ಪಟ್ಟು ಸಡಿಲಿಸದ ಡಿಕೆಶಿ: ರಾಮನಗರದಲ್ಲೇ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸ್ಥಾಪನೆಗೆ ನಿರ್ಧಾರ

ರಾಮನಗರದಲ್ಲೇ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆ ಮೂಲಕ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಸಿಬೇಕೆಂಬ ಆಸಕ್ತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಕೈಬಿಟ್ಟಿದ್ದಾರೆ. ಹಂತಹಂತವಾಗಿ ವೈದ್ಯಕೀಯ ವಿವಿ ರಾಮನಗರಕ್ಕೆ ಸ್ಥಾಳಂತರಗೊಳ್ಳಲಿದೆ. ವೈದ್ಯಕೀಯ ವಿವಿ ಸ್ಥಾಪನೆಗೆ 600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಪಟ್ಟು ಸಡಿಲಿಸದ ಡಿಕೆಶಿ: ರಾಮನಗರದಲ್ಲೇ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸ್ಥಾಪನೆಗೆ ನಿರ್ಧಾರ
ಪಟ್ಟು ಸಡಿಲಿಸದ ಡಿಕೆಶಿ: ರಾಮನಗರದಲ್ಲೇ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸ್ಥಾಪನೆಗೆ ನಿರ್ಧಾರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2024 | 10:50 PM

ರಾಮನಗರ, ಸೆಪ್ಟೆಂಬರ್ 25: ರಾಮನಗರದಲ್ಲೇ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸ್ಥಾಪನೆಗೆ 600 ಕೋಟಿ ರೂ. ಬಿಡುಗಡೆ ಮಾಡಿ ಉಪಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ (DK Shivakumar) ಮಹತ್ವದ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಹಂತಹಂತವಾಗಿ ವೈದ್ಯಕೀಯ ವಿವಿಯನ್ನು ರಾಮನಗರಕ್ಕೆ ಸ್ಥಾಳಂತರಕ್ಕೆ ಮುಂದಾಗಿದ್ದು, ಕನಕಪುರ ಮೆಡಿಕಲ್‌ ಕಾಲೇಜಿಗೆ ನ್ಯಾಶನಲ್‌‌ ಮೆಡಿಕಲ್ ಕಮಿಷನ್​ (ಎನ್​ಎಂಎಸಿ)ಗೆ ಮರು ಅರ್ಜಿ ಸಲ್ಲಿಸಲು ಡಿಸಿಎಂ ಹಾಗೂ ಆರೋಗ್ಯ ಸಚಿವರ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕೆಲ‌‌ ದಿನಗಳ ಹಿಂದೆ‌ ಮೆಡಿಕಲ್ ಕಾಲೇಜು ಅರ್ಜಿಯನ್ನು ನ್ಯಾಶನಲ್‌‌ ಮೆಡಿಕಲ್ ಕಮಿಷನ್ಅ ನರ್ಹಗೊಳಿಸಿತ್ತು. ಕನಕಪುರದಲ್ಲಿ ವಿವಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಜ್ಜಾಗಿತ್ತು. ಆದರೆ ಕನಕಪುರದಲ್ಲಿ ಮೆಡಿಕಲ್ ವಿವಿ ನಿರ್ಮಾಣಕ್ಕೆ ಹಿನ್ನಡೆ ಹಿನ್ನೆಲೆ ಇದೀಗ ರಾಮನಗದಲ್ಲಿಯೇ ವಿವಿಯ ಕೇಂದ್ರ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಕನಕಪುರ, ರಾಮನಗರಕ್ಕೆ ಇಲ್ಲ ಮೆಡಿಕಲ್‌ ಕಾಲೇಜು: ಪ್ರಸ್ತಾವನೆ ತಿರಸ್ಕರಿಸಿದ ಎನ್‌ಎಂಸಿ

ರಾಮನಗರ ಹಾಗೂ ಕನಕಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಹಾಗೂ ಕಾರ್ಯಾರಂಭ ಸಂಬಂಧ ಇಂದು ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್, ರಾಮನಗರದಲ್ಲಿ ವಿವಿ, ಕಟ್ಟಡ ಬಗ್ಗೆ ಚರ್ಚೆ ಮಾಡಿದ್ದೇವೆ. ಜಾಗದ ವಿಚಾರವಾಗಿ ಕೆಲವು ಕಾನೂನು ತೊಡಕುಗಳಿದ್ದವು. ಈ ವರ್ಷ ರಾಮನಗರದಲ್ಲಿ ಮೆಡಿಕಲ್‌ ಕಾಲೇಜಿಗೆ ಬೇಕಾದ ತಯಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್​ ಟ್ವೀಟ್​ 

ಕನಕಪುರದಲ್ಲೂ ವಸತಿ ಇಲಾಖೆ ಜಾಗದಲ್ಲಿ ವಸತಿ ಇಲಾಖೆ ಪ್ರಾರಂಭ ಆಗಲಿದೆ. ನಮ್ಮ‌ ವಶಕ್ಕೆ ತೆಗೆದುಕೊಂಡು ಕಟ್ಟಡ ನಿರ್ಮಾಣ ಕೆಲಸ ಆಗಿದೆ. ಕನಕಪುರದಲ್ಲಿ ಈ ಹಿಂದೆ ಭೂಮಿ ಪೂಜೆ ಮಾತ್ರ ಉಳಿದುಕೊಂಡಿತ್ತು. ಮಾಜಿ ಸಚಿವ ಸುಧಾಕರ್ ತೆಗೆದುಕೊಂಡು ಹೋಗಿ ಅಲ್ಲಿ‌ ಶುರು ಮಾಡಿದ್ದಾರೆ. 450 ಕೋಟಿ ರೂ. ವೆಚ್ಚದಲ್ಲಿ ಆಗಬೇಕಿತ್ತು, ಆದರೆ ಈಗ ಅದು 800 ಕೋಟಿ‌ ರೂ. ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಮನಗರ, ಕನಕಪುರದಲ್ಲಿ ಮೆಡಿಕಲ್ ಕಾಲೇಜಿಗೆ ಅರ್ಜಿ ಹಾಕಿರೋದೇ ತಪ್ಪೆಂದ ಡಾ. ಮಂಜುನಾಥ್: ಕೊಟ್ಟ ಕಾರಣ ಇಲ್ಲಿದೆ

ರಾಜಕೀಯ ದುರುದ್ದೇಶದಿಂದ ಅಲ್ಲಿ ಪ್ರಾರಂಭ ಮಾಡಿದ್ದರು. ಈಗ ಯಾವ ರಾಜಕಾರಣ ಇಲ್ಲ, ಅಡೆತಡೆಯು ಇಲ್ಲ. ಅಭಿವೃದ್ಧಿ ಕೆಲಸಗಳಿಗೆ ಯಾವುದೇ ರಾಜಕಾರಣ ಇಲ್ಲ. ಇನ್ನೂ ಮೂರು ವರ್ಷ ಸಮಯ ಇದೆ ನೋಡೋಣ. ರಾಜೀವ್ ಗಾಂಧಿ ವಿವಿ ಕಾನೂನು ಆಗಿದೆ. ಒಂದು ತಿಂಗಳ ಸಮಯಾವಕಾಶ ಕೊಟ್ಟಿದ್ದೇವೆ ಹಂತ ಹಂತವಾಗಿ‌ ಹೆಡ್ ಕ್ವಾರ್ಟರ್ಸ್ ರಾಮನಗರಕ್ಕೆ ಶಿಫ್ಟ್ ಮಾಡುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!