AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ! ಮಲ್ಪೆಯಲ್ಲಿ ಒಂದೇ ಮೀನು 1,80,000 ರೂ. ಗೆ ಮಾರಾಟ

ಸುಮಾರು ಒಂದು ಲಕ್ಷ ಎಂಬತ್ತು ಸಾವಿರಕ್ಕೆ ಮಾರಾಟವಾದ ಮೀನಿನ ಹೆಸರು ಗೋಳಿ ಮೀನು ಅಂತ. ಕೆಲವೊಮ್ಮೆ ಮಾತ್ರ ಮೀನುಗಾರರಿಗೆ ಸಮುದ್ರದಲ್ಲಿ ಸಿಗುವ ಅಪರೂಪದ ಮೀನು ಇದು.

ಅಬ್ಬಬ್ಬಾ! ಮಲ್ಪೆಯಲ್ಲಿ ಒಂದೇ ಮೀನು 1,80,000 ರೂ. ಗೆ ಮಾರಾಟ
1,80,000 ರೂ. ಗೆ ಮಾರಾಟವಾದ ಗೋಳಿ ಮೀನು
TV9 Web
| Edited By: sandhya thejappa|

Updated on:Nov 24, 2021 | 12:30 PM

Share

ಉಡುಪಿ: ಮೀನು ಪ್ರಿಯರ ಬಾಯಲ್ಲಿ ನೀರು ತರಿಸುವ ಸುದ್ದಿ ಇದು. ಉಡುಪಿಯ ಮಲ್ಪೆಯಲ್ಲಿ ಸಿಕ್ಕ ಮೀನೊಂದರ ದರ ಕೇಳಿದರೆ ಶಾಕ್ ಆಗುವುದರಲ್ಲಿ ನೋ ಡೌಟ್. ಸಾಮಾನ್ಯವಾಗಿ ಒಂದು ಕೆಜಿ ಮೀನಿಗೆ ಹೆಚ್ಚೆಂದರೆ 1,500 ರೂ. ರಿಂದ 2,000 ರೂ ಇರುತ್ತೆ. ಆದರೆ ಮಲ್ಪೆಯಲ್ಲಿ ಸಿಕ್ಕ ಮೀನು ಪ್ರತಿ ಕೆಜಿಗೆ 9,060 ರೂ. ರಂತೆ ಮಾರಾಟವಾಗಿದೆ. 20 ಕೆಜಿಯ ಒಂದೇ ಮೀನು ಸುಮಾರು 1,80,000 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆಯಿಂದ ಸೋಮವಾರ ಮೀನುಗಾರಿಕೆಗೆ ಹೋಗಿದ್ದಾಗ ಬಲರಾಮ್ ಹೆಸರಿನ ಬೋಟಿಗೆ ಈ ದುಬಾರಿ ಮೀನು ಬಿದ್ದಿದ್ದು, ಮೀನುಗಾರನಿಗೆ ಅದೃಷ್ಟ ಖುಲಾಯಿಸಿದೆ.

ಸುಮಾರು ಒಂದು ಲಕ್ಷ ಎಂಬತ್ತು ಸಾವಿರಕ್ಕೆ ಮಾರಾಟವಾದ ಮೀನಿನ ಹೆಸರು ಗೋಳಿ ಮೀನು ಅಂತ. ಕೆಲವೊಮ್ಮೆ ಮಾತ್ರ ಮೀನುಗಾರರಿಗೆ ಸಮುದ್ರದಲ್ಲಿ ಸಿಗುವ ಅಪರೂಪದ ಮೀನು ಇದು. ಈ ಮೀನು ಬಲೆಗೆ ಬಿದ್ದರೆ ದೊಡ್ಡ ಲಾಭ ತಂದುಕೊಡುತ್ತದೆ. ಶಾಮ್ ರಾಜ್ ತೊಟ್ಟಂರವರ ಬಲರಾಮ್ ಹೆಸರಿನ ಬೋಟಿಗೆ ಮೀನು ಸಿಕ್ಕಿದೆ.

ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಅಂತ ಕರೆಯುವ ಈ ಮೀನಿನ ಮತ್ತೊಂದು ಹೆಸರು ಫೋಲ್ ಫಿಶ್. ಈ ಮೀನು ಹೆಚ್ಚು ಬೆಲೆ ಬಾಳುವುದರಿಂದ ಸೀ ಗೋಲ್ಡ್ ಅಂತ ಕರೆಯುತ್ತಾರೆ. ಈ ಮೀನು ತಿನ್ನಲು ಬಹಳಷ್ಟು ರುಚಿಯಾಗಿರುತ್ತದೆ. ಅಲ್ಲದೇ ಸೌಂದರ್ಯವಧಕಕ್ಕೂ ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಬಲೆಗೆ ಬಿದ್ದ 30 ಕೆಜಿಯ ಕಾಂಡೈ ಮೀನು ಇನ್ನು ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ 30 ಕೆಜಿ ತೂಕದ ಕಾಂಡೈ ಮೀನು ಮೀನುಗಾರರ ಬಲೆಗೆ ಬಿದ್ದಿದೆ. ನವೀನ್ ಸಾಲ್ಯಾನ್ ಎಂಬುವರ ದೋಣಿ ಗಾಳಕ್ಕೆ ಮೀನು ಬಿದ್ದಿದ್ದು, ಉದ್ದವಾಗಿ ಇರುವ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ನಡೆಸಲಾಗಿದೆ. ಒಂದು ಕೆಜಿಗೆ 170 ರಂತೆ ಮಾರಾಟವಾಗಿದೆ. ಸಾಮಾನ್ಯವಾಗಿ ಕಾಂಡೈ ಮೀನು ಸಣ್ಣ ಗಾತ್ರವಾಗಿದ್ದರೆ 220 ರೂ.ಗಳಿಗೆ ಮಾರಟವಾಗುತ್ತದೆ. ಆದ್ರೆ ದೊಡ್ಡ ಗಾತ್ರದ ಕಾಂಡೈ ಮೀನುಗಳಿಗೆ ಅಷ್ಟೊಂದು ಬೆಲೆ ಇಲ್ಲ ಅಂತಾ ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ‌ಸದ್ಯ ದೊಡ್ಡ ಗಾತ್ರದ ಕಾಂಡೈ ಮೀನು ಮಲ್ಪೆ ಬಂದರಿನಲ್ಲಿ ನೋಡುಗರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಕಾಂಡೈ ಮೀನು ಹೆಚ್ಚೆಂದರೆ 5 ಕೆಜಿ ತೂಕವಿರುತ್ತೆ. ಆದರೆ ಬೋಟ್​ ಒಂದಕ್ಕೆ 30 ಕೆಜಿ ತೂಕದ ಕಾಂಡೈ ಮೀನು ಸಿಕ್ಕಿದೆ ಅಂತ ಮೀನುಗಾರರು ತಿಳಿಸಿದ್ದಾರೆ. ಈ ಮೀನು ತಿನ್ನಲು ರುಚಿಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ

ಕಾಂಡೈ ಮೀನು

ಇದನ್ನೂ ಓದಿ

ಅದರಿಂದಾದ ಆಘಾತ ಜೀವಮಾನವಿಡೀ ಇರುತ್ತದೆ; ಖಾಸಗಿ ಚಿತ್ರಗಳು ಲೀಕ್ ಆಗಿದ್ದ ಕುರಿತಂತೆ ನೋವು ಹೊರಹಾಕಿದ‌ ಆಸ್ಕರ್ ವಿಜೇತ ನಟಿ

ಸಿಎಂ ಬೊಮ್ಮಾಯಿ ಮತ್ತೊಮ್ಮೆ ಸಿಟಿ ರೌಂಡ್ಸ್; ಗುಂಡಿಮಯ ಹೆಣ್ಣೂರು ರಸ್ತೆಯಲ್ಲಿ ಹೋಗಲು ಸಿಎಂ ಹೈರಾಣ, ರಾಜಕಾಲುವೆ ಪರಿಶೀಲನೆ

Published On - 12:18 pm, Wed, 24 November 21

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ