AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಟ್ಕಳ: ರಸ್ತೆ ಪೂರ್ಣ ಮಾಡಿಕೊಡಿ ಎಂದ ಗ್ರಾಮಸ್ಥರಿಗೆ ಬಿಜೆಪಿ ಶಾಸಕನ ದರ್ಪದ ಮಾತು

ಭಟ್ಕಳ ತಾಲೂಕಿನ ಬೈಲೂರು ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಬಂದಿದ್ದ ಶಾಸಕನಿಗೆ ಗ್ರಾಮಸ್ಥರು ರಸ್ತೆಯನ್ನ ಪೂರ್ಣ ಮಾಡಿಕೊಡಿ ಎಂದು ಕೇಳಿದ್ದಾರೆ. ಈ ವೇಳೆ ಶಾಸಕ ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ತಾಕತ್ತಿದ್ದರೆ ತಡೆಯಿರಿ ಎಂದು ಸಾರ್ವಜನಿಕರಿಗೆ ಅವಾಜ್​ ಹಾಕಿ ದರ್ಪವನ್ನ ತೋರಿಸಿರುವ ಘಟನೆ ನಡೆದಿದೆ.

ಭಟ್ಕಳ: ರಸ್ತೆ ಪೂರ್ಣ ಮಾಡಿಕೊಡಿ ಎಂದ ಗ್ರಾಮಸ್ಥರಿಗೆ ಬಿಜೆಪಿ ಶಾಸಕನ ದರ್ಪದ ಮಾತು
ಭಟ್ಕಳ-ಹೊನ್ನಾವರ ಬಿಜೆಪಿ ಶಾಸಕ ಸುನೀಲ್ ನಾಯ್ಕ
TV9 Web
| Edited By: |

Updated on:Feb 14, 2023 | 9:43 PM

Share

ಉತ್ತರ ಕನ್ನಡ: ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಭಟ್ಕಳ ತಾಲೂಕಿನ ಬೈಲೂರು ಗ್ರಾಮಕ್ಕೆ ಆಗಮಿಸಿದ್ದ ಭಟ್ಕಳ-ಹೊನ್ನಾವರ ಬಿಜೆಪಿ ಶಾಸಕ ಸುನೀಲ್ ನಾಯ್ಕ ಅವರಿಗೆ ರಸ್ತೆಯನ್ನ ಪೂರ್ಣ ಮಾಡಿಕೊಡಿ ಎಂದು ಗ್ರಾಮಸ್ಥರು ಕೇಳಿಕೊಂಡಿದ್ದಾರೆ. ಈ ವೇಳೆ ಶಾಸಕ ಸುನೀಲ್ ನಾಯ್ಕ ‘ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದೇ ಇಷ್ಟು, ನಾನು ಶಾಸಕ ರಸ್ತೆ ಮಾಡಲು ನನಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ತಾಕತ್ತಿದ್ದರೆ ನಿಲ್ಲಿಸಿ ಎಂದು ಗ್ರಾಮಸ್ಥರಿಗೆ ಆವಾಜ್ ಹಾಕುವ ಮೂಲಕ ದರ್ಪದ ಮಾತನ್ನಾಡಿದ್ದಾರೆ.

ತಾಲೂಕಿನ ಬೈಲೂರು ಗ್ರಾಮದ ರಸ್ತೆಯು 1.8 ಕಿಮೀ ಹಾಳಾಗಿದ್ದು, ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಇದೀಗ ರಸ್ತೆ ಕಾಮಗಾರಿ ಶುರುವಾಗಿದ್ದು, ಕೇವಲ 800 ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ಎಂಎಲ್‌ಎ ಸುನೀಲ್ ನಾಯ್ಕ್​ಗೆ ‘800 ಮೀಟರ್ ರಸ್ತೆ ಆದ ಬಳಿಕ 400 ಮೀಟರ್ ರಸ್ತೆ ಜಾಗೆ ಕಚ್ಚಾ ಉಳಿಯಲಿದೆ’. ಚುನಾವಣೆ ಮುಂದೆ ಇರುವ ಹಿನ್ನಲೆ ಸಂಪೂರ್ಣ ರಸ್ತೆ ಮಾಡಿಕೊಡಿ ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಿದ್ದಾರೆ. ಈಗ 25 ಲಕ್ಷ ಹಣ ಮಂಜೂರಾಗಿದೆ, ಮುಂದಿನ ದಿನಗಳಲ್ಲಿ ಮಾಡುತ್ತೆನೆ ಎಂದ ಶಾಸಕರು, ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾಡುವುದಾದರೆ ಪೂರ್ತಿ ರಸ್ತೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಶಾಸಕರ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಶಾಸಕನ ವರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Tue, 14 February 23