ಹಟ್ಟಿ: ಸರ್ಕಾರಿ ಉದ್ಯೋಗಸ್ಥ ಮಹಿಳೆ ಬೆಂಕಿಯಲ್ಲಿ ಭಸ್ಮವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! 10 ಲಕ್ಷ ನಗದು, ಚಿನ್ನಾಭರಣ ನಾಪತ್ತೆ
ಘಟನೆ ಬಳಿಕ ಅದೇ ದಿನ ಅದು ಆತ್ಮಹತ್ಯೆ, ಮಂಜುಳಾ ಪತಿ ಜೇಮ್ಸ್ ಪಾಲ್ ನಿಧನದ ಬಳಿಕ ಮಂಜುಳಾ ಡಿಪ್ರೆಶನ್ಗೆ ಒಳಗಾಗಿದ್ರು ಅಂತ ಮೃತಳ ಸಹೋದರ ಅನೀಲ್ ಕುಮಾರ್ ಹಟ್ಟಿ ಪೊಲೀಸರಿಗೆ ದೂರು ಕೊಟ್ಟಿದ್ರು.. ಆತ್ಮಹತ್ಯೆ ಕೇಸ್ ದಾಖಲಾದ ಬಳಿಕ ಅನುಮಾನಗಳು ಹೆಚ್ಚಾಗುತ್ತಾ ಹೋದ್ವು.. ಇನ್ನು ಮೃತಳ ತಾಯಿ ಕಸ್ತೂರಿ ಅವರು ಇದು ಕೊಲೆ ಅಂತ ಆರೋಪಿಸಿದ್ದರು..
ಅದು ಇಡೀ ಜಿಲ್ಲೆಯನ್ನ ಬೆಚ್ಚಿ ಬೀಳಿಸಿದ್ದ ಪ್ರಕರಣ.. ಅಲ್ಲಿ ಸರ್ಕಾರಿ ಕೆಲಸದಲ್ಲಿದ್ದ ಮಹಿಳೆ (woman) ಜನರೆದುರೇ ಧಗಧಗನೇ ಸುಟ್ಟು ಹೋಗಿದ್ದರು.. ಮೊದಲು ಅದು ಆತ್ಮಹತ್ಯೆ ಅಂತ ಕೇಸ್ ಕೊಡಲಾಗಿತ್ತು, ಆದ್ರೀಗ ಅದು ಕೊಲೆ ಅಂತ ಮೃತಳ ಮಗ ಕೇಸ್ ಬುಕ್ ಮಾಡಿದ್ದಾನೆ.. ಆಕೆ ಹತ್ಯೆಗೆ ಆ 10 ಲಕ್ಷ ಹಣ, ಚಿನ್ನಾಭರಣ (cash and ornaments missing) ಕಾರಣ ಅಂತ ದೂರಿನಲ್ಲಿ ಉಲ್ಲೇಖಿಸಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ (raichur).
ಹೌದು..ಇದೇ ಅಕ್ಟೋಬರ್ 29ರ ಬೆಳಿಗ್ಗೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ (hutti) ಪಟ್ಟಣದಲ್ಲಿ ಅದೊಂದು ಘಟನೆ ನಡೆದಿತ್ತು..ಹಟ್ಟಿ ಪಟ್ಟಣದ ಜಿಆರ್ ಕಾಲೋನಿಯಲ್ಲಿ ಮಂಜುಳಾ ಅನ್ನೋ 45 ವರ್ಷದ ಮಹಿಳೆ ಬೆಂಕಿಯಲ್ಲಿ ಸುಟ್ಟು ಹೋಗಿದ್ಲು..ಜನರೆದುರೇ ಧಗಧಗನೇ ಬೆಂಕಿ ಹೊತ್ತಿ ಉರಿದಿತ್ತು..ಆದರೆ ಹಟ್ಟಿ ಪಟ್ಟಣದಲ್ಲಿರೊ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ಮಂಜುಳಾರ ಸಾವು ಅನುಮಾನಕ್ಕೆ ಕಾರಣವಾಗಿತ್ತು..
ಘಟನೆ ಬಳಿಕ ಅದೇ ದಿನ ಅದು ಆತ್ಮಹತ್ಯೆ, ಮಂಜುಳಾ ಪತಿ ಜೇಮ್ಸ್ ಪಾಲ್ ನಿಧನದ ಬಳಿಕ ಮಂಜುಳಾ ಡಿಪ್ರೆಶನ್ಗೆ ಒಳಗಾಗಿದ್ರು ಅಂತ ಮೃತಳ ಸಹೋದರ ಅನೀಲ್ ಕುಮಾರ್ ಅನ್ನೋರು ಹಟ್ಟಿ ಪೊಲೀಸರಿಗೆ ದೂರು ಕೊಟ್ಟಿದ್ರು.. ಆತ್ಮಹತ್ಯೆ ಕೇಸ್ ದಾಖಲಾದ ಬಳಿಕ ಇನ್ನಷ್ಟು ಅನುಮಾನಗಳು ಹೆಚ್ಚಾಗುತ್ತಾ ಹೋದ್ವು.. ಅದೇ ವೇಳೆ ಮೃತಳ ತಾಯಿ ಕಸ್ತೂರಿ ಅವರು ಇದು ಕೊಲೆ ಅಂತ ಆರೋಪಿಸಿದ್ರು.. ಇದಾದ ಬಳಿಕ ಸದ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಖುದ್ದು ಮೃತಳ ಮಗ ಸಚಿನ್ ಪೌಲ್ ತನ್ನ ತಾಯಿಯನ್ನ ಕೊಲ್ಲಲಾಗಿದೆ ಅಂತ ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾನೆ.
ಹೌದು..ಸದ್ಯ ಮೃತ ಮಂಜುಳಾ ಮಗ ಸಚಿನ್ ಪೌಲ್ ಅನ್ನೋರು ತನ್ನ ತಾಯಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..ಇದೇ ಅಕ್ಟೋಬರ್ 28 ಕ್ಕೆ ಸಚಿನ್ ತನ್ನ ಸಹೋದರಿ ಶ್ರೇಯಾರನ್ನ ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದ..ಇದಾದ ಮಾರನೇ ದಿನ ಅಕ್ಟೋಬರ್ 29 ಕ್ಕೆ ಸಚಿನ್ ತಾಯಿ ಸಾವನ್ನಪ್ಪಿದ್ದಾರೆ..ಈ ಮಧ್ಯೆ ಮೃತಳ ಸಹೋದರ ಆತ್ಮಹತ್ಯೆ ಕೇಸ್ ಕೊಟ್ಟಿದ್ರು..
ಆದ್ರೆ ಮಂಜುಳಾ ಅಂತ್ಯಕ್ರಿಯೆ ಬಳಿಕ ಸಚಿನ್ ಕುಟುಂಬಸ್ಥರ ಜೊತೆ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ರು..ಇತ್ತೀಚೆಗೆ ಮಂಜುಳಾ ಬ್ಯಾಂಕ್ನಿಂದ 10 ಲಕ್ಷ ಲೋನ್ ಪಡೆದು ಕ್ಯಾಶ್ ವಿತ್ಡ್ರಾ ಮಾಡಿದ್ರು..ಆ 10 ಲಕ್ಷ ಹಣ ಹಾಗೂ ಮನೆಯಲ್ಲಿದ್ದ ಅಪಾರ ಚಿನ್ನಾಭರಣ ಮಿಸ್ ಆಗಿದೆಯಂತೆ..ಹೀಗಾಗಿ ಯಾರೋ ಪರಿಚಯಸ್ಥರು ಹಣಕ್ಕೆ ಬ್ಲಾಕ್ಮೇಲ್ ಮಾಡಿ ತನ್ನ ತಾಯಿಯನ್ನ ಕೊಂದಿದ್ದಾರೆ..ಅವರನ್ನ ಸುಟ್ಟು ಹಾಕಲು ಪೆಟ್ರೋಲ್ ಹಾಗೂ ಕೆಮಿಕಲ್ ಬಳಸಿರೊ ಶಂಕೆ ಇದೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ..ಸದ್ಯ ಹಟ್ಟಿ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ..
ಮೃತ ಮಂಜುಳಾ ಕುಟುಂಬಸ್ಥರು ಕೊಲೆ ಆರೋಪ ಮಾಡಿರೋದ್ರಿಂದ ಪೊಲೀಸರು ಮೃತ ಮಂಜುಳಾರ ಲಾಸ್ಟ್ ಫೋನ್ ಕಾಲ್ ಕರೆಗಳು,ಆಪ್ತರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ..ಇದಷ್ಟೇ ಅಲ್ಲ ಬ್ಯಾಂಕ್ನಿಂದ 10 ಲಕ್ಷ ಲೋನ್ ಪಡೆದಿದ್ರು ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಟ್ರಾನ್ಸಾಕ್ಷನ್ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.