ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕನ್ವೆಯರ್ ಬೆಲ್ಟ್‌ಗೆ ಸಿಲುಕಿ ಟೆಕ್ನಿಷಿಯನ್ ಸಾವು
ರಾಯಚೂರು ತಾಲೂಕಿನ ಚಿಕ್ಕಸುಗೂರು ನಿವಾಸಿ ಉಸ್ಮಾನ್ಗೆ ಪರಿಹಾರ ನೀಡುವಂತೆ ಆಗ್ರಹಿಸಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಯಚೂರು: ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅವಘಡವೊಂದು ಸಂಭವಿಸಿದೆ. ಕನ್ವೆಯರ್ ಬೆಲ್ಟ್‌ಗೆ ಸಿಲುಕಿ ಟೆಕ್ನಿಷಿಯನ್ ಉಸ್ಮಾನ್(34) ಮೃತಪಟ್ಟಿದ್ದಾರೆ. ಮಧ್ಯಾಹ್ನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ನಿಶಿಯನ್ ಉಸ್ಮಾನ್ ಕನ್ವೆಯರ್ ಬೆಲ್ಟ್ ಗೆ ಸಿಲುಕಿದ್ದಾರೆ. ಈ ವೇಳೆ ಉಳಿದ ಸಿಬ್ಬಂದಿ ಉಸ್ಮಾನ್ ರಕ್ಷಿಸಲು ಯತ್ನಿಸಿದ್ದು ಅಷ್ಟೊತ್ತಿಗಾಗಲೇ ಉಸ್ಮಾನ್ ಪ್ರಾಣ ಬಿಟ್ಟಿದ್ದಾರೆ. ರಾಯಚೂರು ತಾಲೂಕಿನ ಚಿಕ್ಕಸುಗೂರು ನಿವಾಸಿ ಉಸ್ಮಾನ್ಗೆ ಪರಿಹಾರ ನೀಡುವಂತೆ ಆಗ್ರಹಿಸಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವೈಟಿಪಿಎಸ್ ನಲ್ಲಿ ಕನ್ವೆಯರ್ ಬೆಲ್ಟ್ ಗೆ ಸಿಲುಕಿ ಟೆಕ್ನಿಶಿಯನ್ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತನ ಕುಟುಂಬಸ್ಥರು ಹಾಗೂ ರಾಯಚೂರು ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನಾನು ಘಟನಾ ಸ್ಥಳಕ್ಕೆ ಹೋಗುತ್ತಿದ್ದು, ಪರಿಶೀಲನೆ ನಡೆಸುತ್ತೇನೆ ಎಂದು ವೈಟಿಪಿಎಸ್ ಹಿರಿಯ ಅಧಿಕಾರಿ, ಟಿವಿ9 ಗೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮುತ್ತತ್ತಿ ಫಾಲ್ಸ್‌ನಲ್ಲಿ ಇಬ್ಬರು ಯುವಕರು ನೀರುಪಾಲು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಫಾಲ್ಸ್‌ನಲ್ಲಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಫಾಲ್ಸ್‌ನಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ಕೊಚ್ಚಿ ಹೋಗ್ತಿದ್ದ ಈ ವೇಳೆ ರಕ್ಷಿಸಲು ಹೋದ ಯುವಕ ಸಹ ನೀರುಪಾಲಾಗಿದ್ದಾನೆ. ಮೇ 15ರ ಮಧ್ಯಾಹ್ನ ಬೆಂಗಳೂರಿನಿಂದ ಮುತ್ತತ್ತಿಗೆ ಆಗಮಿಸಿದ್ದ ಮಿಥುನ್ ಚಕ್ರವರ್ತಿ, ಆಂಜನೇಯ ಸ್ವಾಮಿಯ ದರ್ಶನದ ಬಳಿಕ ಹೊಳೆಗೆ ಈಜಲು ತೆರಳಿದ್ದ. ಈ ವೇಳೆ ನೀರಿನಲ್ಲಿ ಮುಳುಗಿದ್ದಾನೆ. ಮಿಥುನ್ ಸಹಾಯಕ್ಕೆ ಧಾವಿಸಿದ್ದ ಸ್ಥಳೀಯ ಈಜುಗಾರ ಮುತ್ತುರಾಜ್ ಸಹ ನೀರು ಪಾಲಾಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಮೃತ ಮುತ್ತು ರಾಜ್ ಶವ ಮೇಲೆತ್ತಿದ್ದಾರೆ. ಯುವಕ ಮಿಥುನ್ ಚಕ್ರವರ್ತಿಯ ದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಥದ ಚಕ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಮತ್ತೊಬ್ಬ ಭಕ್ತ ಸಾವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಪರ್ವತಿಬೆಟ್ಟದಲ್ಲಿ ರಥದ ಚಕ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಮತ್ತೊಬ್ಬ ಭಕ್ತ ಸ್ವಾಮಿ(35) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಥೋತ್ಸವ ವೇಳೆ ನೂಕುನುಗ್ಗಲಿನಿಂದ ರಥದ ಚಕ್ರಕ್ಕೆ ಭಕ್ತ ಸರ್ಪಭೂಷಣ(24) ಮತ್ತು ಭಕ್ತ ಸ್ವಾಮಿ ಸಿಲುಕಿದ್ದರು. ಸರ್ಪಭೂಷಣ ಮೃತಪಟ್ಟಿದ್ದು ಸ್ವಾಮಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಇಂದು ಅವರೂ ಕೂಡ ಮೃತಪಟ್ಟಿದ್ದಾರೆ.
Published On - 7:02 pm, Sun, 15 May 22