AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯನವರೇ, ನಿಮಗೆ ಅವತ್ತು ಬ್ಯಾಟರಿ ಇರ್ಲಿಲ್ವಾ ..? ಸಿ.ಟಿ.ರವಿ

ಚಿಕ್ಕಮಗಳೂರು: ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರೋ ಟ್ವೀಟ್‍ಗೆ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಸಿದ್ದು ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿರೋ ಸಚಿವ ಸಿ.ಟಿ.ರವಿ, ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ರೆ, ನೀವೇ ಐದು ವರ್ಷ ಅಧಿಕಾರದಲ್ಲಿ ಇದ್ರಿ, ಸಂಘವನ್ನ ನಿಷೇಧ ಮಾಡಲು ಶಿಫಾರಸ್ಸು ಮಾಡಬಹುದಿತ್ತು. ನಿಮಗೆ ಆಗ ಬ್ಯಾಟರಿ ಇರ್ಲಿಲ್ವಾ ಎಂದು ಖಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಕಟುವಾಗಿ ಟೀಕಿಸಿದ್ದಾರೆ. ಸಂಘ ಹೇಳಿಕೊಡೋದು ದೇಶಭಕ್ತಿ ಹಾಗೂ ಸಂಸ್ಕಾರವನ್ನ.. ವಯಸ್ಸಾದ ಮೇಲೆ ಪ್ರಬುದ್ಧತೆ […]

ಸಿದ್ದರಾಮಯ್ಯನವರೇ, ನಿಮಗೆ ಅವತ್ತು ಬ್ಯಾಟರಿ ಇರ್ಲಿಲ್ವಾ ..? ಸಿ.ಟಿ.ರವಿ
ಸಾಧು ಶ್ರೀನಾಥ್​
| Edited By: |

Updated on:Aug 22, 2020 | 3:57 PM

Share

ಚಿಕ್ಕಮಗಳೂರು: ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರೋ ಟ್ವೀಟ್‍ಗೆ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಸಿದ್ದು ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿರೋ ಸಚಿವ ಸಿ.ಟಿ.ರವಿ, ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ರೆ, ನೀವೇ ಐದು ವರ್ಷ ಅಧಿಕಾರದಲ್ಲಿ ಇದ್ರಿ, ಸಂಘವನ್ನ ನಿಷೇಧ ಮಾಡಲು ಶಿಫಾರಸ್ಸು ಮಾಡಬಹುದಿತ್ತು. ನಿಮಗೆ ಆಗ ಬ್ಯಾಟರಿ ಇರ್ಲಿಲ್ವಾ ಎಂದು ಖಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಕಟುವಾಗಿ ಟೀಕಿಸಿದ್ದಾರೆ.

ಸಂಘ ಹೇಳಿಕೊಡೋದು ದೇಶಭಕ್ತಿ ಹಾಗೂ ಸಂಸ್ಕಾರವನ್ನ.. ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು. ಮನಸ್ಸು ಪಕ್ವ ಆಗಬೇಕು. ಪೂರ್ವಗ್ರಹ ಪೀಡಿತ ಮನೋಭಾವನೆಯಿಂದ ಹೊರಬರಬೇಕೆಂದು ಮಾತಿನಲ್ಲಿ ತಿವಿದಿದ್ದಾರೆ. ಸಂಘವನ್ನ ನೀವು ಎಷ್ಟು ಹತ್ತಿರದಿಂದ ನೋಡಿದ್ದೀರಾ ಎಂದು ಸಿ.ಟಿ.ರವಿ ಸಿದ್ದುಗೆ ಪ್ರಶ್ನಿಸಿದ್ದಾರೆ. ನಾನು ಸಂಘದ ಸ್ವಯಂ ಸೇವಕ. ಹಾಗಾಗಿಯೇ ಶಾಸಕ, ಸಚಿವನಾಗಿರೋದು. ನರೇಂದ್ರ ಮೋದಿಯವರು ಪ್ರಧಾನಿಯಾಗಿರೋದು. ಸಂಘ ಹೇಳಿಕೊಡೋದು ದೇಶಭಕ್ತಿ ಹಾಗೂ ಸಂಸ್ಕಾರವನ್ನ. ಟೀಕೆ ಮಾಡುವವರನ್ನ ಹತ್ಯೆ ಮಾಡಬೇಕೆಂಬುದು ಸಂಘದ ಮನೋಭಾವವಾಗಿದ್ರೆ ಬಹಳ ಜನ ಭೂಮಿ ಮೇಲೆ ಇರುತ್ತಿರಲಿಲ್ಲ.

ಟೀಕಿಸಿಯೂ ಉಳಿದಿದ್ದಾರೆ ಅಂದ್ರೆ ಸಂಘ ಹತ್ಯೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿಲ್ಲ ಎಂದಿದ್ದಾರೆ. ಗಾಂಧಿಜಿ ಹತ್ಯೆ ಆರೋಪವನ್ನ ನಿಮ್ಮ ಕಾಂಗ್ರೆಸ್ ಮುಖಂಡರು ಸಂಘದ ಮೇಲೆ ಹಾಕಿದ್ರು. ಆವತ್ತಿನ ಸರ್ಕಾರವೇ ನೇಮಕ ಮಾಡಿದ್ದ ಕಪೂರ್ ಕಮಿಷನ್ , ಗಾಂಧಿ ಹತ್ಯೆಗೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ ಎಂದಿತ್ತು. ಆರೋಪ ಮಾಡಿದವರೆ ಸಂಘದ ಮೇಲಿನ ಆರೋಪವನ್ನ ವಾಪಸ್ ತೆಗೆಯಬೇಕಾಯ್ತು. ಕೋರ್ಟ್ ಮುಂದೆ ಸಾಬೀತು ಪಡಿಸಿಕೊಳ್ಳಲು ಆಗಿಲ್ಲ.

ನಿಮ್ಮ ಟ್ವೀಟರ್ ಖಾತೆ ಹ್ಯಾಂಡಲ್ ಮಾಡುವವನಿಗೆ ಬುದ್ದಿ ಹೇಳಿ.. ಈಗ ಮತ್ತೆ ಅಂತಹದ್ದೇ ಆರೋಪ ಮಾಡುತ್ತಿದ್ದೀರಾ. ನಿಮ್ಮ ರಾಜಕೀಯ ತೆವಲಿಗೆ ದೇಶಭಕ್ತ ಸಂಘಟನೆ ಮೇಲೆ ಸುಳ್ಳ ಆರೋಪ ಮಾಡುವ ಕೆಲಸ ಮಾಡಬೇಡಿ. ಸಂಘ ಜಾತಿವಾದಿಯೂ ಅಲ್ಲ. ದೇಶದ್ರೋಹಿಯೂ ಅಲ್ಲ. ಸಂಘವನ್ನ ಟೀಕಿಸುವ ಭರದಲ್ಲಿ ದೇಶ ಒಡೆಯುವ, ಸಂಚು ರೂಪಿಸುವ ಮನೋಭಾವನೆ ಇರುವವರಿಗೆ ಬೆಂಬಲಿಸುವ ಪಾಪದ ಕೆಲಸಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ನಿಮ್ಮ ಟ್ವೀಟರ್ ಖಾತೆ ಹ್ಯಾಂಡಲ್ ಮಾಡುವವನಿಗೆ ಸ್ವಲ್ಪ ವಾಸ್ತಾವಿಕ ನೆಲೆಗಟ್ಟಿನ ಮೇಲೆ ಟ್ವೀಟ್ ಮಾಡಲು ಹೇಳಿ. ಇಲ್ಲವಾದ್ರೆ ಕಡೆಗಾಲದಲ್ಲಿ ನಿಮಗೂ ಕೆಟ್ಟ ಹೆಸರು ತರುತ್ತಾರೆ, ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂದಿದ್ದಾರೆ.

ನಿಮ್ಮ ಮಾಧ್ಯಮ ನಿರ್ವಹಣೆ ಮಾಡಿಕೊಳ್ಳುವಂತ ಕೆಲವರು ಹುಟ್ಟುವಾಗಲೇ ಸಂಘದ ದ್ವೇಷಿಯಾಗಿ ಹುಟ್ಟಿದ್ದಾರೆ. ಹಾಗಾಗಿ ಯಾರ್ಯಾರು ಸಂಘವನ್ನ ವಿರೋಧಿಸುತ್ತಾರೋ ಅವರೆಲ್ಲರನ್ನೂ ಅಪ್ಪಿಕೊಳ್ತಾರೆ. ಅವರೆಲ್ಲರ ಜೊತೆ ವೇದಿಕೆ ಹಂಚಿಕೊಳ್ತಾರೆ. ಹಾಗೇ ಹಂಚಿಕೊಳ್ಳುವವರ ಕೈಗೆ ನಿಮ್ಮ ಟ್ವೀಟರ್ ಕೊಟ್ಟು ನೀವು ಕೆಟ್ಟು ಹೋಗಬೇಡಿ ಎಂದಿದ್ದಾರೆ. ಸಂಘವನ್ನ ಟೀಕೆ ಮಾಡುವುದಕ್ಕೆ ಮುಂಚೆ ಸಂಘ ಮಾಡುತ್ತಿರೋ ಸಮಾಜಮುಖಿ ಕೆಲಸಗಳನ್ನ ಸ್ವಲ್ಪ ತಿಳಿದುಕೊಳ್ಳೋ ಕೆಲಸ ಮಾಡಿ.

ಏಕಲ ವಿದ್ಯಾಲಯಗಳಲ್ಲಿ ಕಲಿತೋರು ಯಾರೂ ಭಯೋತ್ಪಾದಕರಾಗಿಲ್ಲ.. ನಿಮಗೆ ಗೊತಿದ್ಯಾ ಏಕಲ ವಿದ್ಯಾಲಯಗಳು ಅಂದ್ರೆ ಏನೆಂದು. ಸರಸ್ವತಿ ಶಿಶು ಮಂದಿರ ಅಂದ್ರೆ ಗೊತ್ತಾ ನಿಮಗೆ. ಸರಸ್ವತಿ ಶಿಶುಮಂದಿರ ಹಾಗೂ ಏಕಲ ವಿದ್ಯಾಲಯಗಳಲ್ಲಿ ಕಲಿತೋರು ಯಾರೂ ಭಯೋತ್ಪಾದಕರಾಗಿಲ್ಲ. ಯಾರೂ ಕೊಲೆಗಡುಕರಾಗಿಲ್ಲ. ಅವರೆಲ್ಲಾ ದೇಶಭಕ್ತರಾಗಿದ್ದಾರೆ. ಅವರ್ಯಾರು ಜಾತಿವಾದಿಗಳು ಆಗಿಲ್ಲ. ಅವರು ದೇಶ ಪ್ರೇಮಿಗಳಾಗಿದ್ದಾರೆ. ಅರೆಬರೆ ತಿಳುವಳಿಕೆ ಇದ್ದೋರು ಸಮಾಜ ಒಡೆಯುವ ಕೆಲಸ ಮಾಡ್ತಾರೆ, ಜಾತಿ ವಾದಿಗಳಾಗ್ತಾರೆ. ವೋಟಿಗಾಗಿ ಎಲ್ಲರನ್ನೂ ತಬ್ಬಿಕೊಳ್ತಾರೆ ಎಂದು ಸಿದ್ದು ಹಾಗೂ ಸಂಘದ ವಿರೋಧಿಗಳ ವಿರುದ್ಧ ಸಚಿವ ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ.

Published On - 3:55 pm, Sat, 22 August 20

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ