AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC, ಖಾಸಗಿ ಬಸ್​​ ನಡುವೆ ಭೀಕರ ಅಪಘಾತ: ಇಬ್ಬರ ದಾರುಣ ಸಾವು; 35 ಮಂದಿಗೆ ಗಾಯ

ಶಿರಾ ರಾಷ್ಟ್ರೀಯ ಹೆದ್ದಾರಿ 48ರಲ್ಲಿ KSRTC ಮತ್ತು ಖಾಸಗಿ ಸ್ಲೀಪರ್ ಬಸ್ ನಡುವೆ ಭೀಕರ ಅಪಘಾತವಾಗಿದೆ. ಈ ದುರ್ಘಟನೆಯಲ್ಲಿ ಹಾವೇರಿ ಮತ್ತು ಗದಗ ಮೂಲದ ಇಬ್ಬರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಖಾಸಗಿ ಬಸ್ ಲೇನ್ ಬದಲಾವಣೆ ಮತ್ತು KSRTC ಅತಿಯಾದ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.

KSRTC, ಖಾಸಗಿ ಬಸ್​​ ನಡುವೆ ಭೀಕರ ಅಪಘಾತ: ಇಬ್ಬರ ದಾರುಣ ಸಾವು; 35 ಮಂದಿಗೆ ಗಾಯ
ಬಸ್​​ಗಳ ನಡುವೆ ಅಪಘಾತImage Credit source: Tv9 Kannada
Jagadisha B
| Edited By: |

Updated on: Apr 05, 2026 | 1:33 PM

Share

ತುಮಕೂರು, ಏಪ್ರಿಲ್​​ 05: ಶಿರಾ ತಾಲ್ಲೂಕಿನ ಮಿನಿ ವಿಧಾನಸೌಧ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ ನಡೆದಿದ್ದು, ಖಾಸಗಿ ಸ್ಲೀಪರ್​​ ಬಸ್​​ಗೆ KSRTC ಬಸ್​​ ಹಿಂದಿನಿಂದ ಗುದ್ದಿದೆ. ಅಪಘಾತದ ತೀವ್ರತೆಗೆ ಖಾಸಗಿ ಬಸ್​​ನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, 35 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಹಾವೇರಿ ಮೂಲದ ಪ್ರವೀಣ್ ಕೃಷ್ಣಪ್ಪ (28) ಮತ್ತು ಗದಗ ಮೂಲದ ಸಂಗೀತಾ (16) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ.

ಅಪಘಾತವಾಗಿರುವ ಎರಡೂ ಬಸ್​​ಗಳು ಬೆಂಗಳೂರಿಗೆ ಬರುತ್ತಿದ್ದವು ಎನ್ನಲಾಗಿದ್ದು ಹೆದ್ದಾರಿಯ ಮೂರನೇ ಲೇನ್​​ನಿಂದ ಏಕಾಏಕಿ ಎರಡನೇ ಲೇನ್​​ಗೆ ಖಾಸಗಿ ಬಸ್ ಬಂದಿರೋದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ವೇಳೆ ಮತ್ತೊಂದು ಲೇನ್​​ನಲ್ಲಿ ವೇಗವಾಗಿ ಬರುತ್ತಿದ್ದ ಕೆಎಸ್​ಆರ್​​ಟಿಸಿ ಬಸ್​​ ನಿಯಂತ್ರಣ ತಪ್ಪಿ ಖಾಸಗಿ ಬಸ್​​ನ ಹಿಂಭಾಕ್ಕೆ ಗುದ್ದಿದೆ. ಪರಿಣಾಮ ಖಾಸಗಿ ಬಸ್​​ನ ಹಿಂಬದಿ ಸೀಟ್​​ಗಳಲ್ಲಿದ್ದ ಇಬ್ಬರು ಪ್ರಾಣಬಿಟ್ಟಿದ್ದಾರೆ. ಬೇಜವಾಬ್ದಾರಿ ಚಾಲನೆ ಹಿನ್ನಲೆ ಘಟನೆ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ಕಾರು: ಓರ್ವ ಸಾವು, ಮೂವರು ಗಂಭೀರ

ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಬೈಕ್ ಹಾಗೂ ಲಾರಿ ನಡುವೆ ಅಪಘಾತ ನಡೆದ ಪರಿಣಾಮ ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ನಗರದ ಕುಣಿಗಲ್ ಸರ್ಕಲ್​​ನಲ್ಲಿ ನಡೆದಿದೆ. ಗೂಳರಿವೆ ಗ್ರಾಮದ ನಿವಾಸಿ ರಾಜಣ್ಣ (60) ಮೃತರಾಗಿದ್ದು, ಘಟನಾ ಸ್ಥಳಕ್ಕೆ ತುಮಕೂರು ಸಂಚಾರ ಪೊಲೀಸರು ಭೇಟಿನೀಡಿ,‌ ಪರಿಶೀಲನೆ ನಡೆಸಿದ್ದಾರೆ. ಅಪಘಾತವಾದ ಲಾರಿ ಹಾಗೂ ಲಾರಿ ಚಾಲಕನನ್ನ ವಶಕ್ಕೆ ಪಡೆಯಲಾಗಿದ್ದು, ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Jagadisha B
Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ