ಹುಕ್ಕೇರಿ ಜಾತ್ರೆಯಲ್ಲಿ ಅರಳಿದ ಪುಷ್ಪಲೋಕ, ವಿಜಯಪುರದಲ್ಲೂ ಕಳೆಗಟ್ಟಿದ ತರಕಾರಿ, ಹಣ್ಣಿನ ದುನಿಯಾ

ವಿಜಯಪುರ: ಕಣ್ಮನ ಸೆಳೆಯೋ ಬಣ್ಣ ಬಣ್ಣದ ಹೂವುಗಳು. ಪುಷ್ಪಗಳಲ್ಲಿ ಅರಳಿರೋ ಕಲಾಕೃತಿಗಳು. ಗಮನಸೆಳೆಯೋ ಹಣ್ಣುಗಳಲ್ಲಿ ಅಳಿದ ಚಿತ್ತಾರ. ಅಬ್ಬಾ.. ಒಂದಾ ಎರಡಾ.. ಬಗೆ ಬಗೆ ಸುಮಗಳಲ್ಲಿ ಅರಳಿದ ಚಿತ್ತಾರ ನೋಡ್ತಿದ್ರೆ ನೋಡುಗರೆಲ್ಲಾ ಫಿದಾ ಆಗಿದ್ರು. ನಿಂತಲ್ಲೇ ಕಳೆದು ಹೋಗಿದ್ರು. ಅಂದ್ಹಾಗೆ ಹಾವೇರಿಯಲ್ಲಿ ಹೂವಿನ ಲೋಕವೇ ಧರೆಗಿಳಿದಿದೆ. ಹುಕ್ಕೇರಿ ಮಠದ ಜಾತ್ರಾ ಅಂಗವಾಗಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಭಾರಿ ಪ್ರಮಾಣದ ವೆರೈಟಿ ವೆರೈಟಿ ಹಣ್ಣುಗಳನ್ನ ಬಳಸಿಕೊಂಡು ಕಲಾವಿದರು ಸೇರಿದಂತೆ ವಿವಿಧ ರೀತಿಯ ಆಕರ್ಷಕ ಕೆತ್ತನೆಗಳನ್ನ ಕೆತ್ತಲಾಗಿದೆ. ಕ್ವಿಂಟಲ್​ಗಟ್ಟಲೆ ಹಳದಿ, […]

ಹುಕ್ಕೇರಿ ಜಾತ್ರೆಯಲ್ಲಿ ಅರಳಿದ ಪುಷ್ಪಲೋಕ, ವಿಜಯಪುರದಲ್ಲೂ ಕಳೆಗಟ್ಟಿದ ತರಕಾರಿ, ಹಣ್ಣಿನ ದುನಿಯಾ
Follow us
ಸಾಧು ಶ್ರೀನಾಥ್​
|

Updated on:Jan 07, 2020 | 12:41 PM

ವಿಜಯಪುರ: ಕಣ್ಮನ ಸೆಳೆಯೋ ಬಣ್ಣ ಬಣ್ಣದ ಹೂವುಗಳು. ಪುಷ್ಪಗಳಲ್ಲಿ ಅರಳಿರೋ ಕಲಾಕೃತಿಗಳು. ಗಮನಸೆಳೆಯೋ ಹಣ್ಣುಗಳಲ್ಲಿ ಅಳಿದ ಚಿತ್ತಾರ. ಅಬ್ಬಾ.. ಒಂದಾ ಎರಡಾ.. ಬಗೆ ಬಗೆ ಸುಮಗಳಲ್ಲಿ ಅರಳಿದ ಚಿತ್ತಾರ ನೋಡ್ತಿದ್ರೆ ನೋಡುಗರೆಲ್ಲಾ ಫಿದಾ ಆಗಿದ್ರು. ನಿಂತಲ್ಲೇ ಕಳೆದು ಹೋಗಿದ್ರು.

ಅಂದ್ಹಾಗೆ ಹಾವೇರಿಯಲ್ಲಿ ಹೂವಿನ ಲೋಕವೇ ಧರೆಗಿಳಿದಿದೆ. ಹುಕ್ಕೇರಿ ಮಠದ ಜಾತ್ರಾ ಅಂಗವಾಗಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಭಾರಿ ಪ್ರಮಾಣದ ವೆರೈಟಿ ವೆರೈಟಿ ಹಣ್ಣುಗಳನ್ನ ಬಳಸಿಕೊಂಡು ಕಲಾವಿದರು ಸೇರಿದಂತೆ ವಿವಿಧ ರೀತಿಯ ಆಕರ್ಷಕ ಕೆತ್ತನೆಗಳನ್ನ ಕೆತ್ತಲಾಗಿದೆ. ಕ್ವಿಂಟಲ್​ಗಟ್ಟಲೆ ಹಳದಿ, ಕೆಂಪು, ನೀಲಿ, ಬಿಳಿ ಹೀಗೆ ಬಣ್ಣ ಬಣ್ಣದ ಹೂವುಗಳಿಂದ ವಿವಿಧ ಬಗೆಯ ಆಕೃತಿಗಳನ್ನ ನಿರ್ಮಿಸಲಾಗಿದೆ.

ನಂದಿ, ಬಾತುಕೋಳಿ, ನವಿಲು, ಆನೆ, ಹುತಾತ್ಮ ಯೋಧರ ಸ್ಮಾರಕಗಳು ಪುಷ್ಪಪ್ರಿಯರ ಮನಗೆದ್ದಿದೆ. ಅದ್ರಲ್ಲೂ ಸಿರಿಧಾನ್ಯಗಳಲ್ಲಿ ಬಸವಣ್ಣ, ಮಠದ ಲಿಂಗೈಕ್ಯ ಸ್ವಾಮೀಜಿಗಳು, ಭುವನೇಶ್ವರಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಮೂರ್ತಿ ಎಲ್ಲರ ಕಣ್ಮನ ಸೆಳೆಯುತ್ತಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಂತೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ.     

ವಿಜಯಪುರದಲ್ಲೂ ಸುಮಗಳ ಸ್ವರ್ಗವೇ ಸೃಷ್ಟಿ: ಇತ್ತ ವಿಜಯಪುರದಲ್ಲೂ ಅಷ್ಟೇ. ಸುಮಗಳ ಸ್ವರ್ಗವೇ ಸೃಷ್ಟಿಯಾಗಿತ್ತು. ಕೃಷಿ ಮೇಳದ ಪ್ರಯುಕ್ತ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಮತ್ಸ್ಯ ಮೇಳ ಆಯೋಜನೆ ಮಾಡಿತ್ತು. ಸ್ಥಳೀಯ, ದೇಶಿ ಹಾಗೂ ವಿದೇಶಿ ಹೂವುಗಳು ಎಲ್ಲರನ್ನೂ ಸೆಳೆಯುತ್ತಿದ್ವು. ಬಿಳಿ ಹಳದಿ ಸೇವಂತಿಗೆ, ರೆಡ್ ಹಾಗೂ ಪಿಂಕ್ ಗುಲಾಬಿ ಸೇರಿದಂತೆ ಬಗೆ ಬಗೆಯ ಪುಷ್ಪಗಳು ಸಖತ್ ಅಟ್ರಾಕ್ಟ್ ಮಾಡ್ತಿದ್ವು. ತರಕಾರಿ ಹಾಗೂ ಹಣ್ಣುಗಳಿಂದ ಮಾಡಿದ ನವಿಲು, ಗಿಳಿ, ಮೊಸಳೆ ಸೇರಿದಂತೆ ಇತರ ಪಕ್ಷಿ ಹಾಗೂ ಪ್ರಾಣಿಗಳ ಆಕೃತಿಗಳು ಆಕರ್ಷಿಸುತ್ತಿವೆ. ಇದ್ರ ಜತೆಗೆ ವೆರೈಟಿ ವೆರೈಟಿ ಮೀನುಗಳು ಮತ್ತೊಂದು ಮೇನ್ ಅಟ್ರಾಕ್ಷನ್.

Published On - 8:09 am, Tue, 7 January 20