AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ವರ್ಷ ಕಳೆದ್ರೂ ಮುಗಿಯದ ಕಾಮಗಾರಿ! ಪ್ರಾಣಭಯದಲ್ಲೇ ಸೇತುವೆ ಮೇಲೆ ಸಂಚಾರ

ಉತ್ತರ ಕನ್ನಡ: ಇವತ್ತು ಸರಿಹೋಗಬಹುದು.. ನಾಳೆ ಎಚ್ಚೆತ್ತುಕೊಳ್ಳಬಹುದು ಅಂತಾ ಮಂದಿ ಕಾಯ್ತಾನೇ ಇದ್ದಾರೆ. ಆದ್ರೆ ಹೀಗೆ ಕಾದು ಕಾದು ನಾಲ್ಕು ವರ್ಷಗಳೇ ಕಳೆದ್ರೂ ಆ ಸೇತುವೆ ಮಾತ್ರ ಪೂರ್ಣಗೊಳ್ಳುತ್ತಲೇ ಇಲ್ಲ. ಇದ್ರಿಂದ ಖರ್ಚುವೆಚ್ಚ ಹೆಚ್ಚಾಗ್ತಿದ್ಯೇ ಹೊರತು ಸವಾರರ ಆತಂಕ ಮಾತ್ರ ತಪ್ಪಲಿಲ್ಲ. ವರ್ಷಗಳೇ ಉರುಳಿದ್ವು. ಆದ್ರೂ ಇಲ್ಲಿನ ಚಿತ್ರಣ ಮಾತ್ರ ಚೇಂಜ್ ಆಗಿಲ್ಲ. ವಾಹನ ಸವಾರರಿಗೆ ಆತಂಕವೂ ತಪ್ಪಿಲ್ಲ. ಯಾಕಂದ್ರೆ ಪ್ರಯಾಣಿಕರಿಗೆ ವರವಾಗ್ಬೇಕಿದ್ದ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ಜನ ಮಾತ್ರ ನಿತ್ಯವೂ ಜೀವಭಯದಲ್ಲೇ ಸಂಚರಿಸುವಂತಾಗಿದೆ. 2016ರಲ್ಲೇ […]

4 ವರ್ಷ ಕಳೆದ್ರೂ ಮುಗಿಯದ ಕಾಮಗಾರಿ! ಪ್ರಾಣಭಯದಲ್ಲೇ ಸೇತುವೆ ಮೇಲೆ ಸಂಚಾರ
ಸಾಧು ಶ್ರೀನಾಥ್​
|

Updated on:Feb 08, 2020 | 4:35 PM

Share

ಉತ್ತರ ಕನ್ನಡ: ಇವತ್ತು ಸರಿಹೋಗಬಹುದು.. ನಾಳೆ ಎಚ್ಚೆತ್ತುಕೊಳ್ಳಬಹುದು ಅಂತಾ ಮಂದಿ ಕಾಯ್ತಾನೇ ಇದ್ದಾರೆ. ಆದ್ರೆ ಹೀಗೆ ಕಾದು ಕಾದು ನಾಲ್ಕು ವರ್ಷಗಳೇ ಕಳೆದ್ರೂ ಆ ಸೇತುವೆ ಮಾತ್ರ ಪೂರ್ಣಗೊಳ್ಳುತ್ತಲೇ ಇಲ್ಲ. ಇದ್ರಿಂದ ಖರ್ಚುವೆಚ್ಚ ಹೆಚ್ಚಾಗ್ತಿದ್ಯೇ ಹೊರತು ಸವಾರರ ಆತಂಕ ಮಾತ್ರ ತಪ್ಪಲಿಲ್ಲ.

ವರ್ಷಗಳೇ ಉರುಳಿದ್ವು. ಆದ್ರೂ ಇಲ್ಲಿನ ಚಿತ್ರಣ ಮಾತ್ರ ಚೇಂಜ್ ಆಗಿಲ್ಲ. ವಾಹನ ಸವಾರರಿಗೆ ಆತಂಕವೂ ತಪ್ಪಿಲ್ಲ. ಯಾಕಂದ್ರೆ ಪ್ರಯಾಣಿಕರಿಗೆ ವರವಾಗ್ಬೇಕಿದ್ದ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ಜನ ಮಾತ್ರ ನಿತ್ಯವೂ ಜೀವಭಯದಲ್ಲೇ ಸಂಚರಿಸುವಂತಾಗಿದೆ.

2016ರಲ್ಲೇ ₹ 14 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೇಡ್ತಿ ನದಿಗೆ ಹೊಸ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ಹಳೇ ಸೇತುವೆ ಮೇಲೆಯೇ ಜನ ಅಪಾಯದ ಸ್ಥಿತಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೇ ಸೇತುವೆಯಲ್ಲಿ ಒನ್​ವೇ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಸೇತುವೆ ಸಾಕಷ್ಟು ಹಳೆಯದ್ದಾಗಿದ್ದು ಕುಸಿಯೋ ಭೀತಿ ಇದೆ.

ಹೊಸ ಸೇತುವೆ ನಿರ್ಮಿಸಲು ಸುಮಾರು 14 ಕೋಟಿ ವೆಚ್ಚದಲ್ಲಿ 2016ರಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಗಿತ್ತು. ಆದ್ರೆ ಕಾಮಗಾರಿಯ ವೆಚ್ಚ 23 ಕೋಟಿ ದಾಟಿದ್ದರೂ ಕಾಮಗಾರಿ ಪೂರ್ತಿ ಮುಗಿಸಿಲ್ಲ. ಇದ್ರಿಂದ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

4 ವರ್ಷದಲ್ಲಿ 23 ಕೋಟಿ ವೆಚ್ಚ ದಾಟಿದ್ರೂ ಮುಗಿಯದ ಕಾಮಗಾರಿ: ಇನ್ನು ಕಳೆದ ಬಾರಿ ಜಿಲ್ಲೆಯಲ್ಲಿ ನೆರೆ ಉಂಟಾದಾಗ ಬೇಡ್ತಿ ನದಿ ಉಕ್ಕಿ ಹರಿದಿತ್ತು. ನೀರು ಸೇತುವೆಯ ಮೇಲೆ ಹರಿದುಹೋಗಿದ್ದರಿಂದ ಕಬ್ಬಿಣದ ರಾಡ್​ಗಳು ಕಿತ್ತು ಹೋಗಿದ್ದವು. ಒಂದು ವಾರ ಕಾಲ ಸೇತುವೆ ಮುಳುಗಿ ಶಿರಸಿ ಹಾಗೂ ಯಲ್ಲಾಪುರ ನಡುವಿನ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿ ವರ್ಷ ಮಳೆಗಾಲದ ವೇಳೆ ನದಿ ನೀರು ಹೆಚ್ಚಾದಾಗ ಹಳೆಯ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತೆ. ಹೀಗಾಗಿ ಈ ಬಾರಿಯಾದ್ರೂ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿ ಅನ್ನೋದೇ ಸ್ಥಳೀಯರ ಆಗ್ರಹ.

Published On - 3:32 pm, Sat, 8 February 20