ಶಿಕ್ಷಣ ಸಚಿವರೇ ಇತ್ತ ಗಮನಿಸಿ, ಸರ್ಕಾರಿ ಶಾಲೆಗಿಲ್ಲ ವ್ಯವಸ್ಥಿತ ಸೂರು: ಮರದ ಕೆಳಗೆ, ಅಡುಗೆ ಕೋಣೆಯಲ್ಲಿ ನಿತ್ಯ ಪಾಠ

ಸ್ವಾತಂತ್ರ್ಯ ಬಂದು 76 ವರ್ಷ ಕಳೆಯುತ್ತಾ ಬಂದರೂ ಇಂದಿಗೂ ಎಷ್ಟೋ ಸರಕಾರಿ ಶಾಲೆಗಳಿಗೆ ಕಟ್ಟಡ ಇಲ್ಲ, ಕಟ್ಟಡ ಇಲ್ಲದ ಕಾರಣ ಮರದ ಕೆಳಗೆ, ಸಮುದಾಯ ಭವನದ ಅಡುಗೆ ಕೋಣೆಯಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ಅದರಲ್ಲೂ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿ.

ಶಿಕ್ಷಣ ಸಚಿವರೇ ಇತ್ತ ಗಮನಿಸಿ, ಸರ್ಕಾರಿ ಶಾಲೆಗಿಲ್ಲ ವ್ಯವಸ್ಥಿತ ಸೂರು: ಮರದ ಕೆಳಗೆ, ಅಡುಗೆ ಕೋಣೆಯಲ್ಲಿ ನಿತ್ಯ ಪಾಠ
ಅಡುಗೆ ಕೋಣೆ, ಮರದ ಕೆಳಗೆ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2023 | 7:30 PM

ಶಿವಮೊಗ್ಗ, ಸೆಪ್ಟೆಂಬರ್​ 21: ಸ್ವಾತಂತ್ರ್ಯ ಬಂದು 76 ವರ್ಷ ಕಳೆಯುತ್ತಾ ಬಂದರೂ ಇಂದಿಗೂ ಎಷ್ಟೋ ಸರಕಾರಿ ಶಾಲೆ (govt school) ಗಳಿಗೆ ಕಟ್ಟಡ ಇಲ್ಲ, ಕಟ್ಟಡ ಇಲ್ಲದ ಕಾರಣ ಮರದ ಕೆಳಗೆ, ಸಮುದಾಯ ಭವನದ ಅಡುಗೆ ಕೋಣೆಯಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ಅಷ್ಟಕ್ಕೂ ಇದು ಯಾವುದೋ ಹಳ್ಳಿಯ ಮೂಲೆಯಲ್ಲಿರುವ ಶಾಲೆಯಲ್ಲ, ಬದಲಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆ. ಅದರಲ್ಲೂ ಶಿಕ್ಷಣ ಸಚಿವರ ತವರು ಜಿಲ್ಲೆಯ ಶಾಲೆಯ ಕಥೆ ಇದು. ಮುಂದೆ ಓದಿ.

ಶಿವಮೊಗ್ಗ ಸ್ಮಾರ್ಟ್ ಸಿಟಿ ನಗರದ ವ್ಯಾಪ್ತಿಯಲ್ಲಿ ಹಳೇ ಮಂಡ್ಲಿಯ ಪಂಪ್ ಹೌಸ್ ಪಕ್ಕದಲ್ಲಿರುವ ಮರಳಯ್ಯನ ಮಠ ಇದೆ. ಈ ಮಠದ ಸಮೂದಾಯ ಭವನ ಮತ್ತು ಆವರಣದಲ್ಲಿ ಸರ್ಕಾರಿ ಶಾಲೆ ನಡೆಸಲಾಗುತ್ತಿದೆ. ಈ ಮಠದ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ. ಇದರ ಪಕ್ಕದಲ್ಲೇ ಮಠದ ಆವರಣದಲ್ಲಿ ನ್ಯೂ ಮಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ತರಗತಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಸುಳ್ಳು ಸ್ವಾಮಿ ಪ್ರಣವಾನಂದ್​ಗೆ ಬಿಟ್ಟಿ ಪ್ರಚಾರ ನೀಡಲು ನಾನು ತಯಾರಿಲ್ಲ: ಮಧು ಬಂಗಾರಪ್ಪ, ಸಚಿವ

ಕೇವಲ ಒಂದೇ ಒಂದು ಸಮೂದಾಯ ಭವನ. ತಿಂಗಳಿಗೆ ಆರು ಸಾವಿರ ಬಾಡಿಗೆ ಶಿಕ್ಷಣ ಇಲಾಖೆ ನೀಡುತ್ತದೆ. 4, 5 ಮತ್ತು 6 ಮೂರು ಕ್ಲಾಸ್ ಗಳು ಇಲ್ಲಿಯೇ ನಡೆಯುತ್ತಿವೆ. ಬಡ ಸರಕಾರಿ ಶಾಲೆಯ ಮಕ್ಕಳು ಅಂದರೆ ಯಾರು ತಾನೇ ಗಮನ ಹರಿಸುತ್ತಾರೆ. 4 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಕೊಠಡಿ ಮರದ ಕೆಳಗೆ, 5ನೇ ಕ್ಲಾಸ್ ಸಮುದಾಯ ಭವನದ ಅಡುಗೆ ಕೋಣೆಯ ತಗಡಿನ ಶೆಡ್ ನಲ್ಲಿ, 6ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಸಮುದಾಯ ಭವನದಲ್ಲಿ ಹೀಗೆ ಮೂರು ಕ್ಲಾಸ್ ನ ತರಗತಿಗಳ ಪಾಠ ಇಲ್ಲಿ ನಡೆಯುತ್ತಿದೆ.

ನಿತ್ಯ ಸ್ಮಶಾನ ಪಕ್ಕದಲ್ಲೇ ಮತ್ತು ಮರ ಮತ್ತು ತಗಡಿನ ಶೆಡ್ ಕೆಳಗೆ ಮಕ್ಕಳು ಅಪಾಯದಲ್ಲಿ ಮಕ್ಕಳು ನಿತ್ಯ ಪಾಠ ಕೇಳಬೇಕು. ಇದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲಿ ಸಕರಾರಿ ಮಕ್ಕಳ ಪರಿಸ್ಥಿತಿ. ಕಳೆದ ಎರಡು ವರ್ಷಗಳಿಂದ ಕೊಠಡಿ ಇಲ್ಲದೇ ಮೂರು ತರಗತಿ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.

ಪೋಷಕರು ಸ್ಮಶಾನ ಪಕ್ಕದಲ್ಲಿ ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಮಕ್ಕಳ ಟಿಸಿಯನ್ನು ಪಡೆದುಕೊಂಡು ಬೇರೆ ಶಾಲೆಗೆ ಪೋಷಕರು ಸೇರಿದ್ದಾರೆ. ಸರಕಾರಿ ಶಾಲೆ ಉಳಿಸಬೇಕು. ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಬೇಕೆಂದು ಸಿಎಂ ನಿಂದ ಹಿಡಿದು ಶಿಕ್ಷಣ ಸಚಿವರು ಸೇರಿದಂತೆ ಎಲ್ಲರೂ ಹೇಳುತ್ತಾರೆ. ಅವರ ಮಾತಿನಲ್ಲಿರುವ ಕಾಳಜಿಯು ಅವರ ಕೃತಿಯಲ್ಲಿ ಕಂಡು ಬರುವುದಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಡ ದಲಿತ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸದೇ ಇರುವುದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇಸರ ಮೂಡಿಸಿದೆ.

ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 175 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದರು. ಆದರೆ ಸ್ಮಶಾನ ಪಕ್ಕದಲ್ಲಿ ತಾತ್ಕಾಲಿಕ ಕೊಠಡಿಗೆ ಭಯಪಟ್ಟು 50 ವಿದ್ಯಾರ್ಥಿಗಳು ಈ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಹೋಗಿದ್ದಾರೆ. ಶಾಲೆಯಲ್ಲಿ 8 ಶಿಕ್ಷಕರು ವರ್ಗವಿದೆ. ಆದರೆ ಸಮಸ್ಯೆ ಇರೋದು ಕಟ್ಟಡದ್ದು. ಕಳೆದ 3 ವರ್ಷಗಳ‌ ಹಿಂದೆ ಸುರಿದ ಅತಿಯಾದ ಮಳೆಗೆ ಕೊಠಡಿಗಳು ಬಿದ್ದು ಹೋಗಿದೆ. ಬಿದ್ದು ಹೋಗಿರುವ ಕೊಠಡಿ ಬದಲಿಗೆ ಹೊಸ ಕೊಠಡಿಗಳ ಭಾಗ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಇದನ್ನೂ ಓದಿ: ಶಿವಮೊಗ್ಗ: ಮಲೆನಾಡಿನಲ್ಲಿ ಕೈಕೊಟ್ಟ ಮಳೆ; 20 ರೈತರ ಆತ್ಮಹತ್ಯೆ, ಬರ ಪೀಡಿತ ಜಿಲ್ಲೆ ಘೋಷಣೆಗೆ ಬಿಜೆಪಿ ಡಿಮ್ಯಾಂಡ್

ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 8 ಹೊಸ ಕೊಠಡಿ ಕಾಮಗಾರಿ ನಡೆಯುತ್ತಿದೆ. ಆದರೆ ಒಂದೂವರೆ ವರ್ಷದಿಂದ ಅದು ಇನ್ನೂ ಪೂರ್ಣಗೊಂಡಿಲ್ಲ. ಸರಕಾರ ಬದಲಾಗುತ್ತಿದ್ದಂತೆ ಅನುದಾನ ಕುಂಠಿತಗೊಂಡಿದೆ. ಗುತ್ತಿಗೆದಾರ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಕೊಠಡಿ ಕಾಮಗಾರಿ ಕೆಲಸ ನಿಲ್ಲಿಸಿದ್ದಾರೆ. ನಿತ್ಯ ಮೂಲ ಶಾಲೆಯಿಂದ ತಾತ್ಕಾಲಿಕ ದೇವಸ್ಥಾನದ ಆವರಣದ ತಾತ್ಕಾಲಿಕ ಕೊಠಡಿಗಳಿಗೆ ಮೂರು ತರಗತಿಯ ಮಕ್ಕಳು ಓಡಾಡಬೇಕಿದೆ.

ಮದ್ಯಾಹ್ನ ಬಿಸಿಯೂಟಕ್ಕೆ ಮೂಲ ಶಾಲೆಗೆ ಬಂದು ಊಟ ಮಾಡಿಕೊಂಡು ಮತ್ತೆ ತಾತ್ಕಾಲಿಕ ಕೊಠಡಿಗಳಿಗೆ ಮಕ್ಕಳು ತೆರಳಬೇಕು. ಶಿವವಮೊಗ್ಗ ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಇರುವುದರಿಂದ ಮಕ್ಕಳು ನಿತ್ಯ ಅಪಾಯದಲ್ಲೇ ಅಂದಾಜು 1 ಕಿ.ಮೀ ನಡೆದುಕೊಂಡು ಹೋಗಿ ವಾಪಸ್ ಬರುತ್ತಿದ್ದಾರೆ. ಶಾಲಾ ಮಕ್ಕಳಿಗೆ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಈ ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ದುಬಾರಿ ದುನಿಯಾದಲ್ಲಿ ಬಡವರು, ದಲಿತ ಕೂಲಿ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದುವ ಸಾಮರ್ಥ್ಯ ಇಲ್ಲ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ವಿಧಿಯಿಲ್ಲದೇ ವಿದ್ಯಾಭ್ಯಾಸ ಮುಂದುವರಿಸಿದ್ಧಾರೆ.

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಶಾಲಾ ಕೊಠಡಿ ಸಮಸ್ಯೆಗೆ ಪರಿಹಾರ ಸಿಕಿಲ್ಲ. ಮಕ್ಕಳು ನಿತ್ಯ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರಕಾರಿ ಬಡ ಮಕ್ಕಳ ನೋವು ಕೂಗು ಯಾರಿಗೆ ಕೇಳಿಸದೇ ಇರುವುದು ಮಾತ್ರ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ