AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್​ಗೆ ಇರಲಿದೆ ವಾಲಿಡಿಟಿ: ಹೊಸ ಪ್ರಯೋಗಕ್ಕೆ ಮುಂದಾದ ಆರೋಗ್ಯ ಇಲಾಖೆ

ಕೊವಿಡ್ ಬಳಿಕ ಜನರುಲ್ಲಿ ಸೆಲ್ಪ್ ಮೆಡಿಕೇಶನ್ ಹೆಚ್ಚಾಗಿದೆ. ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದ್ರು ಮೆಡಿಕಲ್ ಶಾಪ್​ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆ್ಯಂಟಿ ಬಯಾಟಿಕ್‌ ಮಾತ್ರೆ ನುಂಗುತ್ತಿದ್ದಾರೆ. ಮೆಡಿಕಲ್ ಶಾಪ್​ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗ ಕಡಿವಾಣಕ್ಕೆ ಮುಂದಾಗಿದೆ.

ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್​ಗೆ ಇರಲಿದೆ ವಾಲಿಡಿಟಿ: ಹೊಸ ಪ್ರಯೋಗಕ್ಕೆ ಮುಂದಾದ ಆರೋಗ್ಯ ಇಲಾಖೆ
ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್​ಗೆ ಇರಲಿದೆ ವಾಲಿಡಿಟಿ: ಹೊಸ ಪ್ರಯೋಗಕ್ಕೆ ಮುಂದಾದ ಆರೋಗ್ಯ ಇಲಾಖೆ
Vinay Kashappanavar
| Edited By: |

Updated on: Aug 31, 2024 | 10:37 PM

Share

ಬೆಂಗಳೂರು, ಆಗಸ್ಟ್​​​ 31: ಜನರ ನಡೆ ಆರೋಗ್ಯ ಇಲಾಖೆ ಹಾಗೂ ವೈದ್ಯರ (doctor’s) ಆತಂಕಕ್ಕೆ ಕಾರಣವಾಗುತ್ತಿದೆ. ಕೊವಿಡ್ ಬಳಿಕ ಜನರು ಹೆಚ್ಚಾಗಿ ಸೆಲ್ಪ್ ಮೆಡಿಕೇಶನ್ ಹಾಗೂ ಮಾತ್ರೆಗಳ ಸೇವೆನೆಗೆ ಮುಂದಾಗಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದರು ಮೆಡಿಕಲ್ ಶಾಪ್​ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆ್ಯಂಟಿ ಬಯಾಟಿಕ್‌ ಮಾತ್ರೆ ನುಂಗುತ್ತಿದ್ದಾರೆ. ಇನ್ನು ಇತ್ತಿಚ್ಚಿಗೆ ಮಹಿಳೆಯು ಅಸುರಕ್ಷಿತ ಗರ್ಭಪಾತ ಮಾತ್ರೆಗನ್ನು ನುಂಗುತ್ತಿದ್ದು ವೈದ್ಯರ ಟೆನ್ಷನ್​ಗೆ ಕಾರಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಕಡಿವಾಣಕ್ಕೆ ಹೊಸ ಅಸ್ತ್ರ ಪ್ರಯೋಗಿಸಿದೆ.

ಇತ್ತಿಚ್ಚಿಗೆ ಜನರು ಬೇಕಾಬಿಟ್ಟಿಯಾಗಿ ಮಾತ್ರ ನುಂಗಿ ವೈದ್ಯರ ಟೆನ್ಷನ್​ಗೆ ಕಾರಣವಾಗುತ್ತಿದ್ದಾರೆ. ಕೊವಿಡ್ ಬಳಿಕ ಜನರು ಸಣ್ಣಪುಟ್ಟ ಸಮಸ್ಯೆಗೂ ಆ್ಯಂಟಿ ಬಯಾಟಿಕ್‌ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ತಾವೇ ಔಷಧ ಮಳಿಗೆಗೆ ಹೋಗಿ ಮಾತ್ರ ಖರೀದಿ ಮಾಡುತ್ತಿದ್ದಾರೆ. ಇನ್ನು ಔಷಧ ಮಾರಟ ಮಳಿಗೆ ಮೆಡಿಕಲ್ ಶಾಪ್​ಗಳು ಕೂಡ ಕನಿಷ್ಠ ಪ್ರಜ್ಞೆ ಇಲ್ಲದೆ ಯಾರಂದರೆ ಅವರಿಗೆ ಕೇಳಿದ ಔಷಧ ನೀಡುತ್ತಿವೆ.

ಇದನ್ನೂ ಓದಿ: ಗೈಡ್ ಲೈನ್ ಅಳವಡಿಕೆಗೆ ಪಿಜಿಗಳಿಗೆ ಡೆಡ್ ಲೈನ್ ಕೊಟ್ಟ ಪಾಲಿಕೆ, ಸೆಪ್ಟೆಂಬರ್ 15 ರೊಳಗೆ ರಿಜಿಸ್ಟರ್ ಆಗದಿದ್ರೆ ಪಿಜಿ ಬಂದ್

ಸೆಲ್ಪ್ ಮೆಡಿಕೇಶನ್ ಹಾಗೂ ಮಾತ್ರೆಗಳ ಸೇವೆನೆಗೆ ಕಂಗಾಲಾಗಿರುವ ವೈದ್ಯರು. ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದ್ರು ಮೆಡಿಕಲ್ ಶಾಪ್​ಗಳಿಗೆ ಹೋಗಿ ವೈದ್ಯರ ಪ್ರಿಸ್ಕ್ರಿಪ್ಷನ್ ತೊರಿಸಿ ಮೆಡಿಸಿನ್ ಹಾಗೂ ಆ್ಯಂಟಿ ಬಯಾಟಿಕ್‌ ಮಾತ್ರೆ ನುಂಗುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗೂ ಜನರು ಆ್ಯಂಟಿ ಬಯಾಟಿಕ್‌ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಅತಿಯಾದ ಆ್ಯಂಟಿ ಬಯಾಟಿಕ್‌ ಮಾತ್ರೆಗಳ ಬಳಕೆಯಿಂದ ಮಾತ್ರೆಗಳ ರಿಜೋಲೆನ್ಸ್ ದೇಹದಲ್ಲಿ ಹೆಚ್ಚಾಗಿದ್ದು ವೈದ್ಯರು ಪರದಾಡುವ ಸ್ಥಿತಿ ಎದುರಾಗಿದೆ.

ಆ್ಯಂಟಿ ಬಯಾಟಿಕ್‌ ರಿಜೋಲೆನ್ಸ್ ಮಾತ್ರೆಗಳ ಸೇವನೆಯಿಂದ ದೇಹದಲ್ಲಿ ಡ್ರಗ್ ರೆಜಿಲೆಸನ್ಸ್ ಬಂದಿದೆ. ಇದರಿಂದ ಆ್ಯಂಟಿ ಬಯೋಟಿಕ್ ಮಾತ್ರೆ ವರ್ಕೆ ಆಗುತ್ತಿಲ್ಲ. ಹೆಚ್ಚು ರೋಗನಿರೋಧಕ ಮಾತ್ರೆಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನೆ ಕಳೆದುಕೊಳ್ಳುತ್ತಿರುವ ಜನರು ಡೋಲೋ ಪ್ಯಾರೇಸಿಟಿಮಾಲ್ ಡಾರ್ಟ್ ಜನರಿಗೆ ತಗುಲುತ್ತಿಲ್ಲ. ಹೊಸ ರೋಗನಿರೋಧಕ ಮಾತ್ರೆಗಳನ್ನೆ ಅಭಿವೃದ್ಧಿ ಪಡಿಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶೇ 70% ಜನರು ಆ್ಯಂಟಿ ಬಯಾಟಿಕ್ ಮಾತ್ರೆಗಳ ದಾಸರಾಗುತ್ತಿದ್ದು ವೈದ್ಯರು ಪರದಾಡುವಂತಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಕಡಿವಾಣಕ್ಕೆ ಮುಂದಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್​ಗೆ ನಿಗದಿತ ಸಮಯ ಫಿಕ್ಸ್ ಮಾಡಲು ಮುಂದಾಗಿದ್ದು ನಂತರದ ದಿನಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾತ್ರ ನೀಡುವುದಕ್ಕೆ ನಿರ್ಬಂಧಕ್ಕೆ ಮುಂದಾಗಿದೆ.

ಇದನ್ನೂ ಓದಿ: ಬ್ಯಾನ್ ಆದ್ರೂ ಸಿಂಥೆಟಿಕ್ ಡೈ ಕಲರ್ ಬಳಕೆ: ಮಕ್ಕಳ ಹೊಟ್ಟೆ ಸೇರ್ತಿದೆ ಸ್ಲೋ ಪಾಯಿಸನ್

ಇನ್ನು ಔಷಧ ಮಳಿಗೆಗಳು ಕೌಂಟರ್ ಮೆಡಿಸಿನ್ ರೂಪದಲ್ಲಿ ಗರ್ಭಪಾತ ಮಾತ್ರೆ ಸೇರಿದ್ದಂತೆ ಕೆಲವು ಅಪಾಯಕಾರಿಯಾದ ಔಷಧಗಳನ್ನ ವೈದ್ಯರ ಸಲಹಾ ಚೀಟಿ ಇಲ್ಲದೆ ನೀಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯ ಆದೇಶ ಇದ್ರು ಕೂಡಾ ಕೆಲವು ಔಷಧ ಮಳಿಗೆಗಳು ನಿಯಮ ಉಲ್ಲಂಘನೆ ಮಾಡ್ತೀವೆ. ಈ ಹಿನ್ನಲೆ ಎಚ್ಚೆತ್ತುಗೊಂಡಿರುವ ಆರೋಗ್ಯ ಇಲಾಖೆ ಕಾನೂನು ಬಾಹಿರವಾಗಿ ಮಾತ್ರೆಗಳನ್ನ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೌಂಟರ್ ಮೆಡಿಸಿನ ನೀಡುವ ಮೆಡಿಕಲ್ ಶಾಪ್​ಗಳ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ ಹಾಗೂ ಕಾನೂನು ಶಿಕ್ಷೆಗೆ ಒಳಪಡಿಸಲು ಮುಂದಾಗಿದೆ. ಸದ್ಯ ವೈದ್ಯರು ಆರೋಗ್ಯ ಇಲಾಖೆಯ ಕ್ರಮ ಒಳೆಯದು ಅಂತಿದ್ದಾರೆ. ಇಲ್ಲದೆ ಇದ್ರೆ ಚಿಕಿತ್ಸೆ ನೀಡುವುದು ನಮಗೆ ಸಮಸ್ಯೆ ಎಂದು ಜನರಲ್ ಮೆಡಿಸಿನ್ ಡಾ ಸುರೇಶ್ ಹೇಳಿದ್ದಾರೆ.

ಒಟ್ನಲ್ಲಿ ಕೊವಿಡ್ ಬಳಿಕ ಜನರುಲ್ಲಿ ಸೆಲ್ಪ್ ಮೆಡಿಕೇಶನ್ ಹೆಚ್ಚಾಗಿದೆ. ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದ್ರು ಮೆಡಿಕಲ್ ಶಾಪ್​ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆ್ಯಂಟಿ ಬಯಾಟಿಕ್‌ ಮಾತ್ರೆ ನುಂಗುತ್ತಿದ್ದಾರೆ. ಇನ್ನು ಇದನ್ನ ಬಂಡವಾಳ ಮಾಡಿಕೊಂಡ ಕೆಲವು ಮೆಡಿಕಲ್ ಶಾಪ್​ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗ ಕಡಿವಾಣಕ್ಕೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ