ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ; ಕಿಂಗ್‌ಪಿನ್ ಸಹೋದರರ ಅನುಪಸ್ಥಿತಿಯಲ್ಲಿ ಸಾಮೂಹಿಕ ವಿವಾಹ
ಪಾಟೀಲ್ ಬೆಂಬಲಿಗರು, ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನಡೆದಿದೆ. ಸದ್ಯ ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಸಹೋದರರೇ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದರು. ತ
ಕಲಬುರಗಿ: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್‌ಪಿನ್ ಸಹೋದರರಾದ ರುದ್ರಗೌಡ ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್ ಬಂಧನಕ್ಕೊಳಗಾಗಿದ್ದಾರೆ. ಪಾಟೀಲ್ ಸಹೋದರರ ಅನುಪಸ್ಥಿತಿಯಲ್ಲೇ ಇಂದು (ಏಪ್ರಿಲ್ 23) ಸಾಮೂಹಿಕ ವಿವಾಹ ನಡೆದಿದೆ. ಅಫಜಲಪುರದ ನ್ಯಾಷನಲ್ ಪೆನ್ಷನ್ ಹಾಲ್ನಲ್ಲಿ ಮದುವೆ (Marriage) ಸಮಾರಂಭ ನಡೆಯಿತು. ಕುಟುಂಬಸ್ಥರ ಸಮ್ಮುಖದಲ್ಲಿ 57 ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿವೆ.
ಪಾಟೀಲ್ ಬೆಂಬಲಿಗರು, ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನಡೆದಿದೆ. ಸದ್ಯ ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಸಹೋದರರೇ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದರು. ತಮ್ಮ ರಾಜಕೀಯ ಬೆಳವಣಿಗೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರುದ್ರಗೌಡ ಪಾಟೀಲ್ ತಯಾರಿ ನಡೆಸಿದ್ದರು. ಯಾವುದಾದರು ರಾಜಕೀಯ ಪಕ್ಷದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದರು.
ಎಫ್ಡಿಎ, ಎಸ್ಡಿಎ ಅಕ್ರಮದಲ್ಲಿ ರುದ್ರಗೌಡ ಹೆಸರು: ಈ ಹಿಂದೆ ಕಲಬುರಗಿಯಲ್ಲಿ ಎಫ್ಡಿಎ, ಎಸ್ಡಿಎ, ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. 2015 ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಪ್ರಶ್ನೆ ಪತ್ರಿಕೆ ಲೀಕ್ ಮಾಡಿ, ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಉತ್ತರ ಹೇಳುತ್ತಿದ್ದ ಗ್ಯಾಂಗ್ ಪತ್ತೆಯಾಗಿತ್ತು. ಆಗ ಕಲಬುರಗಿ, ವಿಜಯಪುರ ಸೇರಿದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ 14 ಜನರನ್ನು ಬಂಧಿಸಲಾಗಿತ್ತು. ಅರವತ್ತು ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿತ್ತು. ಎಫ್ಡಿಎ, ಎಸ್ಡಿಎ ಪರೀಕ್ಷಾ ಕೇಂದ್ರದ ಸಿಬ್ಬಂದಿಯೇ ಅಕ್ರಮದಲ್ಲಿ ಭಾಗಿಯಾಗಿದ್ದರು. ಎರಡು ಪರೀಕ್ಷಾ ಕೇಂದ್ರದ ಆರು ಜನರು ಬಂಧಿತರಾಗಿದ್ದರು. ಪರೀಕ್ಷೆ ಮುಗಿದ ಮೇಲೆ ಉತ್ತರ ತುಂಬುತ್ತಿದ್ದ ಗ್ಯಾಂಗ್ ಪತ್ತೆಯಾಗಿತ್ತು. ಈ ಎರಡು ಪರೀಕ್ಷೆಯಲ್ಲಿ ಅಫಜಲಪುರ ತಾಲೂಕಿನ ಹೆಚ್ಚಿನ ಜನರು ಆಯ್ಕೆಯಾಗಿದ್ದರು. ಈ ಎರಡು ಪ್ರಕರಣದಲ್ಲಿ ರುದ್ರಗೌಡ ಹೆಸರು ಕೇಳಿ ಬಂದಿತ್ತು. ಆದರೆ ರುದ್ರಗೌಡ ಪಾಟೀಲ್ನ ವಿರುದ್ಧ ಸಾಕ್ಷಿಗಳು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಸುಮ್ಮನಾಗಿದ್ದರು.
PSI ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಹೇಗೆ?: ಎಲೆಕ್ಟ್ರಾನಿಕ್ ಡಿವೈಸ್ ಮೂಲಕ PSI ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಕಿಂಗ್‌ಪಿನ್‌ಗಳು ಮೊದಲು ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದರು. ಹಣದ ಡೀಲ್ ಫಿಕ್ಸ್ ಆದ ಮೇಲೆ ಮುಂದಿನ ಕಾರ್ಯಾಚರಣೆ ನಡೆಸುತ್ತಿದ್ದರು. ಪರೀಕ್ಷಾ ಕೇಂದ್ರದ ಬಗ್ಗೆಯೂ ಕಿಂಗ್‌ಪಿನ್‌ಗಳು ನಿರ್ಧರಿಸುತ್ತಿದ್ದರು. ಪರೀಕ್ಷಾ ಕೇಂದ್ರ ಎಲ್ಲಿ ಬರಬೇಕೆಂದು ಫಿಕ್ಸ್ ಮಾಡಿಕೊಳ್ಳುತ್ತಿದ್ದರು. ಡೀಲ್‌ಗೆ ಒಪ್ಪಿದ ಅಭ್ಯರ್ಥಿಗಳಿಗೆ ಬೇರೆ ಸಿಮ್ ತರಲು ಹೇಳುತ್ತಿದ್ದರು. ತಮ್ಮ ಮೊಬೈಲ್ ಸಿಮ್ ಬಿಟ್ಟು ಬೇರೆ ಸಿಮ್ ತರಲು ಹೇಳುತ್ತಿದ್ದರು. ಕಿಂಗ್‌ಪಿನ್‌ಗಳೂ ಬೇರೆಯವರ ಸಿಮ್‌ಕಾರ್ಡ್ ಪಡೆಯುತ್ತಿದ್ದರು. ಡೀಲ್‌ಗೆ ಒಪ್ಪಿದ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ನೀಡುತ್ತಿದ್ದರು. ಅಭ್ಯರ್ಥಿಗೆ ಯಾವ ಸಿರೀಸ್ ಪ್ರಶ್ನೆಪತ್ರಿಕೆ ಬರುತ್ತೆಂದು ಗೊತ್ತಾಗುತ್ತೆ. ಪ್ರಶ್ನೆಪತ್ರಿಕೆ ಸಿರೀಸ್ ಬಗ್ಗೆ ಕಿಂಗ್‌ಪಿನ್‌ಗೆ ಮೊದಲೇ ಗೊತ್ತಾಗುತ್ತಿತ್ತು. ಪರೀಕ್ಷಾ ಕೇಂದ್ರದಿಂದಲೇ ಕಿಂಗ್‌ಪಿನ್‌ಗಳು ಪ್ರಶ್ನೆಪತ್ರಿಕೆ ಪಡೆಯುತ್ತಿದ್ದರು. ದೂರದ ಸ್ಥಳದಲ್ಲಿದ್ದುಕೊಂಡು ಉತ್ತರ ಹೇಳುತ್ತಿದ್ದರು.
ಇದನ್ನೂ ಓದಿ
ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರ; ಸಿರಿಯಾ, ಪಾಕಿಸ್ತಾನದಿಂದ ಬೆದರಿಕೆ ಶಂಕೆ
Petrol Price Today: ಬೆಂಗಳೂರಿನಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಗೊತ್ತಾ?