Shakti Scheme: ಉಚಿತ ಪ್ರಯಾಣ ಸೌಲಭ್ಯವಿದೆ, ಆದರೆ ಈ ಗ್ರಾಮಗಳಲ್ಲಿ ಬಸ್​​ಗಳೇ ಬರಲ್ಲ!

ಒಂದಡೆ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಮತ್ತೊಂದಡೆ ಬಸ್​ ಸೌಲಭ್ಯ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್​​ಗಳ ಸಮಸ್ಯೆಗಳಿದ್ದು, ಈ ಕುರಿತಾದ ಒಂದು ವರದಿ ಇಲ್ಲಿದೆ..

Shakti Scheme: ಉಚಿತ ಪ್ರಯಾಣ ಸೌಲಭ್ಯವಿದೆ, ಆದರೆ ಈ ಗ್ರಾಮಗಳಲ್ಲಿ ಬಸ್​​ಗಳೇ ಬರಲ್ಲ!
ಸರ್ಕಾರಿ ಬಸ್​ಗಾಗಿ ಆಗ್ರಹಿಸಿದ ವಿದ್ಯಾರ್ಥಿನಿ (ಎಡಚಿತ್ರ) ಬಸ್​ ಇಲ್ಲದೇ ಟಂಟಂನಲ್ಲಿ ಹೋಗುತ್ತಿರುವ ಜನ (ಬಲಚಿತ್ರ)
Follow us
ವಿವೇಕ ಬಿರಾದಾರ
|

Updated on: Jun 10, 2023 | 11:06 AM

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ (Congress Government) 5 ಉಚಿತ ಗ್ಯಾರೆಂಟಿ (Five Guarantee Scheme) ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ” (Shakti Scheme)ಗೆ ನಾಳೆ (ಜೂ.11) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಲಿದ್ದಾರೆ. ಈ ಯೋಜನೆಯ ಅಡಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ (Government Bus) ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇನ್ನೂವರೆಗು ರಾಜ್ಯದ ಕೆಲವು ಹಳ್ಳಿಗೆ ಬಸ್​ ಸಂಪರ್ಕವಿಲ್ಲ. ದಿನನಿತ್ಯ ಜನರು ಬಸ್​ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ. ಅದೇರೀತಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಸೂಕ್ತ ಬಸ್​​ ವ್ಯವಸ್ಥೆ ಇಲ್ಲದೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅನಂತಗಿರಿ ಗ್ರಾಮಕ್ಕೆ ಸ್ವಾತಂತ್ರ್ಯ ಕಾಲದಿಂದಲೂ ಬಸ್ ಬಂದಿಲ್ಲ. ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿನಿತ್ಯ ಮೂರು ಕಿಮೀ ನಡೆದುಕೊಂಡು ಹೋಗಿ ಬಸ್ ಹತ್ತಬೇಕು. ಇಲ್ಲ ಟಂಟಂಗೆ ಕೇಳಿದಷ್ಟು ಹಣ ಹೋಗುವಂತ ಪರೀಸ್ಥಿತಿ ಇದೆ.

ಈ ಬಗ್ಗೆ ಓರ್ವ ವಿದ್ಯಾರ್ಥಿನಿ ಮಾತನಾಡಿ ನಮಗೆ ಬಸ್ ಇಲ್ಲದ ಹಿನ್ನೆಲೆ ನಡೆದುಕೊಂಡು ಹೋಗಬೇಕು. ಬಸ್ ಬರದೆ ಇದ್ದರೇ ಮನೆಲಿ ಕೂರಬೇಕು. ಮನೆಯಲ್ಲಿ ಕೂತರೆ ತಂದೆ ತಾಯಿ ಬೈತಾರೆ. ಯಾಕೆ ಶಾಲೆ ಹೋಗಿಲ್ಲ ಅಂತ ಕೇಳ್ತಾರೆ. ಮನೆಯಲ್ಲಿ ಕೂತರೆ ದಡ್ಡರಾಗುತ್ತೇವೆ. ಬಸ್ ಬರೋದಿಲ್ಲ ಇದರಿಂದ ತೊಂದರೆ ಆಗುತ್ತದೆ. ಟಂಟಂ ಕೂಡ ಸರಿಯಾಗಿ ಬರೋದಿಲ್ಲ. ಲೇಟ್ ಆಗಿ ಹೋದರೆ ಶಾಲೆಯಲ್ಲಿ ಶಿಕ್ಷಕರು ಬೈತಾರೆ. ನಮ್ಮೂರಿಗೆ ಬಸ್ಸೇ ಇಲ್ಲ ಅಂದರೆ ಉಚಿತ ಪ್ರಯಾಣ ಹೇಗೆ. ನಮ್ಮೂರಿಗೆ ಬಸ್ ಬಿಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಜೂ.11ರಂದು ಶಕ್ತಿ ಯೋಜನೆಗೆ ಚಾಲನೆ: ಮಹಿಳೆಯರ ಉಚಿತ ಬಸ್​ ಪ್ರಯಾಣಕ್ಕೆ ರೂಲ್ಸ್​​ ಅಪ್ಲೈ, ಇಲ್ಲಿದೆ ಮಾಹಿತಿ

ಇನ್ನು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಸಿ ಗ್ರಾಮಕ್ಕೂ ಬಸ್​ ವ್ಯವಸ್ಥೆ ಇಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ನಮ್ಮೂರಿಗೆ ಬಸ್ ಬರಲ್ಲ, ಹೀಗಿದ್ದಾಗ ಉಚಿತ ಬಸ್ ಪ್ರಯಾಣ ಹೇಗ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಮೊದಲು ನಮ್ಮೂರಿಗೆ ಬಸ್ ಬಿಡಿ ಅಂತ ಒತ್ತಾಯಿಸಿದ್ದಾರೆ.

ನಮ್ಮೂರಿಗೆ ಬಸ್​​ ಬರಲಿಲ್ಲವೆಂದರೇ ಉಚಿತ ಬಸ್ ಪ್ರಯಾಣ ಘೋಷಿಸಿ ನಮಗೆ ಉಪಯೋಗವಿಲ್ಲ. ನಿಜವಾದ ಕಾಳಜಿ ಇದ್ದರೇ ನಮ್ಮೂರಿಗೆ ಸರ್ಕಾರ ಬಸ್ ಬಿಡಲಿ. ಇಲ್ಲಾಂದರೇ ನಾವೇ ಅಲ್ಲಿಗೆ ಬರಬೇಕಾಗುತ್ತೆ ಅಂತ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿಕಾರಿದ್ದಾರೆ.

ಕರಾವಳಿಯಲ್ಲಿ ಖಾಸಗಿ ಬಸ್ ದರ್ಬಾರ್ ಜೋರಾಗಿದೆ. ಮಂಗಳೂರು ನಗರದಲ್ಲಿ ಕೇವಲ 30 ಸರ್ಕಾರಿ ಬಸ್​​ಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಕಷ್ಟು ಹಳ್ಳಿಗಳಿಗೆ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಮಂಗಳೂರಿನಿಂದ ಬಿ.ಸಿ‌‌.ರೋಡ್, ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾತ್ರ ಸರ್ಕಾರಿ ಬಸ್ ವ್ಯವಸ್ಥೆ ಇದೆ. ಮೂಡಬಿದರೇ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಗೆ ಸರ್ಕಾರಿ ಬಸ್ ಇಲ್ಲದೇ ಜನರು ಪರದಾಡುತ್ತಿದ್ದಾರೆ.

ಜಿಲ್ಲಾದ್ಯಂತ ಮತ್ತು ರಾಜ್ಯ-ಹೊರರಾಜ್ಯಗಳಿಗೆ ಸೇರಿ ಕೇವಲ 500 ಸರ್ಕಾರಿ ಬಸ್​ಗಳಿವೆ. ಅದೇ ಖಾಸಗಿ 1650 ಬಸ್​​ಗಳಿವೆ. 1968 ರಿಂದ ಕೂಡ ಕರಾವಳಿಯಲ್ಲಿ ಖಾಸಗಿ ದರ್ಬಾರ್ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.75 ರಷ್ಟು ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯಬೇಕೆಂದರೂ ಸರ್ಕಾರಿ ಬಸ್​ಗಳಿಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು