ಮುಂದಿನ ಸಿಎಂ ಮುರಗೇಶ್ ನಿರಾಣಿ ಆಗಲಿ, ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ತೂರಿದ ಬಿಜೆಪಿಯ ಯುವ ಮುಖಂಡ
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಡಿಸೆಂಬರ್ 27ರಂದು ನಡೆದ ಭೀಮಾಶಂಕರ ಮಹಾರಾಜರ ರಥೋತ್ಸವದ ವೇಳೆ ಮುಂದಿನ ಸಿಎಂ ಮುರಗೇಶ್ ನಿರಾಣಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಹರಕೆ ಮಾಡಿಕೊಂಡು ಬಾಳೆ ಹಣ್ಣನ್ನು ದೇವರ ಮೇಲೆ ತೂರಿದ್ದಾರೆ.
ವಿಜಯಪುರ: ಮುಂದಿನ ಸಿಎಂ ಮುರಗೇಶ್ ನಿರಾಣಿ ಆಗಲಿ ಎಂದು ಅಭಿಮಾನಿ ಹರಕೆ ಸಲ್ಲಿಸಿದ ಘಟನೆ ನಡೆದಿದೆ. ಅಭಿಮಾನಿಗಳು ಭೀಮಾಶಂಕರ ಮಹಾರಾಜರ ರಥೋತ್ಸವದಲ್ಲಿ ಬಾಳೆ ಹಣ್ಣಿನ ಮೇಲೆ ಮುಂದಿನ ಸಿಎಂ ಮುರಗೇಶ್ ನಿರಾಣಿ ಎಂದು ಬರೆದು ದೇವರ ಮೇಲೆ ಬಾಳೆ ಹಣ್ಣು ಎಸೆದು ಬೇಡಿಕೆ ಇಟ್ಟಿದ್ದಾರೆ.ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಡಿಸೆಂಬರ್ 27ರಂದು ನಡೆದ ಭೀಮಾಶಂಕರ ಮಹಾರಾಜರ ರಥೋತ್ಸವದ ವೇಳೆ ಮುಂದಿನ ಸಿಎಂ ಮುರಗೇಶ್ ನಿರಾಣಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಹರಕೆ ಮಾಡಿಕೊಂಡು ಬಾಳೆ ಹಣ್ಣನ್ನು ದೇವರ ಮೇಲೆ ತೂರಿದ್ದಾರೆ. ಬಿಜೆಪಿಯ ಯುವ ಮುಖಂಡ ಸಿದ್ದು ರೇವೂರ್ ಇಂತಹದೊಂದು ವಿಶೇಷ ಹರಕೆ ಮಾಡಿಕೊಂಡಿದ್ದಾರೆ. ಅದ್ದೂರಿ ರಥೋತ್ಸವಕ್ಕೆ ಸಾವಿರಾರು ಭಕ್ತ ವೃಂದ ಸಾಕ್ಷಿಯಾಗಿತ್ತು.
ಅಪ್ಪು ಮತ್ತೆ ಹುಟ್ಟಿ ಬನ್ನಿ ಇನ್ನು ಮತ್ತೊಂದೆಡೆ ಭೀಮಾಶಂಕರ ಮಹಾರಾಜರ ಸನ್ನಿಧಿಯಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ. ಅಪ್ಪು ಫ್ಯಾನ್ ಭೀಮಾಶಂಕರ ಮಹಾರಾಜರ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದು ಬರೆದು ದೇವರಿಗೆ ಹರಕೆ ಸಲ್ಲಿಸಿದ್ದಾರೆ.
‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’.. ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ತೂರಿ ಪ್ರಾರ್ಥನೆ ಮೈಸೂರು: ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಆಗಬೇಕು ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆದು ಬೇಡಿಕೆ ಇಟ್ಟಿರುವ ಘಟನೆಯೊಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದಲ್ಲಿ ನಡೆದಿದೆ. ಕಾಡುವಡ್ಡರಗುಡಿಯ ಯುವಕನೋರ್ವ ಮುಂದಿನ ಸಿಎಂ ಸಿದ್ದರಾಮಯ್ಯ, ಮತ್ತೊಮ್ಮೆ ಸಿಎಂ ಆಗಲೆಂದು ದೇವರಲ್ಲಿ ಬೇಡಿಕೆ ಇಟ್ಟಿದ್ದಾನೆ. ಗದ್ದಿಗೆ ಗ್ರಾಮದ ಕೆಂಡಗಣ್ಣ ಸ್ವಾಮಿ ಜಾತ್ರಾಮಹೋತ್ಸವದಲ್ಲಿ ಹರಕೆ ಹೊತ್ತು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಆಗಬೇಕು ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆದಿದ್ದಾನೆ.
ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದೆ. ಈ ವೇಳೆ ಕಾಡುವಡ್ಡರಗುಡಿ ಗ್ರಾಮದ ಯುವಕ ಶರತ್ ಹರಕೆ ಹೊತ್ತಿದ್ದು ಶರತ್ ಬಾಳೆಹಣ್ಣಿನ ಮೇಲೆ ಬರೆದಿರುವ ಬೇಡಿಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೂರು ದಿನಗಳ ಕಾಲ ಕೆಂಡಗಣ್ಣ ಸ್ವಾಮಿ ಜಾತ್ರಾಮಹೋತ್ಸವ ನಡೆಯುತ್ತದೆ. ಈ ಜಾತ್ರೆ ಮೂಲಕ ಇನ್ನೊಮ್ಮೆ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಯುವಕ ದೇವರಿಗೆ ಪ್ರಾರ್ಥನೆ ಮಾಡಿಕೊಂಡಿದ್ದಾನೆ. ಐದು ವರ್ಷಗಳು ಉತ್ತಮ ಯೋಜನೆ ಹಲವು ಭಾಗ್ಯಗಳನ್ನು ನೀಡಿರುವ ಸಿದ್ದರಾಮಯ್ಯರೇ ರಾಜ್ಯಕ್ಕೆ ಸೂಕ್ತ. ಬಿಜೆಪಿ ಸರ್ಕಾರದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಈ ಹಿನ್ನೆಲೆ ಉತ್ತಮ ಆಡಳಿತ ನೀಡಲು ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗಬೇಕು ಎಂದು ಶರತ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸೂರಜ್ ರೇವಣ್ಣ ಮೇಲ್ಮನೆ ಪ್ರವೇಶಿಸಲಿ ಎಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಅಭಿಮಾನಿ ಬೇಡಿಕೆ
Published On - 12:57 pm, Tue, 28 December 21