ಬೀದರ್ನ ಆ ಪುಟ್ಟ ಗ್ರಾಮದಲ್ಲಿರುವ ಬಾವಿಗಳು ಎಂದಿಗೂ ಬತ್ತಿಲ್ಲ: ವರ್ಷದ 12 ತಿಂಗಳು ತುಂಬಿ ತುಳುಕುತ್ತೆ ನೀರು
ಬೀದರ್ನ ಒಳಕೋಟೆಯಲ್ಲಿರುವ ಬಾವಿಯಂತೆಯೇ ಜಿಲ್ಲೆಯನ ಬೇರೆ ಬೇರೆ ಭಾಗದಲ್ಲಿ ನಿಜಾಮರು ಕುಡಿಯುವ ನೀರಿಗಾಗಿ ಅದೆಷ್ಟೋ ಬಾವಿಗಳನ್ನ ಕೊರೆಸಿದ್ದಾರೆ. ಅವುಗಳಲ್ಲಿ ನೀರು ಸದಾಕಾಲ ಇರುತ್ತದೆ. ಅಂತಹ ಬಾವಿಗಳನ್ನೂ ಕೂಡಾ ಜಿಲ್ಲಾಡಳಿತ ಪತ್ತೆ ಮಾಡಿ ಅಪರೂಪದಲ್ಲಿ ಅಪರೂಪವಾದ ಬಾವಿಗಳ ನೀರನನ್ನ ಬಳಸಿಕೊಳ್ಳಬೇಕಾಗಿದೆ. ಶತಮಾನಗಳಿಂದ ಎಂದೂ ಬತ್ತದ ಐತಿಹಾಸಿಕ ಬಾವಿಗಳು ಬೀದರ್ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.
ಬೀದರ್, ಮೇ 29: ಬಿರುಬಿಸಿಲು ಬರದಿಂದಾಗಿ (drought) ಜಿಲ್ಲೆಯ ಬಹುತೇಕ ಬಾವಿ, ಬೋರ್ ವೆಲ್ ನಲ್ಲಿ ನೀರು (water) ಖಾಲಿಯಾಗಿದೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಗೆ ನೀರುಣಿಸಲು ಸಾಧ್ಯವಾಗದೆ ಬೆಳೆ ಬಾಡುತ್ತಿದೆ. ಆದರೆ ಆ ಪುಟ್ಟ ಗ್ರಾಮದಲ್ಲಿರುವ ಬಾವಿಗಳು ಮಾತ್ರ ಎಂದಿಗೂ ಬತ್ತಿಲ್ಲ. ಎಂಥಹ ಭೀಕರ ಬರ ಎದುರಾದರೂ ಈ ಗ್ರಾಮದ ಬಾವಿಗಳು ಮಾತ್ರ ಬತ್ತೋದೆ ಇಲ್ಲಾ ಬತ್ತಿದ ಉದಾಹರಣೆ ಕೂಡ ಇಲ್ಲ. ಬೀದರ್ ಪಟ್ಟಣದ ಐತಿಹಾಸಿಕ ಬೀದರ್ ಕೋಟೆಯೊಳಗಡೆಯಿರುವ ಒಳಕೋಟೆಯಲ್ಲಿರುವ ಬಾವಿಗಳು ಮಾತ್ರ ಎಂಥಹ ಭೀಕರವಾದ ಬರಗಾಲ ಬಂದರು ಕೂಡಾ ಬತ್ತಿದ ಉದಾಹರಣೆಯಿಲ್ಲ.
ಅಷ್ಟೊಂದು ನೀರು ಈ ಬಾವಿಯಲ್ಲಿ ಸಂಗ್ರಹವಾಗುತ್ತವೆ. ನಿಜಮರ ಕಾಲದಲ್ಲಿ ಈ ಊರು ಈ ಊರು ಹುಟ್ಟಿಕೊಂಡಿದೆ. ರಾಜ ಮಹಾರಾಜರಿಗೆ ಸೈನಿಕರಿಗೆ ಕುಡಿಯುವ ನೀರನ್ನ ಪೂರೈಸುವ ಉದ್ದೇಶದಿಂದ ಇಲ್ಲಿ ಐದು ಬಾವಿಯನ್ನ ಕೊರೆಸಲಾಗಿದೆ ಎರಡು ಬಾವಿಯನ್ನ ಮಾತ್ರ ರೈತರು ಬಳಕೆಮಾಡುತ್ತಿದ್ದು ಇನ್ನೂ ಮೂರು ಬಾವಿಗಳನ್ನ ಬಳಕೆ ಮಾಡುತ್ತಿಲ್ಲ. ಈ ಎಲ್ಲಾ ಐದು ಬಾವಿಗಳು ಕೂಡಾ ತುಂಬಿಕೊಂಡೆ ಇರುತ್ತವೆ. ಕೆಲವೂ ಸಲ ಬೀದರ್ ಜಿಲ್ಲೆಯಲ್ಲಿ ಬರದಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ಬಾವಿಗಳು ಬೋರ್ ವೆಲ್ ಗಳು ಬತ್ತಿಹೋದರೂ ಕೂಡ ಈ ಬಾವಿಯಲ್ಲಿ ನೀರು ಬತ್ತಿದ ಉದಾಹರಣೆ ಇಲ್ಲಾ ಕಳೆದ ಏಳು ವರ್ಷದ ಹಿಂದೆ ಬೀದರ್ ನಲ್ಲಿ ಭೀಕರವಾದ ಬರದಿಂದಾಗಿ ಬೀದರ್ ಜಿಲ್ಲೆಯ ಜೀವ ನಾಡಿ ಕಾರಂಜಾ ಜಲಾಶಯದಲ್ಲಿನ ನೀರು ಕೂಡಾ ಕಾಲಿಯಾಗಿತ್ತು.
ಬೀದರ್ ಪಟ್ಟಣದಲ್ಲಿ ಪ್ರತಿಯೊಂದು ಮನೆಗೆ ಮನೆಗೂ ಕೂಡ ಬಾವಿಗಳು, ಬೋರ್ ವೆಲ್ ಗಳು ಇವೆ ಪಟ್ಣದ ಎಲ್ಲಾ ಬಾವಿಗಳು ಬತ್ತಿಹೋಗಿ ಜನರು ಟ್ಯಾಂಕರ್ ಮೂಲಕ ನೀರು ತಂದು ದಾಹ ಇಂಗಿಸಿಕೊಳ್ಳುತ್ತಿದ್ದರು ಅಂತಹ ಸಮಯದಲ್ಲಿಯೂ ಕೂಡ ಇಲ್ಲಿನ ಬಾವಿಯಲ್ಲಿ ನೀರು ತುಂಬಿಕೊಂಡು ಇಲ್ಲಿನ ಜಮೀನು ಕೂಡಾ ಅಚ್ಚಹಸುರಿನಿಂದ ಕಂಗೊಳಿಸುತ್ತಿದ್ದವೂ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೀದರ್ನ ಸ್ಮಾರಕಗಳಿಗಿಲ್ಲ ಜೀರ್ಣೋದ್ಧಾರ ಕಾರ್ಯ: ಅವನತಿಯತ್ತ ಪ್ರವಾಸಿ ತಾಣಗಳು
ಐತಿಹಾಸಿ ಬೀದರ್ ಕೋಟೆ ಅತ್ಯಂತ ವಿಶಾಲವಾದ ಕೋಟೆಯಾಗಿದ್ದು 15 ನೇಯ ಶತಮಾನದಲ್ಲಿ ಈ ಕೊಟೆಯನ್ನ ಕಟ್ಟಿಸಲಾಗಿದೆ. ಈ ಕೊಟೆಯ ಒಳಗಡೆಯೊಂದು ಪುಟ್ಟ ಊರಿದ್ದು ನೂರಾರು ವರ್ಷಗಳಷ್ಟು ಹಳೆದಾದ ಊರಾಗಿದ್ದು ಇಲ್ಲಿ 25 ಕ್ಕೂ ಹೆಚ್ಚು ಮನೆಗಳಿವೆ. 25 ಎಕರೆಯಷ್ಟು ಫಲವತ್ತಾದ ಜಮೀನು ಇಲ್ಲಿದ್ದು ಇಲ್ಲಿ ನೂರಾರು ವರ್ಷದಿಂದ ಗ್ರಾಮಸ್ಥರು ಇಲ್ಲಿನ ಜಮೀನಿನಲ್ಲಿ ತರಕಾರಿಯನ್ನ ಬೆಳೆಯುತ್ತಿದ್ದಾರೆ. ಎರಡು ಬಾವಿಯ ನೀರು ಸುಮಾರು 45 ಎಕರೆಯಷ್ಟು ಜಮೀನಿಗೆ ನೀರು ಪೂರೈಕೆ ಮಾಡುತ್ತಿದ್ದು ರೈತರ ಹೊಲವನ್ನ ಹಸಿರಾಗಿಸಿದೆ.
ಬಾವಿಯ ನೀರನ್ ಬಳೆಕ ಮಾಡಿಕೊಂದು ವರ್ಷದ 12 ತಿಂಗಳು ಪುದಿನಾ, ಪಾಲಕ್, ಬೆಳೆಯುತ್ತಿದ್ದು ಇಲ್ಲಿ ಬೆಳೆಯುವ ಪುದಿನಾಗೆ ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆಯಿದೆ. ಇನ್ನೂ ಇಲ್ಲಿನ ಬಾವಿಯ ನೀರು ಎಂತಹ ಭೀಕರ ಬರಗಾಲದಲ್ಲಿಯೂ ಬತ್ತಿದ ಉದಾಹರಣೆ ಇಲ್ಲ. ಹೀಗಾಗಿ ಈ ಬಾವಿಯೂ ರೈತರಿಗೆ ವರವಾಗಿದ್ದು ರೈತರ ಹೊಲವನ್ನ ಹಸಿರಾಗಿಸಿದೆ. ನಿಜಾಮರ ಕಾಲದಲ್ಲಿಯೂ ಇದೇ ಜಾಗದಲ್ಲಿ ಬೆಳೇದ ತರಕಾರಿಯನ್ನ ಅಂದಿನಕಾಲದ ರಾಜ ಮಹಾರಾಜರು ಸೇವನೆ ಮಾಡುತ್ತಿದ್ದರು ಎಂದು ಕೂಡ ಇಲ್ಲಿ ಹೇಳಲಾಗುತ್ತಿದೆ.
ಎಂತಹ ಸಮಯದಲ್ಲಿಯೂ ಇಲ್ಲಿನ ಬಾವಿಯಲ್ಲಿ ನೀರು ಖಾಲಿಯಾಗುವುದಿಲ್ಲ ಹೀಗಾಗಿಯೇ ಇದೆ ಬಾವಿಯ ನೀರನ್ನ ಬಳಸಿಕೊಂಡು ಇಲ್ಲಿ ತರಕಾರಿ ಬೆಳೆಯುತ್ತಿದ್ದು ಬೆಸಿಗೆಯಲ್ಲಿಯೂ ಇಡೀ ಊರಿನ ಸುತ್ತಮುತ್ತಲೂ ಹಚ್ಚಹಸಿರುನಿಂದಾ ಕಂಗೊಳಿಸುತ್ತಿರುತ್ತದೆ.
ಇಲ್ಲಿ ಬೆಳೆಯುವ ಪಾಲಕ್, ಪುದಿನಾಗಿದೆ ಭಾರೀ ಬೇಡಿಕೆ
ವರ್ಷದ 12 ತಿಂಗಳು ತುಂಬಿ ತುಳುಕುವ ನೀರನ್ನ ಬಳಸಿಕೊಂಡು ಇಲ್ಲಿನ ರೈತರು ಇಲ್ಲಿ ಅತೀ ಹೆಚ್ಚಾಗಿ ಪುದಿನಾ, ಪಾಕಲ್ ಸೊಪ್ಪ ಅತೀ ಹೆಚ್ಚು ಬೆಳೆಸಲಾಗುತ್ತಿದ್ದು ಇಲ್ಲಿ ಬೆಳೆಸಲಾದ ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿಂದ. ಜೊತೆಗೆ ಇಲ್ಲಿನ ಪುದಿನಾ ಸೊಪ್ಪಿನ ವಾಸನೆಗೆ ಗ್ರಾಹಕರು ಫಿದಾ ಆಗುತ್ತಾರೆ. ಇಲ್ಲಿ ಬೆಳೆದ ಪುದಿನಾ ದೂರದ ಹೈದರಾಬಾದ್ ಮಾರುಕಟ್ಟೆ ಬೀದರ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ.
ಇದನ್ನೂ ಓದಿ: ಮಲೀನವಾಗ್ತಿದೆ ಐತಿಹಾಸಿಕ ಪಾಪವಿನಾಶ ಮಂದಿರದ ಕೆರೆ; ವಿಷಕಾರಿ ನೀರು ಕುಡಿದು ಮೀನು, ಪಕ್ಷಿಗಳು ಸಾವು
ಬೀದರ್ನ ಒಳಕೋಟೆ ಪುದಿನಾ ಅಂದರೆ ವ್ಯಾಪಾರಿಗಳು ಮುಗಿಬಿದ್ದು ಖರೀದಿಸುತ್ತಿದ್ದಾರೆ ಅಷ್ಟೊಂದು ಸುವಾಸನೆ ಉತ್ತಮ ಗುಣಮಟ್ಟದ ಪುದೀನಾ ಇಲ್ಲಿ ಬೆಳೆಸಲಾಗುತ್ತದೆ. ಮಳೆಗಾಲ ಚಳೆಗಾಲ, ಬೆಸಿಗೆ ಕಾಲದ ಮೂರು ಋತುವಿನಲ್ಲಿಯೂ ಇಲ್ಲಿ ತರಕಾರಿಯನ್ನೇ ಬೆಳೆಯಲಾಗುತ್ತದೆ. ಸುಮಾರು ಹತ್ತು ಶತಮಾನಗಳಿಂದಲೂ ಇಲ್ಲಿ ವ್ಯವಸಾಯ ಮಾಡಿಕೊಂಡೆ ಇಲ್ಲಿನವರು ಬದುಕುಕಟ್ಟಿಕೊಂಡಿದ್ದಾರೆ.
ಬೀದರ್ನ ಒಳಕೋಟೆಯಲ್ಲಿರುವ ಬಾವಿಯಂತೆಯೇ ಜಿಲ್ಲೆಯನ ಬೇರೆ ಬೇರೆ ಭಾಗದಲ್ಲಿ ನಿಜಾಮರು ಕುಡಿಯುವ ನೀರಿಗಾಗಿ ಅದೆಷ್ಟೋ ಬಾವಿಗಳನ್ನ ಕೊರೆಸಿದ್ದಾರೆ, ಅವುಗಳಲ್ಲಿಯೂ ಕೂಡಾ ನೀರು ಸದಾಕಾಲ ಇರುತ್ತದೆ ಅಂತಹ ಬಾವಿಗಳನ್ನೂ ಕೂಡಾ ಜಿಲ್ಲಾಡಳಿತ ಪತ್ತೆ ಮಾಡಿ ಅಪರೂಪದಲ್ಲಿ ಅಪರೂಪವಾದ ಬಾವಿಗಳ ನೀರನನ್ನ ಬಳಸಿಕೊಳ್ಳಬೇಕಾಗಿದೆ. ಏನೇ ಇರಲಿ ಶತ ಶತಮಾನಗಳಿಂದ ಎಂದೂಕೂಡಾ ಬತ್ತದ ಐತಿಹಾಸಿಕ ಬಾವಿಗಳು ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೇಯ ಸಂಗತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.