
ಬೆಂಗಳೂರು, ಜುಲೈ 30: ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿರುವ ನೀರು ಬೆಂಗಳೂರಿಗೆ 5-6 ತಿಂಗಳಿಗೆ ಆಗುವಷ್ಟು ಮಾತ್ರ ಇದೆ. ಹೀಗಾಗಿ ಒಂದು ವೇಳೆ ಮಳೆಯಾಗದಿದ್ದರೆ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾ ತಿಳಿಸಿದ್ದಾರೆ. 124.80 ಅಡಿ ಗರಿಷ್ಠ ಮಟ್ಟ (49.452 ಟಿಎಂಸಿ) ಹೊಂದಿರುವ ಡ್ಯಾಂನಲ್ಲಿ ಇಂದು 92.14 ಅಡಿ (17.253 ಟಿಎಂಸಿ) ನೀರಿದ್ದು, 3,258 ಕ್ಯೂಸೆಕ್ ಒಳಹರಿವು ಮತ್ತು 1,699 ಕ್ಯೂಸೆಕ್ ಒಳ ಹರಿವನ್ನು ಡ್ಯಾಂ ಹೊಂದಿದೆ.
ಕಬಿನಿ ಡ್ಯಾಂ
ಮೈಸೂರಿನ ಕಬಿನಿ ಡ್ಯಾಂನಲ್ಲಿ ಇಂದು 77.05 ಅಡಿ (15.39 ಟಿಎಂಸಿ) ನೀರಿದ್ದು, ಕಳೆದ ವರ್ಷ ಇದೇ ದಿನ 81.46 (17.91 ಟಿಎಂಸಿ) ಅಡಿಯಷ್ಟಿತ್ತು. ಜಲಾಶಯಕ್ಕೆ 8,580 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ ನದಿಗೆ 500 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಭಾರೀ ಗಾಳಿ ಮಳೆ, ಒಳನಾಡಿನಲ್ಲೂ ವರ್ಷಧಾರೆಯ ಮುನ್ಸೂಚನೆ
ಆಲಮಟ್ಟಿ ಜಲಾಶಯ
519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಇಂದು 519.25 ಮೀಟರ್ ನೀರಿದೆ. ಒಳ ಹರಿವು 83,386 ಕ್ಯೂಸೆಕ್ ಮತ್ತು 97,078 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.
ಬಸವಸಾಗರ ಅಣೆಕಟ್ಟು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ 491.55 ಮೀಟರ್ ನೀರಿದ್ದು, ಡ್ಯಾಂನ ಗರಿಷ್ಠ ಮಟ್ಟ 492.25 ಮೀಟರ್ ಆಗಿದೆ. 95,000 ಕ್ಯೂಸೆಕ್ ಒಳಹರಿವು ಮತ್ತು 1,11,000 ಕ್ಯೂಸೆಕ್ ಹೊರ ಹರಿವನ್ನು ಜಲಾಶಯ ಇಂದು ಹೊಂದಿದೆ.
ಹಾರಂಗಿ ಜಲಾಶಯ
2859 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದಲ್ಲಿ ಸದ್ಯ 2857 ಅಡಿ ನೀರಿದೆ. ಜಲಾಶಯದ ಒಳಹರಿವು 4,613 ಕ್ಯೂಸೆಕ್ ಇದ್ದರೆ ಹೊರಹರಿವು 4,854 ಕ್ಯೂಸೆಕ್ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:46 am, Thu, 30 July 26