ಮಹಿಳಾ ಅಧಿಕಾರಿಗೆ ಅವಾಚ್ಯ ಪದದಿಂದ ನಿಂದನೆ: ಎಫ್​ಐಆರ್​ನಲ್ಲಿ ಶಾಸಕ ಪುತ್ರನ ಹೆಸರೇ ಇಲ್ಲ

ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯ ಪದದಿಂದ ನಿಂದನೆ ಮಾಡಿದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಶಾಸಕನ ಪುತ್ರನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ಮಧ್ಯ ಇದೀಗ ಈ ಪ್ರಕರಣ ಸಂಬಂಧ ಎಫ್​ಐಆರ್ ದಾಖಲಾಗಿದೆ. ಆದ್ರೆ, ವಿಡಿಯೋನಲ್ಲಿ ಬೈದಿರುವ ಶಾಸಕ ಸಂಗಮೇಶ್​ ಪುತ್ರ ಬಸವೇಶ್​ ಹೆಸರು ಎಫ್​ಐಆರ್​ನಲ್ಲಿ ಇಲ್ಲ. ಇದು ಅಚ್ಚರಿಕೆ ಕಾರಣವಾಗಿದೆ.

ಮಹಿಳಾ ಅಧಿಕಾರಿಗೆ ಅವಾಚ್ಯ ಪದದಿಂದ ನಿಂದನೆ: ಎಫ್​ಐಆರ್​ನಲ್ಲಿ ಶಾಸಕ ಪುತ್ರನ ಹೆಸರೇ ಇಲ್ಲ
Bhadravati Congress Mla Son
Edited By:

Updated on: Feb 11, 2025 | 6:46 PM

ಶಿವಮೊಗ್ಗ, (ಫೆಬ್ರವರಿ 11): ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಪ್ರಕರಣ ಸಂಬಂಧ  ಕೊನೆಗೂ ಎಫ್​ಐಆರ್​ ದಾಖಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ನೀಡಿದ ದೂರಿನ ಮೇರೆಗೆ ಬಸವೇಶ್​ ವಿರುದ್ಧ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಬಿಎನ್ಎಸ್ 132, 352, 351/2, 189/2,190 BNS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಚ್ಚರಿ ಅಂದರೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಬಸವೇಶ್​ ಹೆಸರು ಎಫ್​ಐಆರ್​ನಲ್ಲೇ ಇಲ್ಲ.

ಇನ್ನು ಎಫ್​ಐಆರ್ ದಾಖಲಾಗುತ್ತಿದ್ದಂತೆಯೇ ಭದ್ರಾವತಿ ಡಿವೈಎಸ್​ಪಿ ನಾಗರಾಜ್ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಅಜಯ್​, ಚನ್ನಗಿರಿ ರಸ್ತೆ ಬಳಿ ರವಿ ಹಾಗೂ ವರುಣ್​ ಎನ್ನುವರನ್ನ ಬಂಧಿಸಲಾಗಿದೆ. ಈ ಮೂವರು ಬಂಧಿತ ಆರೋಪಿಗಳು ಮಹಿಳಾ ಅಧಿಕಾರಿ ಜ್ಯೋತಿ ದಾಳಿ ವೇಳೆ ಘಟನಾ ಸ್ಥಳದಲ್ಲಿದ್ದರು.

ಇದನ್ನೂ ಓದಿ: ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಪದ ಬಳಿಸಿದ ಕಾಂಗ್ರೆಸ್​ ಶಾಸಕನ ಪುತ್ರ

ಕೇಸ್ ದಾಖಲಾಗುತ್ತಿದ್ದಂತೆಯೇ ಪೊಲೀಸರು ತ್ವರಿತಗತಿಯಲ್ಲೇ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಶಾಸಕರ ಪುತ್ರ ಬಸವೇಶನ ಹೆಸರಿಲ್ಲದೆ ಕೇವಲ 6-7 ಜನರ ವಿರುದ್ಧ ದೂರು ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಅಕ್ರಮ ಮರಳು ಗಣಿಗಾರಿಕೆ ಜಾಗದ ಮೇಲೆ ತಡರಾತ್ರಿ ರೇಡ್ ನಡೆಸಿದ ವೇಳೆ ಘಟನೆ ನಡೆದಿದೆ. ಈ ಮಹಿಳಾ ಅಧಿಕಾರಿಯು ಭದ್ರಾವತಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ್ದರು.ಈ ವೇಳೆ ಬಿ.ಕೆ.ಸಂಗಮೇಶ್ ಪುತ್ರನ ತಮ್ಮ ಆಪ್ತನೊಂದಿಗೆ ಮತನಾಡುತ್ತ ಮತ್ತು ಭೂ ವಿಜ್ಞಾನ ಮಹಿಳಾ ಅಧಿಕಾರಿಗೆ ಅಶ್ಲೀಲ ಪದಗಳಲ್ಲಿ ನಿಂದಿಸಿದ್ದಾರೆ. ಮಹಿಳಾ ಅಧಿಕಾರಿಯ ಮೇಲೆ ಎಂಎಲ್‌ಎ ಮಗನ ದರ್ಪದ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ ಮಹಿಳೆಯರಿಗೆ ಗೌರವ ಇಲ್ಲ, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲ ಎಂದು ವಿಪಕ್ಷಗಳ ಟೀಕಿಸುತ್ತಿವೆ.

ಇದನ್ನೂ ಓದಿ: ಶಾಸಕ ಸಂಗಮೇಶ್ ಮಗ ಬಸವೇಶ್ ವಿರುದ್ಧ ದೂರು ದಾಖಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ

ಬಿ.ಎಸ್.‌ ಬಸವೇಶಗೆ ಸಂಬಂಧಿಸಿದ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಭೂ ವಿಜ್ಞಾನಿ​ ಜ್ಯೋತಿ ಬಂದಿದ್ದಾರೆ. ಇದೇ ವೇಳೆ ‌ಬಸವೇಶನ ಶಿಷ್ಯನೊಬ್ಬ ಜ್ಯೋತಿ ಅವರಿಗೆ ಫೋನ್​ ಮಾಡಿ ಮಾತಾಡಿ ಅಂತ ಕೊಟ್ಟಿದ್ದಾನೆ. ನನ್ನ ನಂಬರ್​ಗೆ ಕರೆ ಮಾಡೋಕೆ ಹೇಳು ಅಂತ ಜ್ಯೋತಿ ಹೇಳಿದ್ದಾರಷ್ಟೇ. ಅಷ್ಟಕ್ಕೆ ಬಾಯಿಗೆ ಬಂದ ಹಾಗೆ ಅಶ್ಲೀಲ ಶಬ್ಧಗಳಿಂದ ನಿಂದಿಸಿದ್ದು, ಇದೀಗ ಆ ವಿಡಿಯೋ ಫುಲ್ ವೈರಲ್ ಆಗಿದೆ.

ಇನ್ನು ಮಗನ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸಂಗಮೇಶ್‌, ಅಲ್ಲಿ ಮಾತನಾಡಿರುವುದು ನನ್ನ ಮಗ ಅಲ್ಲ. ಯಾರೋ ಬಿಜೆಪಿ, ಜೆಡಿಎಸ್‌ನವರು ಕುತಂತ್ರ ಮಾಡುತ್ತಿದ್ದಾರೆ ಎಂದು ಪುತ್ರನ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನು ಓರ್ವ ಮಹಿಳಾ ಅಧಿಕಾರಿಗೆ ಅಶ್ಲೀಲ ಶಬ್ದಗಳಲ್ಲಿ ಬೈದಿರುವುದು ಮತ್ತು ಬೆದರಿಕೆ ಹಾಕಿರುವುದು ಸ್ಪಷ್ಟವಾದರೂ. ಆರೋಪಿ ಸ್ಥಾನದಲ್ಲಿ ಬಸವೇಶ್ ನ ಹೆಸರು ಉಲ್ಲೇಖಿಸಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

Published On - 6:20 pm, Tue, 11 February 25

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us