ಪತ್ನಿ ಸುರ ಸುಂದರಿಯಾಗಿದ್ರೂ ಪರ ಯುವತಿಯೊಂದಿಗೆ ಪತಿ ಲವ್ವಿಡವ್ವಿ: ಪ್ರಾಣ ಬಿಟ್ಟ ಹೆಂಡ್ತಿ!
ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಸಾಂಸಾರಿಕ ಜಗಳಗಳು ಸಾವಿನಲ್ಲಿ ಅಂತ್ಯವಾಗುತ್ತಿವೆ. ಇಲ್ಲೊಬ್ಬ ವ್ಯಕ್ತಿಯ ಹೆಂಡತಿ ಪರಮ ಸುಂದರಿ ಆಗಿದ್ದರೂ ಆತನಿಗೆ ಪರ ಯುವತಿಯ ಮೇಲೆ ಭಾರೀ ವ್ಯಾಮೋಹವಿತ್ತು. ಇದರಿಂದ ಮನನೊಂದು ಹೆಂಡತಿ ಸಾವಿಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಅಸ್ಮಾ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ಸಾವಿನ ಹಾದಿ ಹಿಡಿದಿದ್ದಾಳೆ.

ಬೆಂಗಳೂರು, (ಏಪ್ರಿಲ್ 08): ಪತಿ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ (illicit relationship) ಇಟ್ಟುಕೊಂಡಿದ್ದಕ್ಕೆ ಮನನೊಂದು ಪತ್ನಿ (Wife) ಆತ್ಮಹತ್ಯೆ ಮಾಡಿಕೊಂಡಿರುವ ಬೆಂಗಳೂರಿನ (Bengaluru) ಹೆಬ್ಬಾಳದ ಕನಕನಗರದಲ್ಲಿ ನಡೆದಿದೆ. ಎರಡು ವರ್ಷದಿಂದ ಅಷ್ಟೇ ಮದುವೆಯಾಗಿದ್ದ ಬಾಹರ್ ಅಸ್ಮಾ (29 ) ನೇಣಿಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಬಾಹರ್ ಅಸ್ಮಾ, ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆದರೆ ಪತಿ ಬಶೀರ್ ವುಲ್ಲಾ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಬೇಸರಗೊಂಡ ಪತ್ನಿ ಬಾಹರ್ ಅಸ್ಮಾ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಮೃತ ಬಾಹರ್ ಅಸ್ಮಾ ಅವರ ಕುಟುಂಬಸ್ಥರಿಂದ ನನ್ನ ಮಗಳ ಕೊಲೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪತಿ ಬಶೀರ್ ವುಲ್ಲಾ ವಿರುದ್ಧ ಅಸ್ಮಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ.. ಪತಿ ಕಥೆ ಮುಗಿಸಿದ ಪತ್ನಿ, ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಮಳ್ಳಿ
ಬಾಹರ್ ಅಸ್ಮಾ ಸುರ ಸುಂದರಿಯಾಗಿದ್ದಾಳೆ. ಆದ್ರೆ, ಪತಿ ಬಶೀರ್ ವುಲ್ಲಾಗೆ ಬೇರೆ ತನ್ನ ಹೆಂಡತಿ ಎಷ್ಟೇ ಸುಂದರವಾಗಿದ್ದರೂ ಪರ ಯುವತಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದ್ದು, ಸದ್ಯ ಪೊಲೀಸರು, ಪತಿ ಬಶೀರ್ ವುಲ್ಲಾನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮೃತ ಅಸ್ಮಾ ತಂದೆ ಹೇಳಿದ್ದಿಷ್ಟು
ಮೃತಳ ತಂದೆ ಜಮೀರ್ ಬುರ್ಹಾನ್ ಪ್ರತಿಕ್ರಿಯಿಸಿದ್ದು, ಬಶೀರ್ ವುಲ್ಲಾ ಖಾಸಗಿ ಏರ್ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ ಎಂಭತ್ತು ಸಾವಿರ ಸಂಬಳ ಇತ್ತು. ಆದ್ರೆ ಒಂದು ರೂಪಾಯಿ ಮನೆಗೆ ಖರ್ಚು ಮಾಡುತ್ತಿರಲಿಲ್ಲ. ಹಣ ಎಲ್ಲಿ ಅಂದ್ರೆ ಸಾಕು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ಈ ಬಗ್ಗೆ ನಾವೆಲ್ಲಾ ತುಂಬಾ ಸಲ ಎಚ್ಚರಿಕೆ ನೀಡಿದ್ವಿ.ಆದರೂ ಆತನ ಬುದ್ದಿ ಕಲಿಲ್ಲ. ಆತನಿಗೆ ಶಿಕ್ಷೆ ಆಗಬೇಕು. ನನ್ನ ಮಗಳನ್ನ ಸಂತೋಷವಾಗಿ ನೋಡಿಕೊಳ್ಳುತ್ತಿರಲಿಲ್ಲ. ಬೇರೆ ಯಾವ ಹೆಣ್ಮಕ್ಕಳಿಗೂ ಈತರ ಆಗಬಾರದು ಎಂದು ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ದಂಪತಿ ಆತ್ನಹತ್ಯೆಗೆ ಶರಣು
ಹಾವೇರಿ: ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ. ಆದರೂ ಸಹ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಾಲಗಾರರ ಸಾವಿನ ಹಾದಿ ತುಳಿಯುತ್ತಿದ್ದಾರೆ. ಅದರಂತೆ ಹಾವೇರಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದೆ. ಸಾಲಭಾದೆಯಿಂದ ಮನನೊಂದು ರಾಣೇಬೆನ್ನೂರು ತಾಲೂಕಿನ ಕರೂರು ಗ್ರಾಮದಲ್ಲಿ ಸೌಮ್ಯ (25) ಹಾಗೂ ಪತಿ ಗುಡ್ಡಪ್ಪ(32) ದಂಪತಿ ಆತ್ಮಹತ್ಯೆಗೆ ಶರಣಾಗಿದೆ. ಕಬ್ಬಿಣದ ಹ್ಯಾಂಗ್ಲರ್ ಗೆ ಸೀರೆ ಮತ್ತು ಹಗ್ಗದಿಂದ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದಾರೆ. ಜಮೀನಿನ ಮೇಲೆ ಖಾಸಗಿ ಬ್ಯಾಂಕ್ ವೊಂದರಲ್ಲಿ ಸಾಲ. ಇದರ ಜತೆ ಹೊಸ ಮನೆ ನಿರ್ಮಾಣ ಕಟ್ಟಿಕೊಳ್ಳುತ್ತಿದ್ದರು. ಇದೇ ವಿಚಾರಕ್ಕೆಸಾಲಭಾದೆಯಿಂದ ಬಳಲುತ್ತಿದ್ದ ದಂಪತಿ ನಿರ್ಮಾಣ ಮಾಡ್ತಿದ್ದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಮಕ್ಕಳ್ಳಿಬ್ಬರು ತಂದೆ ತಾಯಿ ಇಲ್ಲದೇ ತಬ್ಬಲಿಗಳಾಗಿವೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ