ದುಬೈಯಿಂದ ಅಷ್ಟೇ ಅಲ್ಲ ಆಫ್ರಿಕಾದಿಂದಲೂ ಗೋಲ್ಡ್ ಸ್ಮಗ್ಲಿಂಗ್: DRI ತನಿಖೆಯಲ್ಲಿ ಹೊಸ ವಿಚಾರ ಬಹಿರಂಗ
ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದಿಂದ ದುಬೈ, ಜಿನೀವಾ ಮೂಲಕ ಭಾರತಕ್ಕೆ ಚಿನ್ನ ಸಾಗಾಟ ಮಾಡಲಾಗುತ್ತಿತ್ತೆಂದು ಡಿಆರ್‌ಐ ತನಿಖೆಯಿಂದ ಬಹಿರಂಗಗೊಂಡಿದೆ. ತರುಣ್ ಕೊಂಡೂರು ಎಂಬ ಆರೋಪಿಯ ಹೇಳಿಕೆಯ ಪ್ರಕಾರ, ಅವರು 4-2 ಕೆಜಿ ಚಿನ್ನವನ್ನು ಸಾಗಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಇಂದು ರನ್ಯಾ ಜೈಲಿಗಾ ಇಲ್ಲಾ ಬೇಲ್ ಹಾ ಅನ್ನೊದು ತಿಳಿಯಲಿದೆ.

ಬೆಂಗಳೂರು, ಮಾರ್ಚ್ 27: ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ದಿನಕ್ಕೊಂದು ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಕೇವಲ ದುಬೈ ಜಿನೇವಾ ಡೀಲ್ ಅಲ್ಲ, ಸೌತ್ ಆಫ್ರಿಕಾಗೂ ಗೋಲ್ಡ್ ಸ್ಮಗ್ಲಿಂಗ್ ಡೀಲ್ ಹಬ್ಬಿದೆ ಅನ್ನೊದು ಈಗ ಬಯಲಾಗಿದೆ. ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಜೈಲು ಸೇರಿದ್ದಾರೆ. ಆದರೆ, ಇಬ್ಬರು ಆರೋಪಿಗಳ ಸ್ಮಗ್ಲಿಂಗ್ ಬಗ್ಗೆ ತನಿಖೆ ಮಾಡುತ್ತಿರುವ ಡಿಆರ್‌ಐ (DRI) ಒಂದೊಂದೆ ಮಾಹಿತಿ ಬಹಿರಂಗ ಪಡಿಸುತ್ತಿದೆ. ಡಿಆರ್‌ಐ ಮುಂದೆ ನೀಡಿರುವ ಹೇಳಿಕೆಯ ದಾಖಲೆ ಲಭ್ಯವಾಗಿದೆ.
ತಪ್ಪೊಪ್ಪಿಕೊಂಡ ತರುಣ್ ಕೊಂಡೂರು
4kg ಒಮ್ಮೆ, ಇನ್ಮೊಮ್ಮೆ 2 KG ಚಿನ್ನ ಇದೆ ರೀತಿ ಸಾಗಿಸಿರುವುದಾಗಿ ಒಪ್ಪಿಕೊಂಡಿರುವ ತರುಣ್, ತನ್ನ ಪಾಸ್ ಪೋರ್ಟ್ ಬಳಸಿ ಜಿನೆವಾಗೆ ಹೋಗುವುದಾಗಿ ದುಬೈನ ಏರ್ಪೋರ್ಟ್ನಲ್ಲಿ ಹೇಳಿ ಭಾರತಕ್ಕೆ ಚಿನ್ನ ತರಲಾಗುತ್ತಿತ್ತು. ಖುದ್ದು ಈ ಬಗ್ಗೆ ಹೇಳಿಕೆ ನೀಡಿರುವ ತರುಣ್ ಕೊಂಡೂರು ತನ್ನ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಮಾ.27ಕ್ಕೆ ರನ್ಯಾ ರಾವ್ ಭವಿಷ್ಯ ನಿರ್ಧಾರ; ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಇದು ಬರೀ ದುಬೈ-ಭಾರತದ ಕಥೆಯಲ್ಲ. ದಕ್ಷಿಣಾ ಅಫ್ರಿಕಾದಿಂದ ದುಬೈಗೆ ಮೊದಲು ಚಿನ್ನ ಸಾಗಾಟ ಮಾಡಿದ್ದಾರೆ. ನಂತರ ಅದನ್ನ ಜಿನೇವಾಗೆ ಸಾಗಿಸುವ ನೆಪದಲ್ಲಿ ಏರ್ಪೋರ್ಟ್ ಒಳಗೆ ತಂದು ಭಾರತಕ್ಕೆ ರವಾನೆ ಮಾಡಲಾಗ್ತಾ ಇತ್ತು, ಖುದ್ದು ಈ ಬಗ್ಗೆ ಹೇಳಿಕೆ ದಾಖಲಿಸಿರುವ ತರುಣ್ ಕೊಂಡೂರು ರಾಜು ದಕ್ಷಿಣ ಅಫ್ರಿಕಾಗೆ ಹೋಗಲು ಅಲ್ಲಿಯ ಗೃಹ ಮಂತ್ರಾಲಯದಿಂದಲೂ ಅನುಮತಿ ಪಡೆಯುತ್ತಿದ್ದರು.
ದುಬೈನಲ್ಲಿ ಇವರು ಶುರು ಮಾಡಿದ್ದ ವೈರಾ ಡೈಮಂಡ್ ಕಂಪನಿಗೆ ಮೊದಲು ಚಿನ್ನ ಸಾಗಾಟ ಅಲ್ಲಿಂದನಂತರ ಇದನ್ನ ಭಾರತಕ್ಕೆ ತರುಣ್ ಅಮೇರಿಕಾ ಪಾಸ್ ಪೋರ್ಟ್ ಬಳಸಿ ಏರ್ಪೋರ್ಟ್ ಒಳಗೆ ತಂದರೆ ಏರ್ಪೋರ್ಟ್ ಒಳಗೆ ರನ್ಯಾ ಚಿನ್ನ ಪಡೆದುಕೊಂಡು ಭಾರತಕ್ಕೆ ಬಂದು ಪ್ರೋಟೋಕಾಲ್ ಬಳಸಿ ನಗರಕ್ಕೆ ತಂದಿದ್ದಾಳೆ ಅನ್ನೊದು ಪತ್ತೆಯಾಗಿದೆ.
ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ ಕೇಸ್: ಅತ್ತ ಹೆಂಡ್ತಿ ರನ್ಯಾಗೆ ಕಾನೂನು ಕುಣಿಕೆ ಬಿಗಿ, ಇತ್ತ ಪತಿಗೆ ಬಿಗ್ ರಿಲೀಫ್
ಒಟ್ಟಿನಲ್ಲಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಅಲ್ಲಿ ದೊಡ್ಡ ಸಿಂಡಿಕೇಟ್ ಇದ್ದೆ ಅಂತ ಡಿಆರ್‌ಐ ಬೆನ್ನುಬಿದ್ದಿದ್ದು, ಇನ್ನು ಎಷ್ಟು ಜನರ ಬುಡಕ್ಕೆ ಬಿಸಿನೀರು ಬಿಡುತ್ತಾ ಕಾದು ನೋಡಬೇಕಿದೆ. ಮತ್ತೊಂದು ಕಡೆ ಇಂದು ಸಿಸಿಹೆಚ್ ಅರವತ್ತನಾಲ್ಕನೇ ನ್ಯಾಯಾಲಯದದಲ್ಲಿ ರನ್ಯಾ ಜಾಮೀನು ಆದೇಶ ಹೊರ ಬೀಳಲಿದ್ದು ರನ್ಯಾ ಜೈಲಿಗಾ ಇಲ್ಲಾ ಬೇಲ್ ಹಾ ಅನ್ನೊದು ಕಾಯ್ದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.