AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯಗೆ ಕೂಡಿಟ್ಟ 5 ಸಾವಿರ ರೂ. ಹಣ ನೀಡಿದ ಆ ಪುಟ್ಟ ಬಾಲಕಿ ಯಾರು? ಆಕೆಗೆ ಸಿದ್ದು ಹೇಳಿದ್ದೇನು? ಇಲ್ಲಿದೆ ಮಾಹಿತಿ

ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಗೆಲುವಿಗಾಗಿ ನೀಡಿದ್ದಾಳೆ.

TV9 Web
| Edited By: |

Updated on:Feb 11, 2023 | 8:59 PM

Share

ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ (Kumari Jiya) ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಚುನಾವಣಾ ಗೆಲುವಿಗಾಗಿ ನೀಡಿದ್ದಾಳೆ. ತನಗೆ ಪಾಕೆಟ್ ಮನಿ ರೂಪದಲ್ಲಿ ನೀಡಿದ್ದ ಹಣವನ್ನು ಕುಮಾರಿ ಜಿಯಾ ಕೂಡಿಟ್ಟಿದ್ದಳು. ಹೀಗೆ ಕೂಡಿಟ್ಟ 5 ಸಾವಿರ ರೂ. ಹಣವನ್ನು ಇಂದು (ಫೆ.11) ವಿಜಯಪುರದಲ್ಲಿ (Vijaypura) ನಡೆದ ಪ್ರಜಾಧ್ವನಿ (Bus Yatra) ಸಮಾವೇಶದ ವೇದಿಕೆಯಲ್ಲಿ ಕುದ್ದಾಗಿ ಚುನಾವಣಾ ಗೆಲುವಿಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾಳೆ. ಬಳಿಕ ಸಿದ್ದರಾಮಯ್ಯ ಹಣವನ್ನು ವಿದ್ಯಾರ್ಥಿನಿ ಜಿಯಾ ಮಣೂರಗೆ ವಾಪಸ್​ ನೀಡಿದ್ದಾರೆ. ನಿನ್ನ ವಿದ್ಯಾಭ್ಯಾಸಕ್ಕೆ ಹಣವನ್ನು ಉಪಯೋಗಿಸಿಕೊ. ಚೆನ್ನಾಗಿ ಓದು ಎಂದು ಕಿವಿ ಮಾತು ಹೇಳಿದ್ದಾರೆ.

ಯಾರು ಈ ವಿದ್ಯಾರ್ಥಿನಿ ಜಿಯಾ ಮಣೂರ

ಜಿಯಾ ಮಣೂರ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶಹಾಪೂರ ರಸ್ತೆಯಲ್ಲಿರುವ ಗ್ಲೋಬಲ್ ಸಾರ್ಟ್ ಕಿಡ್ಸ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ. ತಂದೆ ರಫೀಕ್ ಸೆಂಟ್ರಿಂಗ್​ ಕೆಲಸ ಮಾಡಿಕೊಂಡಿದ್ದು, ತಾಯಿ ಖಾಜಾಭೀ ಗೃಹಣಿ. ದಂಪತಿಗೆ ಒಟ್ಟು 8 ಜನ ಹೆಣ್ಣು ಮಕ್ಕಳಿದ್ದು, ಕೊನೆಯವಳೆ ಜಿಯಾ ಮಣೂರ. ಇಬ್ಬರ ಹೆಣ್ಣು ಮಕ್ಕಳ ಮದುವೆಯಾಗಿದ್ದು, 6 ಜನ ಹೆಣ್ಣ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Sat, 11 February 23

Follow Us
Web contact
Web contact

TV9 Kannada

Read More