7 ವರ್ಷಗಳಲ್ಲಿ‌ 66 ಸಾವಿರ ಮೆಗಾ ವ್ಯಾಟ್ ವಿದ್ಯುತ್​​ ಉತ್ಪಾದಿಸುವ ಗುರಿಯಿದೆ: ಸಿಎಂ ಸಿದ್ದರಾಮಯ್ಯ

ನಗರದಲ್ಲಿ ರೈತ ಸೌರಶಕ್ತಿ ಮೇಳದಲ್ಲಿ‌ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ‌ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಹೀಗಾಗಿ ವಿದ್ಯುತ್ ಉತ್ಪಾದನೆ ಸಮಸ್ಯೆ ಎದುರಾಗಿದೆ. ಮುಂದಿನ‌ 7 ವರ್ಷಗಳಲ್ಲಿ‌ 66 ಸಾವಿರ ಮೆಗಾ ವ್ಯಾಟ್ ವಿದ್ಯುತ ಉತ್ಪಾದಿಸುವ ಗುರಿ ಇದೆ ಎಂದು ಹೇಳಿದ್ದಾರೆ.

7 ವರ್ಷಗಳಲ್ಲಿ‌ 66 ಸಾವಿರ ಮೆಗಾ ವ್ಯಾಟ್ ವಿದ್ಯುತ್​​ ಉತ್ಪಾದಿಸುವ ಗುರಿಯಿದೆ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
Anil Kalkere
| Updated By: ಗಂಗಾಧರ​ ಬ. ಸಾಬೋಜಿ

Updated on: Mar 09, 2024 | 7:56 PM

ಬೆಂಗಳೂರು, ಮಾರ್ಚ್​ 09: ನವೀಕರಿಸಬಹುದಾಗ ವಿದ್ಯುತ್‌ ಶೇ. 66% ಇದೆ. 37% ಮಾತ್ರ ಸಂಪ್ರದಾಯ ವಿದ್ಯುತ್ ಇದೆ. ಎಲ್ಲ ಪಂಪ್ ಸೆಟ್ ವಿದ್ಯುತ್ ಕೊಟ್ಟಾಗ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ಕೊಡುತ್ತಿದ್ದೇವೆ. ಮುಂದಿನ‌ 7 ವರ್ಷಗಳಲ್ಲಿ‌ 66 ಸಾವಿರ ಮೆಗಾ ವ್ಯಾಟ್ ವಿದ್ಯುತ ಉತ್ಪಾದಿಸುವ ಗುರಿ ಇದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದಲ್ಲಿ ರೈತ ಸೌರಶಕ್ತಿ ಮೇಳದಲ್ಲಿ‌ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ‌ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಹೀಗಾಗಿ ವಿದ್ಯುತ್ ಉತ್ಪಾದನೆ ಸಮಸ್ಯೆ ಎದುರಾಗಿದೆ. ಆರೋಪ ಮಾಡುತ್ತಿಲ್ಲ. ಅಂಕಿ ಅಂಶಗಳೇ ಹೇಳುತ್ತದೆ ಎಂದು ಹೇಳಿದ್ದಾರೆ.

ಈಗ 32 ಸಾವಿರ ಮೆಗಾ ವ್ಯಾಟ್ ಇದೆ. 2013-14ರಲ್ಲಿ‌ 14 ಸಾವಿರ ಮೆಗಾ ವ್ಯಾಟ್ ಇದೆ. 2017-18ರಲ್ಲಿ 28 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಇತ್ತು. ಇಡೀ ದೇಶದಲ್ಲೇ ಅಷ್ಟು ದೊಡ್ಡ ಸೋಲಾರ್ ಪಾರ್ಕ್ ಮಾಡಿದ್ದು ನಮ್ಮ‌ ಸರ್ಕಾರದ ಅವಧಿಯಲ್ಲೇ ಅದೇ ವೇಗದಲ್ಲಿ ಹಿಂದಿನ‌ ಸರ್ಕಾರ ಮುಂದುವರಿಸಿದರೆ ವಿದ್ಯುತ್ ಅಭಾವ ಆಗುತ್ತಿರಲ್ಲ. ಸೌರ ಶಕ್ತಿಯನ್ನ ರೈತರು ಪಂಪ್‌ಸೆಟ್​​ಗಳಲ್ಲಿ ಬಳಕೆ ಮಾಡಬೇಕು. ಕೇಂದ್ರ ಶೇ.30% ಮತ್ತು ರಾಜ್ಯ 30% ಶೇರ್ ಮಾಡಿ ಮಾಡುವ ಯೋಜನೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ಕೊಡಗು ಕ್ಷೇತ್ರದಲ್ಲಿ ನಾನು ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತದೆ: ಪ್ರತಾಪ್ ಸಿಂಹ

ರೈತರು, ಮಹಿಳೆಯರು, ಕೂಲಿ ಕಾರ್ಮಿಕರು, ದಲಿತರು ಆರ್ಥಿಕವಾಗಿ ಬಲವಾದರೆ ಸಮಾನತೆ ಬರಲು‌ ಸಾಧ್ಯ. ದುರ್ಬಲರಿಗೆ ಶಕ್ತಿ ತುಂಬಿದಾಗ ಮಾತ್ರ ಸುಭದ್ರವಾದ ಸಮಾಜ ನಿರ್ಮಾಣ ಸಾಧ್ಯ. ಅಸಮಾನತೆ ಹಾಗೇ ಮುಂದುವರಿಸಿದರೆ ಸಮಾನತೆ ತರಲು‌ ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ಐದು ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ಮಾಡಿದ್ದೀವಿ. ಗೃಹಜ್ಯೋತಿ ಮೂಲಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರಾಜ್ಯ ಸರ್ಕಾರ ವಿದ್ಯುತ್ ಇಲಾಖೆಗೆ ಅದರ ಖರ್ಚು ಭರಿಸುವ ಕೆಲಸ ಮಾಡುತ್ತಿದೆ. ಈವರೆಗೆ 5,120 ಕೋಟಿ‌ ರೂ. ರಾಜ್ಯ ಸರ್ಕಾರ ಇಂಧನ ಇಲಾಖೆಗೆ ಒದಗಿಸಿ ಕೊಡುತ್ತಿದೆ. 1 ಕೋಟಿ 60 ಲಕ್ಷ ಕುಟುಂಬಗಳು ಉಚಿತ ಕರೆಂಟ್ ಪಡೆಯುತ್ತಿದ್ದಾವೆ ಎಂದರು.

ಸೌರ ಶಕ್ತಿ ಕ್ಷೇತ್ರದ ಏನೇನು ಬೆಳವಣಿಗೆ ಆಗಿದೆ. ತಾಂತ್ರಿಕ ಬೆಳವಣಿಗೆ ಆಗಿವೆ ಅವು ರೈತರಿಗೆ ತಲುಪಬೇಕು. ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ಆದ ಎಲ್ಲವೂ ರೈತರಿಗೂ ತಲುಪಬೇಕು. ಕೃಷಿಗೆ ಬಳಸಿಕೊಂಡಾಗ ಮಾತ್ರ ಅವು ಸಾರ್ಥಕವಾಗಲಿದೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮಾಡಬೇಕಾಗುತ್ತೆ. ಸಂಶೋಧನೆಯ ಫಲ‌ ರೈತರನ್ನ ತಲುಪಿದಾಗ ಮಾತ್ರ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು‌ ಸಾಧ್ಯ. ಕೃಷಿ ಅಭಿವೃದ್ಧಿ ಆದರೆ ದೇಶ, ರಾಜ್ಯದ ಅಭಿವೃದ್ಧಿ ಆಗುತ್ತೆ. ಎಲ್ಲ ಪ್ರದೇಶಗಳಿಗೂ ನೀರಾವರಿ ಒದಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ನೀರಿನ ಸಮಸ್ಯೆಯಿಂದ ಕಂಪನಿಗಳು ರಾಜ್ಯಕ್ಕೆ ಬರಲು ಹಿಂದೇಟು: ಆರ್ ಅಶೋಕ ಹೇಳಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು

ದೇಶದಲ್ಲಿ‌ ರಾಜ್ಯಸ್ಥಾನ ಬಿಟ್ಟರೆ ಹೆಚ್ಚು ಒಣಭೂಮಿ ಇರುವುದು ಕರ್ನಾಟಕ. ಕರ್ನಾಟಕ ಎರಡನೇ ಸ್ಥಾನಕ್ಕೆ ಬರುತ್ತೆ. ಇದನ್ನ ಅರ್ಥ ಮಾಡಿಕೊಂಡು ಒಣಭೂಮಿಯನ್ನ ಬಳಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡೋದು ಅವಶ್ಯ. ರೈತರ ಇಳುವರಿ ಕಡಿಮೆ ಆಗುತ್ತಾ ಹೋಗುತ್ತದೆ. ಈ ಹಿಂದೆ 20-30 ಎಕರೆ ಇದ್ದವರಿಗೆ ಇವತ್ತು‌ 2-3 ಎಕರೆಗಳಿಗೆ ರೈತರು ಬಂದಿದ್ದಾರೆ. ಇದಕ್ಕಾಗಿ ಈ ವರ್ಷ ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸಮಗ್ರ ಕೃಷಿ ಅಂದರೆ ಉಪ ಸಕುಬುಗಳಿಗೆ ಹೆಚ್ಚು ಒತ್ತು ನೀಡುತ್ತಾರೆ.

ಕೃಷಿ, ತೋಟಗಾರಿಗೆ, ಹೈನುಗಾರಿಗೆ, ರೇಷ್ಮೆ, ಮೀನುಗಾರಿಗೆ ಮಾಡಿದಾಗ ಮಾತ್ರ ಸಮಗ್ರ ಕೃಷಿ ಮಾಡಲು ಸಾಧ್ಯ. ಸಮಗ್ರ ಕೃಷಿ ಮಾಡದೇ ಹೋದರೆ ಕೃಷಿ ಕಷ್ಟ ಆಗುತ್ತೆ. ಪಟ್ಟಣ ಬಳದಂತೆ ಅನೇಕ ಸಮಸ್ಯೆ ಎದುರಾಗುತ್ತದೆ. ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಅತ್ಯಂತ ಅಗತ್ಯ. ಹೊಸ ಪ್ರಯೋಗವನ್ನ‌ ರೈತರು ಅಳವಡಿಸಿಕೊಂಡದರೆ ಮಾತ್ರ‌ ಅದು ಸಾರ್ಥಕ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ