ದರ್ಶನ್​​ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೋರ್ಟ್​ ಹಾಲ್​​​ಗೆ ನುಗ್ಗಿದ ಅಪರಿಚಿತ ವ್ಯಕ್ತಿ, ಮುಂದೇನಾಯ್ತು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಆ್ಯಂಡ್ ತಂಡವನ್ನು ಜೈಲು ಪಾಲಾಗಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ನನ್ನು ದರ್ಶನ್​ನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಅಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ಕೋರ್ಟ್ ಅರ್ಜಿ ವಿಚಾರಣೆ ನಡೆಸಿದೆ. ವಾದ ಪ್ರತಿವಾದ ನಡೆಯುತ್ತಿರುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಕೋರ್ಟ್ ಹಾಲ್​​ ಗೆ ನುಗ್ಗಿರುವ ಘಟನೆ ನಡೆದಿದೆ.

ದರ್ಶನ್​​ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೋರ್ಟ್​ ಹಾಲ್​​​ಗೆ ನುಗ್ಗಿದ ಅಪರಿಚಿತ ವ್ಯಕ್ತಿ, ಮುಂದೇನಾಯ್ತು?
ದರ್ಶನ್
Updated By: ರಮೇಶ್ ಬಿ. ಜವಳಗೇರಾ

Updated on: Sep 03, 2025 | 7:16 PM

ಬೆಂಗಳೂರು, (ಸೆಪ್ಟೆಂಬರ್ 03): ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ ಕೇಸಿನ (Renukaswamy Murder Case) ಆರೋಪಿಗಳಾದ ನಟ ದರ್ಶನ್ (Darshan)  ಸೇರಿದಂತೆ 17 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿ ಅಪರಿಚಿತ ವ್ಯಕ್ತಿಯೊಬ್ಬರು ಅರ್ಜಿ ಹಿಡಿದು ಕೋರ್ಟ್ ಹಾಲ್​ ಗೆ ನುಗ್ಗಿರುವ ಘಟನೆ ನಡೆದಿದೆ.  ಹೌದು… ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ನನ್ನು ದರ್ಶನ್​ನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ಸಂಬಂಧ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು (ಸೆಪ್ಟೆಂಬರ್ 03) ಬೆಂಗಳೂರಿನ 64ನೇ ಸೆಷನ್​ ಕೋರ್ಟ್ ವಿಚಾರಣೆ ನಡೆಸುವ ವೇಳೆ ಅಪರಿಚಿತವ ವ್ಯಕ್ತಿ ನುಗ್ಗಿ ಬಂದಿದ್ದಾನೆ. ಇದರಿಂದ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು.

ಬೆಂಗಳೂರಿನ 64ನೇ ಸೆಷನ್​ ಕೋರ್ಟ್​ ಗೆ ಅರ್ಜಿ ಸಲ್ಲಿಸಲಾಗಿದ್ದು, ಇಂದು(ಸೆಪ್ಟೆಂಬರ್ 03) ಸಹ ವಾದ-ಪ್ರತಿವಾದ ನಡೆದಿದ್ದ ವೇಳೆ ಅನಾಮಿಕ ವ್ಯಕ್ತಿಯೋರ್ವ, ಕೈಯಲ್ಲಿ ಅರ್ಜಿಯೊಂದನ್ನು ಹಿಡಿದುಕೊಂಡು  ಕೋರ್ಟ್ ಹಾಲ್​ ನೊಳಗೆ ನುಗ್ಗಿದ್ದು, ದರ್ಶನ್​​ ಆ್ಯಂಡ್​ ಗ್ಯಾಂಗ್​​ಗೆ ಜಾಮೀನು ನೀಡಬಾರದು. ಅವರಿಗೆ ಮರಣ ದಂಡನೆ ನೀಡಬೇಕೆಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ ಹೋಗುವುದು ತಡೆಯಲು ವಕೀಲರ ವಾದ: ನೀಡಿದ ಕಾರಣಗಳೇನು?

ಈ ಅನಿರೀಕ್ಷಿತ ಬೆಳವಣಿಗೆಯಿಂದ ಗೊಂದಲಕ್ಕೊಳಗಾದ ನ್ಯಾಯಾಧೀಶರು, ‘ಯಾರು ನೀನು?’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆ ವ್ಯಕ್ತಿ, ‘ನಾನು ರವಿ ಬೆಳಗೆರೆ ಕಡೆಯವನು’ ಎಂದು ಹೇಳಿದ್ದಾರೆ. ಬಳಿಕ ನ್ಯಾಯಾಧೀಶರು, ಯಾರಾರೋ ನೀಡುವ ಅರ್ಜಿಯನ್ನು ಪಡೆಯಲು ಸಾಧ್ಯವಿಲ್ಲ. ಏನೇ ಇದ್ದರೂ ಸರ್ಕಾರದ ಮುಖಾಂತರ ಬರುವಂತೆ ಹೇಳಿ ಅರ್ಜಿಯನ್ನು ತೆಗೆದುಕೊಂಡ ಹೋಗಿ ಎಂದು ವ್ಯಕ್ತಿಗೆ ಸೂಚಿಸಿದರು. ಜಡ್ಜ್ ಸೂಚನೆ ಬಳಿಕ ಅನಾಮಿಕ ವ್ಯಕ್ತಿ ಕೋರ್ಟ್ ಹಾಲ್‌ನಿಂದ ಹೊರಗೆ ಹೋದರು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಿಯಮದ ಪ್ರಕಾರವೇ ನಡೆಸಬೇಕು ಮತ್ತು ಹೊರಗಿನ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

Published On - 6:57 pm, Wed, 3 September 25