ರಣ ಬಿಸಿಲಿಗೆ ಹೆದರಿದ ಯಾದಗಿರಿ ಜಿಲ್ಲೆ ಜನ; ಮಕ್ಕಳು, ವೃದ್ಧರಿಗಾಗಿ ಸ್ಪೇಷಲ್ ವಾರ್ಡ್ ಓಪನ್

ರಣ ಬಿಸಿಲಿಗೆ ಯಾದಗಿರಿ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಬೆಳಗ್ಗೆ 11 ಗಂಟೆ ಆದರೆ ಸಾಕು ಮನೆಯಿಂದ ಹೊರ ಬರುವುದಕ್ಕೂ ಹೆದರುವಂತಾಗಿದೆ. ಇದರ ಮಧ್ಯೆ ಬಿಸಿಲು ಮಕ್ಕಳು ಹಾಗೂ ವಯೋ ವೃದ್ಧರ ಮೇಲೆ ಪರಿಣಾಮ ಬಿರುವ ಸಾಧ್ಯತೆಯಿದೆ. ಇದೆ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕೂಡ ತೆಗೆಯಲಾಗಿದೆ.

ರಣ ಬಿಸಿಲಿಗೆ ಹೆದರಿದ ಯಾದಗಿರಿ ಜಿಲ್ಲೆ ಜನ; ಮಕ್ಕಳು, ವೃದ್ಧರಿಗಾಗಿ ಸ್ಪೇಷಲ್ ವಾರ್ಡ್ ಓಪನ್
ರಣ ಬಿಸಿಲಿಗೆ ಹೆದರಿದ ಯಾದಗಿರಿ ಜಿಲ್ಲೆ ಜನ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 17, 2024 | 2:49 PM

ಯಾದಗಿರಿ, ಏ.17: ಯಾದಗಿರಿ(Yadgiri) ಜಿಲ್ಲೆ ಅಂದರೆ ಸಾಕು ಬಿಸಿಲ ನಾಡು ಎಂದೇ ಖ್ಯಾತಿ ಪಡೆದುಕೊಂಡಿದೆ. ಬೇಸಿಗೆ ಬಂದರೆ ಸಾಕು ನಾಲ್ಕು ತಿಂಗಳುಗಳ ಕಾಲ ನೆತ್ತಿ ಮೇಲೆ ಬಿಸಿಲು ಆವರಿಸಿಕೊಳ್ಳುತ್ತದೆ. ಕಳೆದ ಬಾರಿ ಯಾದಗಿರಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ತಾಪಮಾನ ದಾಖಲಾಗುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಈ ವರ್ಷವೂ ಸಹ ಹೋದ ವರ್ಷದ ದಾಖಲೆ ಮುರಿದು ಬಿಳುವ ಸಾಧ್ಯತೆಯಿದೆ. ಹೌದು, ಈ ಬಾರಿ ಮಳೆ ಕಡಿಮೆ ಪ್ರಮಾಣದಲ್ಲಿ ಆಗಿರುವ ಕಾರಣಕ್ಕೆ ಭೀಕರ ಬರಗಾಲ ಆವರಿಸಿಕೊಂಡಿದೆ. ಇದೆ ಕಾರಣಕ್ಕೆ ಮಾರ್ಚ್ ತಿಂಗಳ ಅರ್ಧದಿಂದಲೇ ತಾಪಮಾನ ಹೆಚ್ಚಾಗ ತೊಡಗಿದೆ.

ಇನ್ನು ಈಗ ಏಪ್ರಿಲ್ ತಿಂಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇನ್ನು ಮುಂದೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದೆ ಕಾರಣಕ್ಕೆ ಜಿಲ್ಲೆಯಲ್ಲಿ ಜನ ಬೆಳಗ್ಗೆ 11 ಗಂಟೆಯಾದರೆ ಸಾಕು ಮನೆಯಿಂದ ಹೊರ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಕೆಲಸ ಕಾರ್ಯಗಳು ಇದ್ದರೂ ಸಹ ಬೆಳಗ್ಗೆ ಬೇಗ ಕೆಲಸ ಮುಗಿಸಿಕೊಳ್ಳುತ್ತಿದ್ದಾರೆ. ಅನಿವಾರ್ಯ  ಎಂದರೆ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರೆ. ಈ ವೇಳೆ ಬಿಸಿಲಿನಿಂದ ಬೆಂಡಾದ ದೇಹವನ್ನ ತಂಪಾಗಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ:ಏಪ್ರಿಲ್ ಫೂಲ್ ಬದಲಾಗಿ ಏಪ್ರಿಲ್ ಕೂಲ್ ಡೇ ಆಚರಣೆ! ವಿದ್ಯಾರ್ಥಿಗಳ ಕಾರ್ಯಕ್ಕೆ ಅವಳಿ ನಗರದಲ್ಲಿ ಮೆಚ್ಚುಗೆ

ಮಕ್ಕಳಿಗೆ ಹಾಗೂ ವಯೋ ವೃದ್ಧರಿಗಾಗಿ ವಿಶೇಷ ವಾರ್ಡ್ ಓಪನ್

ಈ ರಣ ಬಿಸಿಲು ಮಕ್ಕಳು ಹಾಗೂ ವಯೋ ವೃದ್ಧರ ಮೇಲೆ ಬಾರಿ ಪ್ರಮಾಣದಲ್ಲಿ ಪರಿಣಾಮ ಬಿರುವ ಲಕ್ಷಣಗಳು ಕಂಡು ಬರುತ್ತಿವೆ. ಇದೆ ಕಾರಣಕ್ಕೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ತಿಂಗಳಿಗಾಗಿ ಮಕ್ಕಳಿಗೆ ಹಾಗೂ ವಯೋ ವೃದ್ಧರಿಗಾಗಿ ವಿಶೇಷ ವಾರ್ಡ್ ಓಪನ್ ಮಾಡಲಾಗಿದೆ. ಮಕ್ಕಳಿಗಾಗಿ ಒಂದು ಕೋಣೆಯಲ್ಲಿ 6 ಬೆಡ್​ಗಳನ್ನ ರೆಡಿ‌ ಮಾಡಲಾಗಿದೆ. ಇದರ ಜೊತೆಗೆ ಬಿಸಿಲಿನಿಂದ ತೊಂದರೆಗೊಳಗಾಗಿ ಆಸ್ಪತ್ರೆಗೆ 60 ವರ್ಷ ಮೇಲ್ಪಟ್ಟ ವೃದ್ದರಿಗಾಗಿಯೂ ಸಹ ಒಂದು ಕೋಣೆಯಲ್ಲಿ 6 ಬೆಡ್​ಗಳನ್ನ ಸ್ಥಾಪಿಸಲಾಗಿದೆ‌. ಮಕ್ಕಳ ಹಾಗೂ ವೈದ್ದರ ವಾರ್ಡ್​ನಲ್ಲಿ ದಿನದ 24 ಗಂಟೆಗಳ ಕಾಲವೂ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಆಕ್ಸಿನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಮಕ್ಕಳ ವಾರ್ಡ್​ನಲ್ಲಿ ಮೂರು ಮಕ್ಕಳು ದಾಖಲಾಗಿದ್ದರು. ಮೊನ್ನೆ(ಏ.15) ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಧ್ಯ ಒಂದು ಮಗು ಚಿಕಿತ್ಸೆ ಪಡೆಯುತ್ತಿದೆ. ಯಾವುದೇ ರೀತಿ ತೊಂದರೆಯಾಗದಂತೆ ಮಕ್ಕಳು ಹಾಗೂ ವೃದ್ದರಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು  ಹೇಳುತ್ತಾರೆ. ಒಟ್ಟಿನಲ್ಲಿ ಈ ಬಾರಿ ರಣ ಬಿಸಿಲು ಸಾಕಷ್ಟು ಆರೋಗ್ಯದ ಮೇಲೆ ಪರಿಣಾಮ ಬಿರುವ ಸಾಧ್ಯತೆಯಿದ್ದು, ಅದರಲ್ಲೂ ಮಕ್ಕಳು ಹಾಗೂ ವೃದ್ಧರಿಗೆ ತೊಂದರೆ ಕೊಡುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು