ಫುಡ್ ಕಿಟ್ ಪಡೆಯಲು ಮಹಿಳೆಯರ ಹೊಡೆದಾಟ; ಕೂದಲು ಹಿಡಿದು ಬಡಿದಾಡಿಕೊಂಡ ಮಹಿಳೆಯರು
ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಫುಡ್ ಕಿಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಾಗ ಮಾತಿಗೆ ಮಾತು ಬೆಳೆದಿದ್ದು, ಕೂದಲು ಹಿಡಿದು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಮಹಿಳೆಯರು ಜಗಳವಾಡುವುದನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಯಾದಗಿರಿ: ಹಬ್ಬದ ದಿನ ಫುಡ್ ಕಿಟ್ ಪಡೆಯಲು ಮಹಿಳೆಯರು ಹೊಡೆದಾಡಿದ ಘಟನೆ ಯಾದಗಿರಿ ನಗರದ ಬಾಬು ಜಗಜೀವನರಾಮ್ ಭವನದ ಎದುರು ನಡೆದಿದೆ. ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಫುಡ್ ಕಿಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಾಗ ಮಾತಿಗೆ ಮಾತು ಬೆಳೆದಿದ್ದು, ಕೂದಲು ಹಿಡಿದು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಮಹಿಳೆಯರು ಜಗಳವಾಡುವುದನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ಮಧ್ಯೆ ಮಾರಾಮಾರಿ ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ನೋಡಿದ ಮೇಲೆ ಗಲಾಟೆ ನಡೆದಿದೆ. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಬಳಿ ಈ ಘಟನೆ ನಡೆದಿದ್ದು, ಸಿನಿಮಾ ನೋಡಿಕೊಂಡು ಹೊರಬಂದ ಬಳಿಕ ಯುವಕರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ಸಿನಿಮಾ ಮುಗಿಸಿ ಹೊರಬಂದ ಜನರಿಂದ ಮಾರಾಮಾರಿ ಚಿತ್ರಮಂದಿರದ ಎದುರುಗಡೆ ಎರಡು ಗುಂಪುಗಳಿಂದ ಗಲಾಟೆ ನಡೆದಿದೆ. ನಿನ್ನೆ(ಅಕ್ಟೋಬರ್ 14) ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ. ಮೊದಲ ಶೋ ಮುಕ್ತಾಯದ ಬಳಿಕ ಹೊರ ಬರುವ ವೇಳೆ ಗಲಾಟೆ ನಡೆದಿದ್ದು, ಸ್ಥಳೀಯರ ಮೊಬೈಲ್ನಲ್ಲಿ ಗಲಾಟೆಯ ದೃಶ್ಯಗಳು ಸೆರೆಯಾಗಿವೆ. ಆದರೆ ಗಲಾಟೆಗೆ ಅಸಲಿ ಕಾರಣ ಏನು ಎನ್ನುವುದು ಮಾತ್ರ ಈವರೆಗೆ ತಿಳಿದು ಬಂದಿಲ್ಲ.
ಇದನ್ನೂ ಓದಿ:
ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ಮಧ್ಯೆ ಮಾರಾಮಾರಿ; ಸಲಗ ಚಿತ್ರ ನೋಡಿದ ಬಳಿಕ ಗಲಾಟೆ
ನಡುಬೀದಿಯಲ್ಲಿ ಯುವತಿಯರ ಹೊಡೆದಾಟ; ಕೊಳಚೆ ನೀರಲ್ಲಿ ಬಿದ್ದು ಹೊರಳಾಡಿ, ಜುಟ್ಟು ಹಿಡಿದುಕೊಂಡು ಕಾದಾಟ
Published On - 11:21 am, Fri, 15 October 21