AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಶತಮಾನದಷ್ಟು ಹಳೆಯದಾದ ಸೇತುವೆಯಲ್ಲಿ ಬಿರುಕು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಆ ಸೇತುವೆ ಹೈದರಾಬಾದ್ ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡಿದೆ. ವಿಜಯಪುರ-ಹೈದರಾಬಾದ್​ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಗೆ ಈ ಸೇತುವೆ ಕೊಂಡಿಯಾಗಿ ನಿಂತಿದೆ. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಯಾದಗಿರಿ ಜಿಲ್ಲೆಯ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಆದರೆ, ಶತಮಾನಗಳ ಹಿಂದೆ ನಿರ್ಮಿಸಿಲಾಗಿದ್ದ ಐತಿಹಾಸಿಕ ಸೇತುವೆ ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯದಂಚಿನಲ್ಲಿದೆ.

ಯಾದಗಿರಿ: ಶತಮಾನದಷ್ಟು ಹಳೆಯದಾದ ಸೇತುವೆಯಲ್ಲಿ ಬಿರುಕು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಶತಮಾನಗಳಷ್ಟು ಹಳೆಯದಾದ ಸೇತುವೆ
ಅಮೀನ್​ ಸಾಬ್​
| Updated By: ವಿವೇಕ ಬಿರಾದಾರ|

Updated on: Jun 17, 2025 | 10:45 PM

Share

ಯಾದಗಿರಿ, ಜೂನ್​ 17: ಶತಮಾನಗಳ ಹಿಂದೆ ಹೈದರಾಬಾದ್​ ನಿಜಾಮರ ಆಳ್ವಿಕೆ ಸಮಯದಲ್ಲಿ ಯಾದಗಿರಿಯ (Ydagiri) ಹೊರ ಭಾಗದಲ್ಲಿ ನಿರ್ಮಾಣವಾಗಿರುವ ಅತ್ಯಂತ ಪ್ರಮುಖ ಸೇತುವೆ (Bridge) ಈಗ ಅಪಾಯದ ಅಂಚಿನಲ್ಲಿದೆ. ವಿಜಯಪುರ-ಹೈದರಾಬಾದ್​ ಮಧ್ಯೆ ಸಂಪರ್ಕ ಕಲ್ಪಿಸುವುದಕ್ಕೆ ಶತಮಾನಗಳ ಹಿಂದೆ ಹೈದರಾಬಾದಿನ ನಿಜಾಮರು ಭೀಮಾ ನದಿಗೆ (Bhima River) ಅಡ್ಡಲಾಗಿದೆ ಈ ಸೇತುವೆಯನ್ನು ನಿರ್ಮಿಸಿದ್ದಾರೆ. ಇತಿಹಾಸ ಉಳ್ಳ ಸೇತುವೆ ಈಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಅವನತಿಯ ಹಂತಕ್ಕೆ ಬಂದಿದೆ.

ಈ ಸೇತುವೆ ವಿಜಯಪುರದಿಂದ ಹೈದರಾಬಾದ್​ಗೆ ಸಂಪರ್ಕ ಕಲ್ಪಿಸುವುದರಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಈಗ ವಾಹನ ಸವಾರರು ಸೇತುವೆ ಮೇಲೆ ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ಏಕೆಂದರೆ, ಈ ಸೇತುವೆಗೆ ಸಿಮೆಂಟ್​ ಕಂಬಗಳಿಲ್ಲ. ಸೇತುವೆಯನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಇದರಿಂದ ಸೇತುವೆಯ ಗೊಡೆಗಳ ಮೇಲೆ ಸಣ್ಣ ಸಣ್ಣ ಆಲದ ಗಿಡಗಳು ಬೆಳೆದಿವೆ. ಆಲದ ಗಿಡಗಳು ದೊಡ್ಡದಾಗಿ ಬೆಳೆಯುತ್ತಿದ್ದು, ಕಾರಣಕ್ಕೆ ಸೇತುವೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಗೋಡೆಯ ಕಲ್ಲುಗಳು ಸಡಿಲಗೊಂಡಿದ್ದು ಸೇತುವೆ ಕುಸಿದು ಬೀಳುವ ಆತಂಕ ಎದುರಾಗಿದೆ.

ಈ ಸೇತುವೆಯ ಎರಡು ಬದಿಯಲ್ಲಿ ಗಿಡಗಳ ಬೆಳೆದಿವೆ. ಸಿಮೆಂಟ್ ರಹಿತ ಸೇತುವೆಯಾಗಿದ್ದರಿಂದ ಕಲ್ಲುಗಳು ಸಡಿಲವಾಗುತ್ತಿವೆ. ಕೆಲ ಕಡೆ ಗೊಡೆಯ ಕಲ್ಲುಗಳು ಸರಿದಿದ್ದರಿಂದ ಗೊಡೆಗಳಲ್ಲಿ ಬಿರುಕು ಬಿಟ್ಟಿದೆ.

ಇದನ್ನೂ ಓದಿ
Image
100 ಕೋಟಿಯ ಒಡೆಯ ಈಗ ಜೈನ ಮುನಿ! ಆಸ್ತಿ, ಐಷಾರಾಮಿ ಬಂಗಲೆ ಬಿಟ್ಟ ಉದ್ಯಮಿ
Image
ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ಪೋಸ್ಟ್: ಯಾದಗಿರಿ ನಿವಾಸಿ  ಬಂಧನ
Image
ಬಾಯಾರಿಕೆ ಅಂತ ನೀರು ಕುಡಿಯಲು ಹೋದ ಮೂವರು ದುರ್ಮರಣ: ಅಣ್ಮಂದಿರ ದುರಂತ ಅಂತ್ಯ
Image
ಯಾದಗಿರಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು ಹೆಚ್ಚಳ

ಯಾದಗಿರಿ ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಇದೆ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ಬೃಹತ್ ಗಾತ್ರದ ವಾಹನಗಳು ಇದೆ ಸೇತುವೆಯಲ್ಲಿ ಸಂಚರಿಸುತ್ತವೆ. ಜಿಲ್ಲೆಯ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಶಾಸಕರು ಇದೆ ಸೇತುವೆ ಮೇಲೆ ಸಂಚಾರ ಮಾಡುತ್ತಾರೆ. ಆದರೆ, ಇವರ ಕಣ್ಣಿಗೆ ಸೇತುವೆ ಬಿರುಕು ಬಿಟ್ಟಿರುವುದು ಕಾಣಿಸಿಲ್ವಾ ಎಂಬುವುದು ವಾಹನ ಸವಾರರು ಪ್ರಶ್ನೆಯಾಗಿದೆ.

ಮುಖ್ಯಮಂತ್ರಿಗಳು, ಸಚಿವರು ಬರುತ್ತಿದ್ದಾರೆ ಅಂತಾ ಗೊತ್ತಾದರೆ ಸಾಕು ಮೇಲೆಂದ ಗಿಡಗಳನ್ನು ಸಣ್ಣದಾಗಿ ಕಟ್ ಮಾಡಲಾಗುತ್ತೆ. ಆದರೆ, ಸಂಪೂರ್ಣವಾಗಿ ಬುಡ ಸಮೇತ ಗಿಡಗಳನ್ನು ಕಿತ್ತೆಸೆಯುತ್ತಿಲ್ಲ. ಸಣ್ಣದಾಗಿ ಮೇಲಿಂದ ಗಿಡಗಳನ್ನ ಕಟ್ ಮಾಡಿದ್ದರಿಂದ ಪ್ರಮುಖರು ಸಂಚರಿಸುವಾಗ ಗೊಡೆಗಳ ಮೇಲೆ ಗಿಡಗಳು ಇಲ್ಲ ಎನ್ನುವ ರೀತಿಯಲ್ಲಿ ಕಂಡು ಬರುತ್ತದೆ. ಆದರೆ, ಪ್ರತಿ ಬಾರಿ ಗಿಡಗಳನ್ನು ಕಟ್ ಮಾಡುತ್ತಿದ್ದ ಕಾರಣಕ್ಕೆ ಬೇರುಗಳು ಆಳಕ್ಕೆ ಇಳಿದಿವೆ. ಹೀಗಾಗಿ, ಆಳಕ್ಕೆ ಇಳಿದಿರುವ ಮರಗಳ ಬೇರುಗಳಿಂದ ಸೇತುವೆ ಬಿರುಕು ಬಿಡುತ್ತಿದೆ. ಕೆಲ ಕಡೆ ಸಣ್ಣದಾಗಿ ಬಿರುಕು ಕೂಡ ಬಿಟ್ಟಿದೆ. ಇದರಿಂದ ಶತಮಾನದಷ್ಟು ಹಳೆಯದಾದ ಸೇತುವೆ ಬಿಳುವ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ.

ಪ್ರತಿ ವರ್ಷ ಸೇತುವೆ ದುರಸ್ಥಿಗಾಗಿ ಸಾಕಷ್ಟು ಅನುದಾನ ಹರಿದು ಬರುತ್ತದೆ. ಆದರೆ, ಅಧಿಕಾರಿಗಳು ಅನುದಾನ ಎಲ್ಲಿ ಖರ್ಚು ಮಾಡುತ್ತಾರೆ ದೇವರಿಗೆ ಗೊತ್ತು. ಐತಿಹಾಸಿಕ ಸೇತುವೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 100 ಕೋಟಿಯ ಒಡೆಯ ಈಗ ಜೈನ ಮುನಿ! ಆಸ್ತಿ, ಐಷಾರಾಮಿ ಬಂಗಲೆ ಬಿಟ್ಟ ಯಾದಗಿರಿ ಉದ್ಯಮಿ

ಒಟ್ಟಿನಲ್ಲಿ ಶತಮಾನದಷ್ಟು ಹಳೆಯದಾದ ಸೇತುವೆ ಅವನತಿ ಕಾಣುವ ಮೊದಲೆ ಅಧಿಕಾರಿಗಳು ಉಳಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ವಾಹನ ಸವಾರರ ಹಿತವನ್ನು ಕಾಪಡಬೇಕಾದರೆ ಸೇತುವೆಯ ಗೋಡೆಗಳ ಮೇಲೆ ಬೆಳೆದು ನಿಂತಿರುವ ಆಲದ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿ ಸೇತುವೆ ದುರಸ್ಥಿಗೆ ಕ್ರಮಕೈಗೊಳ್ಳಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ