾವಳಗಿಯಿಂದ ಆಂಧ್ರ ಪ್ರದೇಶದ ಶ್ರೀಶೈಲಕ್ಕೆ ಹೊರಟಿರುವ ಪಾದಯಾತ್ರೆ ಭಾನುವಾರ ರಾಯಚೂರು ಜಿಲ್ಲೆ ಪ್ರವೇಶಿಸಿದೆ. ಪಾದಯಾತ್ರೆಯ ಜೊತೆಗೆ ರಥವನ್ನೂ ಭಕ್ತರು ಎಳೆದು ತಂದಿದ್ದಾರೆ. ಈ ಥರಕ್ಕೆ ಶ್ರೀಶೈಲದ ಪಾತಾಳಗಂಗೆಯ ನೀರಿನಿಂದ ಅಭಿಷೇಕ ಮಾಡಿ, ವಾಪ್ ಮುಳವಾಳಗಿ ಗ್ರಾಮಕ್ಕೆ ಎಳೆದು ತರುತ್ತಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಮಳಸಾವಳಗಿ ಗ್ರಾಮಕ್ಕೂ ಶ್ರೀಶೈಲಕ್ಕೂ 550 ಕಿಮೀ ದೂರವಿದೆ. ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನವಾಗಿ ರಥವೊಂದನ್ನು ನಿರ್ಮಿಸಲಾಗಿದೆ. ಇದೇ ರಥವನ್ನು ಭಕ್ತರು ತಮ್ಮ ಪಾದಯಾತ್ರೆಯೊಂದಇಗೆ ಕೊಂಡೊಯ್ಯುತ್ತಿದ್ದಾರೆ.

ಶ್ರೀಶೈಲದಲ್ಲಿ ಜಗದ್ಗುರುಗಳ ಆಶಿರ್ವಾದ ಪಡೆದ ನಂತರ ರಥವನ್ನು ಮುಳಸಾವಳಗಿ ಗ್ರಾಮಕ್ಕೆ ವಾಪಸ್ ಎಳೆದು ತರುತ್ತಾರೆ. ನಂತರ ಏಪ್ರಿಲ್ 21ರ ಧವನದ ಹುಣ್ಣಿಮೆಯಂದು ನಡೆಯಲಿರುವ ಮಲ್ಲಿಕಾರ್ಜುನಸ್ವಾಮಿ ರಥೋತ್ಸವದಲ್ಲಿ ಇದೇ ರಥವನ್ನು ಬಳಸಲಾಗುತ್ತದೆ. ಪಾದಯಾತ್ರೆಯು ಇದೇ ಮಾರ್ಚ್ 28ಕ್ಕೆ ಶ್ರೀಶೈಲ ತಲುಪುವ ಸಾಧ್ಯತೆಯಿದೆ. ಪಾದಯಾತ್ರೆಯು ಮಾರ್ಚ್ 15ರಂದು ಆರಂಭವಾಗಿತ್ತು. ಮಾರ್ಗ ಮಧ್ಯದ ವಿವಿಧ ಗ್ರಾಮಸ್ಥರಿಂದ ಭಕ್ತರಿಗೆ ಊಟ ಮತ್ತು ತಂಗಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಊರುಗಳಲ್ಲಿಯೂ ಊರಿನ ಗಡಿ ದಾಟುವವರೆಗೂ ಗ್ರಾಮಸ್ಥರು ಪಾದಯಾತ್ರೆಗೆ ಬಂದಿರುವ ಭಕ್ತರೊಂದಿಗೆ ಗ್ರಾಮಸ್ಥರು ಹೆಜ್ಜೆ ಹಾಕುತ್ತಾರೆ.

ಪಾದಯಾತ್ರೆಗೆ ಹೊರಟಿರುವ ಭಕ್ತರ ತಂಡದೊಂದಿಗೆ 80ಕ್ಕೂ ಹೆಚ್ಚು ಭಕ್ತರು ಇದ್ದಾರೆ. ಅವರಿಗೆ ನಿತ್ಯದ ಊಟೋಪಚಾರ ನಿರ್ವಹಿಸಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಶ್ರೈಶೈಲ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಭ ದೇವಿಯ ದರ್ಶನದ ನಂತರ ಮರಳಿ ಬರಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳಲ್ಲಿ ಸಾಕಷ್ಟು ದಿನಿಸು ಕೊಂಡೊಯ್ಯಲಾಗಿದೆ. ಪಾದಯಾತ್ರೆ ಸಾಗುವ ಹಾದಿಯಲ್ಲಿ ಸಿಗುವ ಗ್ರಾಮಸ್ಥರು ಸಹ ಭಕ್ತರೊಂದಿಗೆ ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವೆಡೆ ಪ್ರಸಾದಕ್ಕೂ ವ್ಯವಸ್ಥೆ ಮಾಡುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಬಂದಿರುವ ಭಕ್ತರು ಮಲ್ಲಿಕಾರ್ಜುನ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊರುತ್ತಿದ್ದಾರೆ. ಇದರ ಜೊತೆಗೆ ಭಜನೆ, ಕಂಬಿಹಾಡುಗಳು, ಮಂಗಳಾರತಿ ಸೇರಿದಂತೆ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತಿದೆ. ಮಹಿಳಾ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್​ನಲ್ಲಿ ಯಾತ್ರೆ ಹೋಗುತ್ತಿದ್ದ ಯುವಕರಿಂದ ಈ ಬಾರಿ ಪುನೀತ್ ಸಮಾಧಿಗೆ ಯಾತ್ರೆ

ಇದನ್ನೂ ಓದಿ: 3 ವರ್ಷ ಸಹನೆ ತೋರಿದ್ರೆ 30 ವರ್ಷ ಸಮಸ್ಯೆ ಇರಲ್ಲ; ತಾಳೆ ಬೆಳೆ ಬೆಳೆದು ಬಂಪರ್ ಆದಾಯ ಗಳಿಸಿದ ರೈತ ಇತರರಿಗೆ ಮಾದರಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ