AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಪೇಟೆ ಸರಣಿ ಅಪಘಾತ: ಕನ್ಯೆ ನೋಡಲು ಹೊರಟಿದ್ದ ಆ ಮೂರು ಜನ ಸೇರಿದ್ದು ಮಸಣಕ್ಕೆ!

ವಿಜಯನಗರದ ಹೊಸಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮದುವೆಗಾಗಿ ಕನ್ಯೆ ನೋಡಲು ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ವರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅತಿವೇಗದ ಲಾರಿಯೊಂದು ಬೈಕ್, ಕಾರು, ಕೆಎಸ್‌ಆರ್‌ಟಿಸಿ ಬಸ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೊಸಪೇಟೆ ಸರಣಿ ಅಪಘಾತ: ಕನ್ಯೆ ನೋಡಲು ಹೊರಟಿದ್ದ ಆ ಮೂರು ಜನ ಸೇರಿದ್ದು ಮಸಣಕ್ಕೆ!
ಮೃತರು
ವಿನಾಯಕ ಬಡಿಗೇರ್​
| Edited By: |

Updated on: Apr 20, 2026 | 10:20 AM

Share

ವಿಜಯನಗರ, ಏಪ್ರಿಲ್​​ 20: ಹೊಸಪೇಟೆ (Vijayanagara) ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಭಾನುವಾರ ನಡೆದಿತ್ತು. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ಆದರೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿನ್ನಪ್ಪಿದ್ದಾರೆಂದು ದೃಢಪಟ್ಟಿದೆ. ಮಗ ಕೊಟ್ರೇಶನ ಮದುವೆಗಾಗಿ ಕನ್ಯೆ ನೋಡಲು ತೆರಳುವಾಗಲೇ ಈ ಅವಘಡ ಸಂಭವಿಸಿದ್ದು, ಹಸೆಮಣೆ ಸೇರಬೇಕಾದವನು ಮಸಣ ಸೇರಿದ್ದಾನೆ.

ಹಮಾಲಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ಕಿತ್ನೂರು ಗ್ರಾಮದ ಸುಜಾತಾ (34), ನಾಗಪ್ಪ (58), ಕೊಟ್ರೇಶ್ (28) ಹಾಗೂ ತಿಮ್ಮಲಾಪುರದ ದುರ್ಗಪ್ಪ (55) ಮೃತ ದುರ್ದೈವಿಗಳು. ಮಗ ಕೊಟ್ರೇಶನಿಗಾಗಿ ಹುಡುಗಿಯನ್ನು ನೋಡಲು ತಂದೆ ನಾಗಪ್ಪ ಹಾಗೂ ತಾಯಿ ಸುಜಾತಾ ಕಿತ್ನೂರು ಗ್ರಾಮದಿಂದ ಗಂಗಾವತಿ ಕಡೆಗೆ ಬೈಕ್​ನಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ, ಹೊಸಪೇಟೆಗೆ ಮಾರ್ಗವಾಗಿ ಬರುತ್ತಿದ್ದ ಬೆಳ್ಳುಳ್ಳಿ ತುಂಬಿದ್ದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರೂ ಸೇರಿ ಹಮಾಲಿ ದುರ್ಗಪ್ಪ(ಹುಲಗಪ್ಪ) ಸಹ ಮೃತ ಪಟ್ಟಿದ್ದಾರೆ.

ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ, ಬೆಳ್ಳುಳ್ಳಿ ತುಂಬಿಕೊಂಡು ಚಿತ್ರದುರ್ಗದ ಕಡೆ ತೆರಳುತ್ತಿದ್ದ ಲಾರಿ ಅತಿವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ. ಸಮಯ ಮುಟ್ಟಲು ಚಾಲಕ ವೇಗ ಹೆಚ್ಚಿಸಿದ್ದರಿಂದ ನಿಯಂತ್ರಣ ತಪ್ಪಿದ ಲಾರಿ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಾರು ಹಾಗೂ KSRTC ಬಸ್‌ಗೆ ಡಿಕ್ಕಿ ಹೊಡೆದು ಕೊನೆಗೆ ಪಲ್ಟಿಯಾಗಿದೆ.

ಇದನ್ನೂ ಓದಿ ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ಇಬ್ಬರು ಸಾವು

ಡಿಕ್ಕಿಯ ರಭಸಕ್ಕೆ ಮೃತರ ದೇಹಗಳು ಛಿದ್ರಗಾಗಿದ್ದು, ದೃಶ್ಯ ಭೀಕಕವಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಘಟನೆಯ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!
ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!