AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಹತ್ತಿ ಬೆಳೆಗೆ ತಾಮ್ರ ರೋಗ; ರೈತರಲ್ಲಿ ಹೆಚ್ಚಿದ ಆತಂಕ

ರೈತರು ಒಂದು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯಬೇಕಾದರೆ ಸುಮಾರು 15 ರಿಂದ 20 ಸಾವಿರ ರೂ. ಖರ್ಚ ಮಾಡಿದ್ದಾರೆ. ಕಾಲ ಕಾಲಕ್ಕೆ ಮಳೆ ಚೆನ್ನಾಗಿ ಆದರೆ ಒಂದು ಎಕರೆಯಲ್ಲಿ ಸುಮಾರು 40 ರಿಂದ 50 ಸಾವಿರ ರೂ. ಲಾಭವನ್ನು ಪಡೆಬಹುದಾಗಿದೆ. ಆದರೆ ಈ ಬಾರಿ ಲಾಭದ ನಿರೀಕ್ಷೆಯಲ್ಲಿ ಅನ್ನದಾತರಿಗೆ ತಾಮ್ರ ರೋಗ ಶಾಕ್ ನೀಡಿದೆ.

ಯಾದಗಿರಿ: ಹತ್ತಿ ಬೆಳೆಗೆ ತಾಮ್ರ ರೋಗ; ರೈತರಲ್ಲಿ ಹೆಚ್ಚಿದ ಆತಂಕ
ಹತ್ತಿ ಬೆಳೆಗೆ ಮಾರಕ ರೋಗ
TV9 Web
| Updated By: preethi shettigar|

Updated on: Oct 16, 2021 | 5:26 PM

Share

ಯಾದಗಿರಿ: ಜಿಲ್ಲೆಯ ರೈತರಿಗೆ ಒಂದರ ಮೇಲೊಂದು ಹೊಡೆತ ಬಿಳುತ್ತಲೇ ಇದೆ. ಸಾಲ ಸೂಲ ಮಾಡಿ ಬೆಳೆ ಬೆಳೆದ ಅನ್ನದಾತರು ಈಗ ಕಂಗಲಾಗುವಂತ ಪರಸ್ಥಿತಿ ನಿರ್ಮಾಣವಾಗಿದೆ. ಮೊದಲು ಪ್ರವಾಹದಿಂದ ಕಂಗಲಾಗಿದ್ದ ರೈತರಿಗೆ ಈಗ ಕೈಗೆ ಬಂದ ಬೆಳೆಗೆ ತಾಮ್ರ ರೋಗದ ಸಂಕಷ್ಟ ಎದುರಾಗಿದೆ. ಯಾದಗಿರಿ ಜಿಲ್ಲೆಯ ರೈತರ ಪ್ರಮುಖ ಬೆಳೆಯಾದ ಹತ್ತಿ ಬೆಳೆ ಈಗ ಹಾಳಾಗುವ ಹಂತಕ್ಕೆ ಬಂದಿದ್ದು, ಅನ್ನದಾತರು ಬೆಳೆಗೆ ಬಂದ ರೋಗಕ್ಕೆ ಪರಿಹಾರ ಸಿಗದೆ ಹೈರಾಣುಗುವಂತ ಸ್ಥಿತಿ ಎದುರಾಗಿದೆ.

ಯಾದಗಿರಿ ಜಿಲ್ಲೆಯ ಬಹುತೇಕ ರೈತರು ಹತ್ತಿ ಬೆಳೆಯನ್ನೇ ಅವಲಂಭಿಸಿಕೊಂಡಿದ್ದಾರೆ. ಒಂದು ಬಾರಿ ಹತ್ತಿ ಬಿತ್ತನೆ ಮಾಡಿದರೆ ಸಾಕು ವರ್ಷದಲ್ಲಿ ಮೂರು ಬಾರಿ ಭರ್ಜರಿಯಾಗಿ ಫಸಲು ಬರುತ್ತದೆ. ಇದೇ ಕಾರಣದಿಂದ ಅನ್ನದಾತರು ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಈಗ ಇದೇ ಹತ್ತಿ ಬೆಳೆಗೆ ಮಾರಕ ರೋಗ ಅಂಟಿಕೊಂಡಿದೆ.

ಜಿಲ್ಲೆಯಲ್ಲಿ ಸುಮಾರು 1.3 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರೈತರು ಈ ಬಾರಿ ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿದ ರೈತರಿಗೆ ಈಗ ಬೆಳೆ ಕೈಗೆ ಬರುವ ಸಮಯ. ಹತ್ತಿ ಕಾಯಿ ಕಟ್ಟಿದ್ದು, ಇನ್ನು 15 ರಿಂದ 20 ದಿನಗಳಲ್ಲಿ ಹತ್ತಿ ಬಿಡಿಸಿಕೊಳ್ಳಬಹುದಾಗಿದೆ. ಆದರೆ ಕೈಗೆ ಬಂದ ಬೆಳೆಗೆ ತಾಮ್ರ ರೋಗ ಆವರಿಸಿಕೊಂಡಿದೆ. ಇದು ಕೇವಲ ಒಂದು ಹತ್ತಿ ಗಿಡಕ್ಕೆ ಆವರಿಸಿಕೊಂಡಿದರೆ ರೈತರು ಆತಂಕ ಪಡುವಂತ ಅಗತ್ಯ ಇರುತ್ತಿರಲಿಲ್ಲ. ಆದರೆ ಈ ತಾಮ್ರ ರೋಗ ಹೇಗೆ ಅಂದರೆ ಅದು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ನೋಡ ನೋಡುತ್ತಿದಂತೆ ಆವರಿಸಿಕೊಳ್ಳುತ್ತಿದೆ.

ಕಳೆದ ಒಂದು ವಾರದ ಹಿಂದೆ ನೋಡಿದ ಬೆಳೆ ಈಗ ಇಲ್ಲದಂತಾಗಿದೆ. ಕ್ರಮೇಣವಾಗಿ ರೋಗ ಹತ್ತಿ ಬೆಳೆಗೆ ಆವರಿಸಿಕೊಳ್ಳುತ್ತಿದ್ದು, ಇಡೀ ಜಮೀನಿಗೆ ಆವರಿಸಿದೆ. ಇದೆ ಕಾರಣದಿಂದ ಸಾಲ ಸೂಲ ಮಾಡಿ ಬೆಳೆಯನ್ನು ಬೆಳೆದು ಕಂಗಲಾಗುವಂತಾಗಿದೆ ಎಂದು ರೈತ ಹಯ್ಯಾಳಪ್ಪ ತಿಳಿಸಿದ್ದಾರೆ.

ರೈತರು ಒಂದು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯಬೇಕಾದರೆ ಸುಮಾರು 15 ರಿಂದ 20 ಸಾವಿರ ರೂ. ಖರ್ಚ ಮಾಡಿದ್ದಾರೆ. ಕಾಲ ಕಾಲಕ್ಕೆ ಮಳೆ ಚೆನ್ನಾಗಿ ಆದರೆ ಒಂದು ಎಕರೆಯಲ್ಲಿ ಸುಮಾರು 40 ರಿಂದ 50 ಸಾವಿರ ರೂ. ಲಾಭವನ್ನು ಪಡೆಬಹುದಾಗಿದೆ. ಆದರೆ ಈ ಬಾರಿ ಲಾಭದ ನಿರೀಕ್ಷೆಯಲ್ಲಿ ಅನ್ನದಾತರಿಗೆ ತಾಮ್ರ ರೋಗ ಶಾಕ್ ನೀಡಿದೆ. ಸಾವಿರಾರು ರೂ. ಖರ್ಚ ಮಾಡಿ ಬೀಜ, ರಸಗೊಬ್ಬರು ಹಾಗೂ ರಾಸಯನಿಕ ರಸಗೊಬ್ಬರವನ್ನು ಹಾಕಿದ ರೈತರು ಕೈಕಟ್ಟಿಕೊಂಡು ಕುಳಿತುಕೊಳ್ಳುವಂತಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಹತ್ತಿ ಬೆಳೆಗೆ ಈ ರೋಗ ಆವರಿಸಿಕೊಳ್ಳಲು ರಸಹೀರುವ ಕಿಟ ಬಾದೆ, ವಾತವರಣದಲ್ಲಿನ ಶೀತ ತೇವಾಂಶ ಜಾಸ್ತಿ ಆಗುವಿಕೆ ಹಾಗೂ ಪೋಷಕಾಂಶ ಕೊರತೆ ಕಾರಣವಾಗಿದೆ. ಹೀಗಿದ್ದಾಗ ಮಾತ್ರ ಈ ರೀತಿಯ ರೋಗಗಳು ಬೆಳೆಗಳಿಗೆ ಆವರಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ತಾಮ್ರ ರೋಗ ಲಕ್ಷಣಗಳು ಒಂದು ಗಿಡಕ್ಕೆ ತಾಮ್ರ ರೋಗ ಅಂಟಿಕೊಂಡಿದ್ದರೆ ಸಾಕು, ಇಡೀ ಗಿಡ ಒಂದು ವಾರದಲ್ಲಿ ಸಂಪೂರ್ಣವಾಗಿ ಒಣಗಿ ಹೋಗುತ್ತದೆ ಜೊತೆಗೆ ಗಿಡಕ್ಕೆ ಅಂಟಿಕೊಂಡಿದ್ದ ಹತ್ತಿ ಬೆಳೆಯ ಕಾಯಿಗಳು ಉದುರಿ ಹೋಗುತ್ತದೆ. ಇದು ರೈತರನ್ನು ಚಿಂತೆಗಿಡಾಗುವಂತೆ ಮಾಡಿದೆ. ತಾಮ್ರ ರೋಗ ಅಂಟಿಕೊಂಡಿದ್ದರಿಂದ ಬೆಳೆಗೆ ಯಾವ ಔಷಧಿಯನ್ನು ಸಿಂಪಡಣೆ ಮಾಡಬೇಕು ಎನ್ನುವ ಮಾಹಿತಿ ನೀಡಬೇಕು. ಆದರೆ ಅಧಿಕಾರಿಗಳು ಯಾವುದು ಮಾಡದೆ ಇರುವುದರಿಂದ ರೈತರು ಬೆಳೆಯನ್ನು ಕಳೆದುಕೊಂಡು ಗೂಳೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡರಾದ ಉಮೇಶ್ ಮುದ್ನಾಳ್ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ: ಚಿಕ್ಕಮಗಳೂರು: ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಣ್ಮರೆ; ಎಲೆಚುಕ್ಕೆ ರೋಗದಿಂದ ಕಂಗಾಲಾದ ಅಡಿಕೆ ಬೆಳೆಗಾರರು

Onion Diseases: ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ, ರೈತರು ಕಂಗಾಲು