ವಿಜಯಪುರ: ನಗರದ ಕಪಾಲಿ ಹೋಟೆಲ್ ಎದುರು ಅಪರಿಚಿತನ ಶವ ಪತ್ತೆಯಾಗಿದೆ. ರಾತ್ರಿ ಮದ್ಯ ಸೇವಿಸಿ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅಪರಿಚಿತ ವ್ಯಕ್ತಿ ರಾತ್ರಿ ಮದ್ಯ ಸೇವಿಸಿ ಬಿದ್ದಿರುವ ಶಂಕೆ ಮೂಡಿದ್ದು, ಮೃತ ಯುವಕ 20 ರಿಂದ 24 ವರ್ಷ ವಯಸ್ಸಿನವ ಎಂದು ತಿಳಿದು ಬಂದಿದೆ. ಗೋಳಗುಮ್ಮಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಶವದ ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ. ಯಾವುದೋ ರೋಗದಿಂದ ಬಳಲುತ್ತಿದ್ದು ಅಪರಿಚಿತ ಮೃತಪಟ್ಟಿರುವ ಸಂಶಯ ಮೂಡಿದೆ.