ವಿಜಯಪುರ: ಮಗಳನ್ನು ಉಳಿಸಿಕೊಡಿ ಎಂದು ಅಂಗಲಾಚಿದ ಪೋಷಕರು, ಸಹಾಯದ ನಿರೀಕ್ಷೆಯಲ್ಲಿ ಕುಟುಂಬ

ಆಕೆ 17 ವರ್ಷದ ಅಪ್ರಾಪ್ತ ಬಾಲಕಿ, ಹೆಸರು ಸೌಂದರ್ಯ. ಹೆಸರಿಗೆ ತಕ್ಕ ಹಾಗೆ ಸ್ಪುರದ್ರೂಪಿಯಾಗಿರುವ ಈ ಬಾಲಕಿ ಇದೀಗ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಯನ್ನ ಉಳಿಸಿಕೊಳ್ಳಲು ಬಾಲಕಿಯ ತಂದೆ ತಾಯಿ ಪರದಾಡುತ್ತಿದ್ದಾರೆ. ಫಸ್ಟ್ ಪಿಯು ಮುಗಿಸಿರುವ ಸೌಂದರ್ಯಳಿಗೆ ಇದೀಗ ಸಹಾಯದ ಅವಶ್ಯಕತೆಯಿದೆ.

ವಿಜಯಪುರ: ಮಗಳನ್ನು ಉಳಿಸಿಕೊಡಿ ಎಂದು ಅಂಗಲಾಚಿದ ಪೋಷಕರು, ಸಹಾಯದ ನಿರೀಕ್ಷೆಯಲ್ಲಿ ಕುಟುಂಬ
ಸಹಾಯಕ್ಕಾಗಿ ವಿನಂತಿಸುತ್ತಿರುವ ಕುಟುಂಬ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 17, 2023 | 3:15 PM

ವಿಜಯಪುರ: ಹೀಗೆ ತಂದೆ ತಾಯಿಯ ಜೊತೆಗೆ ಇರುವ ಈ ಅಪ್ರಾಪ್ತ ವಯಸ್ಸಿನ ಬಾಲಕಿ ಇದೀಗ ನೆರವಿನ ನಿರೀಕ್ಷೆಯಲ್ಲಿದ್ದಾಳೆ. ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದ ಮೂಲದವರಾದ ಸಂಗಪ್ಪಾ ಕುಂಬಾರ ಕಳೆದ 20 ವರ್ಷಗಳಿಂದ ವಿಜಯಪುರ ನಗರದಲ್ಲೇ ವಾಸವಿದ್ದಾರೆ. ಸ್ವಂತ ಮನೆಯಿಲ್ಲ, ಜಮೀನಿಲ್ಲ. ನಿತ್ಯ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದಾರೆ. ಸಂಗಪ್ಪ ಹಾಗೂ ನಿರ್ಮಲಾ ದಂಪತಿಗೆ ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗಾ ಎಂಬಂತೆ ಕೌಶಿಕ್ ಹಾಗೂ ಸೌಂದರ್ಯ ಎಂಬ ಇಬ್ಬರು ಮಕ್ಕಳು. ಕೌಶಿಕ್ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾನೆ. ಸೌಂದರ್ಯ ಪಿಯುಸಿ ಪ್ರಥಮ ವರ್ಷವನ್ನು ಈಗತಾನೆ ಮುಗಿಸಿದ್ದಾಳೆ. ಹೀಗೆ ಬಡತನದಲ್ಲಿಯು ಅನ್ನೋನ್ಯವಾಗಿದ್ದ ಸಂಸಾರದಲ್ಲಿ ನೆಮ್ಮದಿ ಇಲ್ಲವಾಗಿದೆ. ಕಾರಣ ಸೌಂದರ್ಯ ಒಂದು ವರಷದ ಮಗುವಾಗಿದ್ದಾಗಲೇ ಹೃದಯ ಸಂಬಂಧಿ ಖಾಯಿಲಿಗೆ ಒಳಗಾಗಿದ್ದಾಳೆ.

ಹೌದು ಅಲ್ಲಿಂದ ಹಿಡಿದು ಇಂದಿನವರೆಗೂ ಚಿಕಿತ್ಸೆ ಹಾಗೂ ಔಷಧೋಪಚಾರಗಳ ಮೇಲೆ ಬಂದಿದ್ದಾಳೆ. ಸೌಂದರ್ಯಳನ್ನು ಗುಣಮುಖಳನ್ನಾಗಿ ಮಾಡಲು ಪೋಷಕರು ವಿಜಯಪುರ, ಹುಬ್ಬಳ್ಳಿ, ಬೆಂಗಳೂರು, ಮಣಿಪಾಲ, ಮುಂಬೈ, ಸೊಲ್ಲಾಪುರ, ಸಾಂಗ್ಲಿ, ಮೀರಜ್ ಸೇರಿದಂತೆ ಕಂಡ ಕಂಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ವೈದರು ಸೌಂದರ್ಯಳಿಗೆ ಹೃದಯ ಸಂಬಂಧಿ ಖಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡಲು ಬರಲ್ಲ. ಔಷಧಿಗಳನ್ನು ಜೀವನ ಪರ್ಯಂತ ನೀಡುತ್ತಾ ಹೋಗಬೇಕೆಂದು ಹೇಳಿದ್ದಾರೆ. ನಿರಂತರ ಚಿಕಿತ್ಸೆ ಹಾಗೂ ಔಷಧಕ್ಕಾಗಿ ಇವರಿಗೆ ಪ್ರತಿ ತಿಂಗಳು 8 ರಿಂದ 10 ಸಾವಿರ ರೂಪಾಯಿ ಖರ್ಚಿದೆ. ಇಲ್ಲಿಯವರೆಗೂ ನಿತ್ಯ ದುಡಿದ ಹಣ ಹಾಗೂ ಸಾಲ ಸೋಲ ಮಾಡಿ ಔಷಧಿಗಳನ್ನು ತರುತ್ತಿದ್ದ ಕುಟುಂಬಕ್ಕೀಗ ಔಷಧೋಪಚಾರಕ್ಕೆ ಹಣವಿಲ್ಲವಾಗಿದೆ. ಹೃದಯ ಸಂಬಂಧಿ ಖಾಯಿಲೆ ಜೊತೆಗೆ ಇದೀಗ ಸೌಂದರ್ಯಳಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ಸಮಸ್ಯೆ ಉಲ್ಬಣವಾಗಿದೆ. ರಕ್ತಮಿಶ್ರಿತ ವಾಂತಿಯಾಗುತ್ತಿದೆ. ಕೈಯ್ಯಲ್ಲಿ ಹಣವಿಲ್ಲದೇ ಸಂಗಪ್ಪ ಹಾಗೂ ನಿರ್ಮಲಾ ಮಗಳ ಔಷಧಿಗಾಗಿ ಪರದಾಡುತ್ತಿದ್ದಾರೆ. ಕಣ್ಣೀರು ಹಾಕುತ್ತಾ ನಮಗೆ ಹಣಬೇಡಾ ನಮ್ಮ ಮಗಳಿಗೆ ಔಷಧಿಯನ್ನಾದರೂ ನೀಡಿ ಎಂದು ಕೈಯೊಡ್ಡಿದ್ದಾರೆ.

ಇದನ್ನೂ ಓದಿ:ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಕೊನೆಗೂ ಸಿಕ್ಕ ಸರ್ಕಾರದ ನೆರವು

ಕಳೆದ 16 ವರ್ಷಗಳಿಂದ ಸಂಗಪ್ಪ ಹಾಗೂ ನಿರ್ಮಲಾ ದಂಪತಿ ತಮ್ಮ ಮಗಳು ಸೌಂದರ್ಯಳಿಗೆ ಚಿಕಿತ್ಸೆ ಮುಂದುವರೆಸಿಕೊಂಡು ಬಂದಿದ್ದಾರೆ. ನಿತ್ಯ ಕೆಲಸ ಮಾಡಿ ಕೂಲಿನಾಲಿ ಮಾಡಿ ನಿರಂತರ ಚಿಕಿತ್ಸೆ ಕೊಡಿಸಿಕೊಂಡು ಸೌಂದರ್ಯಳನ್ನು ಉಳಿಸಿಕೊಳ್ಳಲು ಹೆಣಗಾಡಿದ್ದಾರೆ. ಬಡವತನವೆಂಬ ಭೂತ ಇದೀಗ ಇವರ ಕೈ ಕಟ್ಟಿ ಹಾಕಿದೆ. ನಿತ್ಯದ ಮಾತ್ರೆಗಳನ್ನು ಸಹ ತೆಗೆದುಕೊಳ್ಳದೇ ನಿತ್ರಾಣಗೊಳ್ಳುತ್ತಿರೋ ಸೌಂದರ್ಯ ಕುಂಬಾರಳಿಗೆ ಸಂಘ ಸಂಸ್ಥೆಯವರು ಆಸ್ಪತ್ರೆಯವರು ದಾನಿಗಳು ಔಷಧಕ್ಕಾಗಿ ಸಹಾಯ ಮಾಡಿದರೆ ಈ ಬಾಲಕಿಯ ಜೀವಕ್ಕೆ ಆಸರೆಯಾಗಲಿದೆ. ‘ನನ್ನ ಮಗಳ ಜೀವ ಉಳಿಸಿಕೊಡಿ, ನಾವು ಬಡವರು ಇಷ್ಟು ದಿನ ಕಷ್ಟಪಟ್ಟು ವನವಾಸ ಉಪವಾಸ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಇದೀಗ ನಮ್ಮ ಕೈಯ್ಯಲ್ಲಿ ಆಗುತ್ತಿಲ್ಲ. ಸಹಾಯ ಕೇಳುತ್ತಾರೆಂದು ಬಂಧು ಬಳಗ ಗೆಳೆಯರು ದೂರವಾಗಿದ್ದಾರೆ. ನಮಗೆ ಏನೂ ಬೇಡಾ ಔಷಧಿ ಮಾತ್ರ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ತನಗಾದ ಸಮಸ್ಯೆಯನ್ನು ಹೇಳಿಕೊಂಡಿರೋ ಸೌಂಧರ್ಯ ಕುಂಬಾರ ಸಹ ಸಹಾಯಕ್ಕಾಗಿ ಕೈ ಚಾಚಿದ್ದಾಳೆ.

ಬಾಳಿ ಬದುಕಬೇಕಾದ ಪುಟ್ಟ ಜೀವ ಇದೀಗ ಬದುಕಲು ಹೋರಾಟ ನಡೆಸಿದೆ. ಒಂದೆಡೆ ಹೃದಯ ಸಂಬಂಧಿ ಖಾಯಿಲೆ ಬಳಿಕ ಶ್ವಾಸಕೋಶದ ಸೋಂಕು ಸೌಂದರ್ಯಳ ಬದುಕಿಗೆ ಮಾರಕವಾಗಿದೆ. ಯಾರಾದರೂ ಸಂಘ ಸಂಸ್ಥೆಯವರು ಮೆಡಿಕಲ್ ಕಾಲೇಜಿನವರು, ಆಸ್ಪತ್ರೆಯವರು, ದಾನಿಗಳು ಆಕೆಯ ಜೀವ ಉಳಿಸಲು ಸಹಾಯ ಮಾಡಲು ಬಯಸಿದರೆ ನೇರವಾಗಿ ಬಾಲಕಿಯ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು. ಇಲ್ಲವೇ ಸೌಂದರ್ಯಳ ತಂದೆ ಸಂಗಪ್ಪ ಕುಂಬಾರ ಅವರ ಪೋನ್ ಪೇ ನಂಬರ್ 9860353991 ಗೆ ಹಣ ಹಾಕಬಹುದು. ಸದ್ಯ ಸಮಸ್ಯೆಯಲ್ಲಿರೋ ಸೌಂದರ್ಯ ಕುಂಬಾರ ಬ್ಯಾಂಕ್ ಖಾತೆಯ ಮಾಹಿತಿ ಇಲ್ಲಿದೆ ನೋಡಿ.

Account Holdre Name : Soundrya Sangappa Lumbar Bank Name : Union Bank Branch : Shivanagi Branch Vijayapur Taluka Ac num: 437802120002831 Ifsc code : UBIN0543781

ಈ ಖಾತೆಗೆ ಹಣ ಹಾಕಬಹುದಾಗಿದೆ. ಈ ಮೂಲಕ ಬಡ ಬಾಲಕಿಯ ಜೀವ ಉಳಿಸಲು ಕೈಜೋಡಿಸಬಹುದಾಗಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್