ಮಾಗಡಿ ಸುತ್ತಮುತ್ತ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸಾವಿರಾರು ಎಕರೆ ಕೃಷಿ ಜಮೀನು ಸ್ವಾಧೀನಕ್ಕೆ ಪ್ಲ್ಯಾನ್: ರೈತರು ಕಿಡಿಕಿಡಿ

ಮಾಗಡಿ ಸುತ್ತಮುತ್ತ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸಾವಿರಾರು ಎಕರೆ ಕೃಷಿ ಜಮೀನು ಸ್ವಾಧೀನಕ್ಕೆ ಪ್ಲ್ಯಾನ್: ರೈತರು ಕಿಡಿಕಿಡಿ
ಮಾಗಡಿ ಸುತ್ತಮುತ್ತ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸಾವಿರಾರು ಎಕರೆ ಕೃಷಿ ಜಮೀನು ಸ್ವಾಧೀನಕ್ಕೆ ಪ್ಲ್ಯಾನ್: ರೈತರು ಕಿಡಿಕಿಡಿ

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಮಾಗಡಿ ತಾಲೂಕಿನ ಕಾಳಾರಿ, ತಾಳೆಕೆರೆ, ಶಿವನಸಂದ್ರ, ದಂಡೇನಹಳ್ಳಿ, ನಾರಸಂದ್ರ ಗ್ರಾಮಗಳ ಸುತ್ತಮುತ್ತ 3,324 ಎಕರೆ ಕೃಷಿ ಜಮೀನನ್ನು ಏಕಾಏಕಿ ಭೂಸ್ವಾಧೀನಕ್ಕೆ ಮುಂದಾಗಿದ್ದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ನೂರಾರು ವರ್ಷದಿಂದ ಕೃಷಿ ಮಾಡುತ್ತಿರುವ ರೈತರು ತೆಂಗು, ಮಾವು, ಅಡಿಕೆ, ರಾಗಿ, ಭತ್ತ ಸೇರಿ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. […]

TV9kannada Web Team

| Edited By: sadhu srinath

Sep 16, 2021 | 11:51 AM

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಮಾಗಡಿ ತಾಲೂಕಿನ ಕಾಳಾರಿ, ತಾಳೆಕೆರೆ, ಶಿವನಸಂದ್ರ, ದಂಡೇನಹಳ್ಳಿ, ನಾರಸಂದ್ರ ಗ್ರಾಮಗಳ ಸುತ್ತಮುತ್ತ 3,324 ಎಕರೆ ಕೃಷಿ ಜಮೀನನ್ನು ಏಕಾಏಕಿ ಭೂಸ್ವಾಧೀನಕ್ಕೆ ಮುಂದಾಗಿದ್ದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ.

ನೂರಾರು ವರ್ಷದಿಂದ ಕೃಷಿ ಮಾಡುತ್ತಿರುವ ರೈತರು ತೆಂಗು, ಮಾವು, ಅಡಿಕೆ, ರಾಗಿ, ಭತ್ತ ಸೇರಿ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಹೀಗಿರುವಾಗ ‘ಯಾವ ಕಾರಣಕ್ಕೂ ಭೂಮಿ ಬಿಟ್ಟುಕೊಡಲ್ಲ‘ ಎಂದು ಪಟ್ಟು ಹಿಡಿದಿರುವ ಈ ಭಾಗದ ರೈತರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ‌ಪ್ರದೇಶ ಸ್ಥಾಪನೆಗಾಗಿ ಮಾಗಡಿ ತಾಲೂಕಿನ ಐದಾರು ಗ್ರಾಮಗಳ ಭೂಮಿಯ ಸ್ವಾಧೀನಕ್ಕೆ ಪ್ಲಾನ್ ಮಾಡಲಾಗಿದೆ. ಇದರ ಬಗ್ಗೆ ಫೆಬ್ರವರಿ ತಿಂಗಳಲ್ಲಿ ಮಾಗಡಿ ಶಾಸಕ ಎ ಮಂಜುನಾಥ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಬಗ್ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯಲ್ಲಿ ಚರ್ಚೆ ಮಾಡಿ ಜಮೀನು ಸ್ವಾಧೀನ ನಿರ್ಣಯಕ್ಕೆ ಬರಲಾಗಿದೆ. ಈಗಾಗಲೇ 3,324 ಎಕರೆ ಜಾಗಗಳನ್ನು ಕೆಐಎಡಿಬಿ (Karnataka Industrial Area Development Board -KIADB) ಗುರುತಿಸಿದೆ.

ಮೊದಲ ಹಂತದಲ್ಲಿ 800 ಎಕರೆ ಸ್ವಾಧಿನ ಪಡಿಸಿಕೊಳ್ಳಲು ನಿರ್ಣಯಿಸಲಾಗಿದೆ. ರೈತರಿಗೆ ‌ಮಾಹಿತಿ ನೀಡದೇ, ಚರ್ಚೆ ನಡೆಸದೇ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೀಗ ಏಕಾಏಕಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದಕ್ಕೆ ರೈತರು ತೀವ್ರ ಆಕ್ರೋಶಗೊಂಡಿದ್ದಾರೆ.

Also Read: ‘ರೈತರು, ಕನ್ನಡಪರ ಸಂಘಗಳ ಮೇಲೆ ಬೇಕೆಂದೇ ಹಿಂದಿನ ಸರ್ಕಾರ ಕೇಸ್ ಹಾಕಿದೆ; ಅದನ್ನೂ ಹಿಂಪಡೆಯಲಾಗುವುದು’

ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ‌ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು

(agriculture land acquisition by Karnataka Industrial Area Development Board KIADB in magadi taluk farmers protest)

Follow us on

Related Stories

Most Read Stories

Click on your DTH Provider to Add TV9 Kannada