ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟಿತಾ ಮಂಕಿ ಪಾಕ್ಸ್ ? ಟಿಬೆಟ್ ಕ್ಯಾಂಪ್‌ನಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ಪತ್ತೆ
ಜುಲೈ 1ರಂದು ಬಾಲಕ ತಮ್ಮ ಪೋಷಕರೊಂದಿಗೆ ಬೆಲ್ಜಿಯಂನಿಂದ ದೆಹಲಿ, ಹಿಮಾಲಯ ಪ್ರದೇಶ ಹಾಗೂ ಮಹಾರಾಷ್ಟ್ರ ಮೂಲಕ ಭಾರತಕ್ಕೆ ವಾಪಸಾಗಿದ್ದ ಬಾಲಕ ಜು.27ರಂದು ಟಿಬೆಟ್ ಕ್ಯಾಂಪ್ ತಲುಪಿದ್ದ. ಸದ್ಯ ಬಾಲಕನಲ್ಲಿ ಮಂಕಿ ಪಾಕ್ಸ್ ಸೋಂಕಿನ ಲಕ್ಷಣಗಳು ಕಂಡು ಬಂದಿವೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಗೂ ಮಂಕಿ ಪಾಕ್ಸ್(Monkeypox) ಸೋಂಕು ಕಾಲಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟ್ ಕ್ಯಾಂಪ್‌ನಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಬೆಲ್ಜಿಯಂನಿಂದ ವಾಪಸಾಗಿದ್ದ 9 ವರ್ಷದ ಬಾಲಕನಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು ಮೈ ಮೇಲೆಲ್ಲ ಗುಳ್ಳುಗಳು ಎದ್ದಿವೆ.
ಜುಲೈ 1ರಂದು ಬಾಲಕ ತಮ್ಮ ಪೋಷಕರೊಂದಿಗೆ ಬೆಲ್ಜಿಯಂನಿಂದ ದೆಹಲಿ, ಹಿಮಾಲಯ ಪ್ರದೇಶ ಹಾಗೂ ಮಹಾರಾಷ್ಟ್ರ ಮೂಲಕ ಭಾರತಕ್ಕೆ ವಾಪಸಾಗಿದ್ದ ಬಾಲಕ ಜು.27ರಂದು ಟಿಬೆಟ್ ಕ್ಯಾಂಪ್ ತಲುಪಿದ್ದ. ಸದ್ಯ ಬಾಲಕನಲ್ಲಿ ಮಂಕಿ ಪಾಕ್ಸ್ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಬಾಲಕನ ರಕ್ತದ ಮಾದರಿಯನ್ನು ಲ್ಯಾಬ್‌ಗೆ ರವಾನಿಸಲಾಗಿದೆ. ಬಾಲಕನ ರಕ್ತದ ಮಾದರಿ ಬಿಎಂಸಿಆರ್‌ಐ ಮತ್ತು ವಿಆರ್‌ಡಿಎಲ್ ಗೆ ಕಳಿಸಿಕೊಡಲಾಗಿದ್ದು ರಕ್ತದ ವರದಿ ಬಂದ ಬಳಿಕ ಸೋಂಕಿನ ಬಗ್ಗೆ ದೃಢಪಡಲಿದೆ. ಶಂಕಿತ ಮಂಕಿ ಪಾಕ್ಸ್ ಪ್ರಕರಣದ ಬಗ್ಗೆ ಡಿಹೆಚ್‌ಓ ಶರದ್‌ನಾಯಕ್ ಮಾಹಿತಿ ನೀಡಿದ್ದಾರೆ.
ಕೊರೋನಾ ಸೋಂಕಿನ ರೀತಿ ಮಂಕಿಪಾಕ್ಸ್ ಸೋಂಕು ಹರಡುವುದಿಲ್ಲ: ಸಚಿವ ಸುಧಾಕರ್
ಬೆಂಗಳೂರು: ಮಂಕಿಪಾಕ್ಸ್ (Monkeypox) ಸೋಂಕು ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರಿನಲ್ಲಿ (Bengaluru) ಆರೋಗ್ಯ ಸಚಿವ ಡಾ. ಸುಧಾಕರ್ (K Sudhakar) ಹೇಳಿದ್ದಾರೆ. ಏರ್ಪೋರ್ಟ್ನಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಿದ್ದೇನೆ. ಕೊವಿಡ್ ಸೋಂಕಿನ ರೀತಿ ಮಂಕಿಪಾಕ್ಸ್ ಸೋಂಕು ಹರಡುವುದಿಲ್ಲ. ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಮಂಕಿಪಾಕ್ಸ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ವಿಶೇಷ ಸಭೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದರು. ಸುಮಾರು ೮೦ ದೇಶದಲ್ಲಿ ೨೦ ಸಾವಿರ ಜನರಿಗೆ ಈ ಸೋಂಕು ಹರಡಿದೆ. ಭಾರತದಲ್ಲಿ ಇದುವರೆಗೆ 6 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
Published On - 6:50 pm, Wed, 3 August 22