ಕೇಂದ್ರವೇ ಸಾಲ ತಗೊಂಡು ನಮಗೆ ನೀಡಬಹುದಲ್ಲ? ಮತ್ತೆ GST ಬಗ್ಗೆ ಸಿದ್ದು ಗುಡುಗು
ಬೆಂಗಳೂರು: ಪ್ರತಿವರ್ಷ GST ಬಾಬತ್ತಿನ ನಷ್ಟವನ್ನು ಪರಿಹಾರದ ರೂಪದಲ್ಲಿ ಶೇ. 14 ರಷ್ಟು ಕೇಂದ್ರ ಸರ್ಕಾರವೇ ತುಂಬಿಕೊಡಬೇಕು. ಆದ್ರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೇರೆಯದೇ ಹೇಳ್ತಿದ್ದಾರೆ. ಕೊರೋನಾದಿಂದ GST ಬಾಬತ್ತಿನಲ್ಲಿ ಖೋತಾ ಆಗಿದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ನಲ್ಲಿ ಸಾಲ ತಗಂಡು ತೀರಿಸಿ ಅಂತಾರೆ. ಇದನ್ನು ಹೇಳೋ ಬದಲು ಕೇಂದ್ರವೇ ಸಾಲ ತೆಗೆದುಕೊಂಡು ರಾಜ್ಯಗಳಿಗೆ ನೀಡಬಹುದಲ್ಲ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಸಲ್ಲುತ್ತಿರುವ ನಗಣ್ಯ GST ಪಾಲಿನ ವಿರುದ್ಧ ಗುಡುಗಿದ್ದಾರೆ. ಈಗಾಗಲೆ […]

ಬೆಂಗಳೂರು: ಪ್ರತಿವರ್ಷ GST ಬಾಬತ್ತಿನ ನಷ್ಟವನ್ನು ಪರಿಹಾರದ ರೂಪದಲ್ಲಿ ಶೇ. 14 ರಷ್ಟು ಕೇಂದ್ರ ಸರ್ಕಾರವೇ ತುಂಬಿಕೊಡಬೇಕು. ಆದ್ರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೇರೆಯದೇ ಹೇಳ್ತಿದ್ದಾರೆ. ಕೊರೋನಾದಿಂದ GST ಬಾಬತ್ತಿನಲ್ಲಿ ಖೋತಾ ಆಗಿದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ನಲ್ಲಿ ಸಾಲ ತಗಂಡು ತೀರಿಸಿ ಅಂತಾರೆ. ಇದನ್ನು ಹೇಳೋ ಬದಲು ಕೇಂದ್ರವೇ ಸಾಲ ತೆಗೆದುಕೊಂಡು ರಾಜ್ಯಗಳಿಗೆ ನೀಡಬಹುದಲ್ಲ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಸಲ್ಲುತ್ತಿರುವ ನಗಣ್ಯ GST ಪಾಲಿನ ವಿರುದ್ಧ ಗುಡುಗಿದ್ದಾರೆ.
ಈಗಾಗಲೆ GST ಬಾಬತ್ತಿನಲ್ಲಿ ಮೊದಲ ಕಂತು ಬರಬೇಕಾಗಿತ್ತು. ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ರಾಜ್ಯಗಳನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳಲಾಗುತ್ತಿದೆ. ಈಗಲೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕೇಂದ್ರ ಸರ್ಕಾರ ತಾನು ನಿರ್ವಹಿಸಬೇಕಾದ ಜವಾಬ್ದಾರಿ ಬಿಟ್ಟು, ರಾಜ್ಯಗಳ ಮೇಲೆ ಹೊರೆ ಹಾಕಲು ಹೊರಟಿದೆ. ರಾಜ್ಯ ಸರ್ಕಾರಗಳಿಗೆ ಒತ್ತಡ ಹಾಕುವ ಈ ನೀತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೇಂದ್ರದ ನೀತಿಯನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಗಳನ್ನ ದಿವಾಳಿ ಅಂಚಿಗೆ ಕಳಿಸುತ್ತಿರುವ ಕೆಲಸ ಇದು ಕೇಂದ್ರವೇ ಸಾಲವನ್ನಾದರೂ ಮಾಡಲಿ, ಏನಾದ್ರೂ ಮಾಡಲಿ. ಆದರೆ ರಾಜ್ಯಕ್ಕೆ ನೀಡಬೇಕಾದ ಹಣ ನೀಡಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ರೆ ಸ್ವರ್ಗ ಸೃಷ್ಟಿ ಮಾಡ್ತೀವಿ ಅಂದ್ರು. ಅದಕ್ಕೆ ಜನ 25 ಸಂಸದರನ್ನು ಗೆಲ್ಲಿಸಿಕೊಟ್ರು. ನಿಮ್ಮ ಮೇಲೆ ವಿಶ್ವಾಸ ಇಟ್ಡು 25 ಜನರನ್ನು ಗೆಲ್ಲಿಸಿದವರಿಗೆ ವಿಶ್ವಾಸ ದ್ರೋಹ ಮಾಡ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಗಳನ್ನ ದಿವಾಳಿ ಅಂಚಿಗೆ ಕಳಿಸುತ್ತಿರುವ ಕೆಲಸ ಇದು. ರಾಜ್ಯ ಸರ್ಕಾರಕ್ಕೆ ಧಂ ಇದ್ರೆ ಇದನ್ನು ತೀವ್ರವಾಗಿ ವಿರೋಧಿಸಬೇಕು. ನೀವೇ ಸಾಲ ಮಾಡಿ ದುಡ್ಡುಕೊಡಿ ಅನ್ನಬೇಕು. ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸಲ್ವಾ? GST ಕಂಪೆನ್ಸೇಷನ್ ಕೊಡಲ್ಲ ಅಂದ್ರೆ ರಾಜ್ಯ ಎಲ್ಲಿಗೆ ಹೋಗಬೇಕು? ಎಂದು ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published On - 1:30 pm, Sat, 29 August 20




