ರಸ್ತೆಗೆ ಡಾಂಬರು ಹಾಕುವ ಗುತ್ತಿಗೆ ಕೆಲಸ ತಮಗೆ ಸಿಗಲಿಲ್ಲ ಎಂದು ಗುತ್ತಿಗೆದಾರನಿಗೆ ಕಿರುಕುಳ ಕೊಟ್ಟರಾ ಯಾದಗಿರಿ ಶಾಸಕನ ಸಂಬಂಧಿಗಳು?

ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುವಾಗ ಮುಂದೆ ನಿಂತು ಗುತ್ತಿಗೆದಾರನಿಗೆ ಸಹಕಾರ ನೀಡುತ್ತಾ, ಕ್ವಾಲಿಟಿ ಕೆಲಸ ಮಾಡಿಸುವುದು ಸ್ಥಳೀಯ ಶಾಸಕರ ಹೊಣೆಗಾರಿಕೆ ಆಗಬೇಕು. ಆದ್ರೆ ತಮ್ಮವರಿಗೆ ಗುತ್ತಿಗೆ ಕೆಲಸ ಸಿಗಲಿಲ್ಲ ಎಂದು...

ರಸ್ತೆಗೆ ಡಾಂಬರು ಹಾಕುವ ಗುತ್ತಿಗೆ ಕೆಲಸ ತಮಗೆ ಸಿಗಲಿಲ್ಲ ಎಂದು ಗುತ್ತಿಗೆದಾರನಿಗೆ ಕಿರುಕುಳ ಕೊಟ್ಟರಾ ಯಾದಗಿರಿ ಶಾಸಕನ ಸಂಬಂಧಿಗಳು?
ರಸ್ತೆಗೆ ಡಾಂಬರು ಹಾಕುವ ಗುತ್ತಿಗೆ ತಮಗೆ ಸಿಗಲಿಲ್ಲ ಎಂದು ರೊಚ್ಚಿಗೆದ್ದ ಯಾದಗಿರಿ ಶಾಸಕನ ಸಂಬಂಧಿಗಳು, ಗುತ್ತಿಗೆದಾರನಿಗೆ ಕಿರುಕುಳ ಕೊಟ್ರಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 04, 2023 | 2:35 PM

ಆ ನಗರದ ರಸ್ತೆ ಹಾಳಾಗಿ ಹೋಗಿದ್ದು ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದಿಬ್ಬರು ಜನ ವಾಹನ ಸವಾರರು ಅದೆ ರಸ್ತೆ ಗುಂಡಿಗಳಲ್ಲಿ ಸ್ಕಿಡ್ ಆಗಿ ಬಿದ್ದು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ರಸ್ತೆ ದುರಸ್ತಿಗಾಗಿ ಕೋಟ್ಯಾಂತರ ರೂ. ಬಿಡುಗಡೆ ಮಾಡಿದೆ. ಆದ್ರೆ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರನಿಗೆ (contractor) ಶಾಸಕರೊಬ್ಬರ ಸಹೋದರ ಸಂಬಂಧಿಗಳು (relative) ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ (allegation) ಕೇಳಿ ಬಂದಿದೆ. ರಸ್ತೆ ದುರಸ್ತಿ ಕಾಮಗಾರಿಗೆ (asphalting) ಅಡೆತಡೆ ಉಂಟು ಮಾಡುತ್ತಿದ್ದಾರಾ ಯಾದಗಿರಿ ಶಾಸಕರ (yadgir bjp mla) ಸಂಬಂಧಿಗಳು? ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಕಾಮಗಾರಿ ಮಾಡದೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವಿದೆ. ಯಾದಗಿರಿ ಮತಕ್ಷೇತ್ರದಲ್ಲಿ ಡಾಂಬರ್ ಪ್ಲಾಂಟ್ ಹಾಕದಂತೆಯೂ ಒತ್ತಡ ಹೇರಿದ್ರಾ ಶಾಸಕರ ಸಹೋರರು.

ಯಸ್! ಈ ಘಟನಾವಳಿಗಳು ಕಂಡು ಬಂದಿರುವುದು ಯಾದಗಿರಿ ನಗರದಲ್ಲಿ. ಹೌದು ಯಾದಗಿರಿ ನಗರದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಪರದಾಡುವಂತಹ ವ್ಯವಸ್ಥೆ ನಿರ್ಮಾಣವಾಗಿದೆ.  ಯಾದಗಿರಿಯ ರಸ್ತೆ ಗುಂಡಿಗಳಲ್ಲಿ ಸ್ಕಿಡ್ ಆಗಿ ಒಂದಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಡೆಂಜರಸ್ ರಸ್ತೆಗೆ ಮುಕ್ತಿ ನೀಡುವ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂ ಗುತ್ತಿಗೆ ಕೆಲಸ ಮಂಜೂರು ಮಾಡಿದೆ.

ನಗರದ ಒಳಗಡೆಯಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಜನವರಿಯಲ್ಲಿ ರಸ್ತೆ ದುರಸ್ತಿಗೆ ಯೋಜನೆಯನ್ನ ಹಾಕಿಕೊಂಡಿದ್ರು. ಹೀಗಾಗಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಾವಣಗೆರೆ ಮೂಲದ ಎಲ್ ಕಾಶಿ ರೆಡ್ಡಿ ಎಂಬ ಗುತ್ತಿಗೆದಾರನಿಗೆ ಸುಮಾರು 12 ಕೋಟಿ ರೂಪಾಯಿ ಕೆಲಸ ನೀಡಿದ್ದರು.

ಯಾದಗಿರಿ ನಗರದ ಮೆಡಿಕಲ್ ಕಾಲೇಜಿನಿಂದ ಹಿಡಿದು ಮುಂಡರಗಿ ವರೆಗೆ ಸುಮಾರು 13 ಕಿ.ಮೀ. ರಸ್ತೆ ದುರಸ್ತಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಗುತ್ತಿಗೆದಾರ ಆರಂಭದಲ್ಲಿ ರಸ್ತೆ ಉದ್ದಕ್ಕೂ ಬಿದ್ದಿದ್ದ ಗುಂಡಿಗಳನ್ನ ಮುಚ್ಚುವಂತ ಕೆಲಸ ಮಾಡಿದ್ದಾರೆ. ಬಳಿಕ ಎರಡು ಪದರು ಡಾಂಬರು ಹಾಕಿ ರಸ್ತೆಯನ್ನ ದುರಸ್ತಿ ಮಾಡಲು ಮುಂದಾಗಿದ್ರು. ಇದೆ ಕಾರಣಕ್ಕೆ ಯಾದಗಿರಿ ನಗರ ಹೊರ ಭಾಗದಲ್ಲಿ ಡಾಂಬರ್ ಪ್ಲಾಂಟ್ ಹಾಕಲು ಪ್ಲಾನ್ ಮಾಡಿಕೊಂಡು ಗುತ್ತಿಗೆದಾರ ಸಾಕಷ್ಟು ಸಿದ್ದತೆ ಮಾಡಿಕೊಂಡಿದ್ರು.

ಆದ್ರೆ ಕಾಮಗಾರಿಯ ಗುತ್ತಿಗೆ ತಮಗೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಯಾದಗಿರಿ ಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಸಹೋದರರೊಬ್ಬರು ಕಾಮಗಾರಿ ನಡೆಸದ ರೀತಿಯಲ್ಲಿ ತಡೆವೊಡ್ಡುವುದ್ದಕ್ಕೆ ಪ್ಲಾನ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದೆ ಕಾರಣಕ್ಕೆ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಡಾಂಬರ್ ಪ್ಲಾಂಟ್ ಹಾಕಲು ಬಿಟ್ಟಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಗುತ್ತಿಗೆದಾರನಿಗೆ ಕಿರುಕುಳ ನೀಡಿದ್ರೆ ಕೆಲಸ ಮಾಡದೆ ಬಿಟ್ಟು ಹೋಗುತ್ತಾರೆ ಎಂದು ಡಾಂಬರ್ ಪ್ಲಾಂಟ್ ಹಾಕಲು ಬಿಟ್ಟಿಲ್ಲ ಎಂಬ ಆರೋಪವಿದೆ. ಇದೆ ಕಾರಣಕ್ಕೆ ಗುತ್ತಿಗೆದಾರ ಕಿರುಕುಳಕ್ಕೆ ಬೇಸತ್ತು ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇದೆ ವಿಚಾರ ಈಗ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ಎರಡು ತಿಂಗಳ ಹಿಂದೆಯೇ ಗುತ್ತಿಗೆದಾರ ತಗ್ಗು ಗುಂಡಿಗಳನ್ನ ಮುಚ್ಚುವ ಕೆಲಸ ಮಾಡಿದ್ದರು. ಡಾಂಬರ್ ಪ್ಲಾಂಟ್ ಹಾಕಿದ ಕೂಡಲೇ ರಸ್ತೆ ದುರಸ್ತಿ ಕೆಲಸವನ್ನ ಮಾಡಲು ಮುಂದಾಗಿದ್ರು. ಆದ್ರೆ ಗುತ್ತಿಗೆದಾರನಿಗೆ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರ ಸಹೋದರರೊಬ್ಬರು ಡಾಂಬರ್ ಪ್ಲಾಂಟ್ ಹಾಕಲು ಬಿಟ್ಟಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಡಾಂಬರ್ ಪ್ಲಾಂಟ್ ಹಾಕಲು ಬೇಕಾದ ಎಲ್ಲಾ ವಸ್ತುಗಳನ್ನ ತಂದು ಹಾಕಿದ್ದರು. ಅದನ್ನು ತೆಗೆಯಲು ಇದೇ ಶಾಸಕರ ಸಹೋದರರು ಹೇಳಿದ್ದಾರಂತೆ.

ಇನ್ನು ಇದೆ ಕಾರಣಕ್ಕೆ ಗುತ್ತಿಗೆದಾರ ಯಾಕಾದರೂ ಕೆಲಸದ ಗುತ್ತಿಗೆಯನ್ನ ಪಡೆದೆನೋ ಎನ್ನುವ ಹಂತಕ್ಕೆ ಬಂದು, ಯಾದಗಿರಿ ಜಿಲ್ಲೆಯನ್ನೇ ಬಿಟ್ಟು ಕಲಬುರ್ಗಿ ಜಿಲ್ಲೆಯ ನಾಲ್ವಾರ ಗ್ರಾಮದಲ್ಲಿ ಮೂರು ಎಕರೆ ಜಮೀನು ಲೀಸ್ ಗೆ ಪಡೆದು ಡಾಂಬರ್ ಪ್ಲಾಂಟ್ ಹಾಕಿದ್ದಾರೆ. ಹೀಗಾಗಿ ಎರಡು ತಿಂಗಳ ಬಳಿಕ ಈಗ ನಾಲ್ವಾರ ಗ್ರಾಮದಿಂದ ಡಾಂಬರ್ ತಂದು ಕಳೆದ ಎರಡ್ಮೂರು ದಿನಗಳಿಂದ ಕೆಲಸವನ್ನ ಆರಂಭಿಸಿದ್ದಾರೆ.

ಇನ್ನು ದೂರದ ಊರಿನಿಂದ ಡಾಂಬರ್ ತಂದು ರಸ್ತೆ ದುರಸ್ತಿ ಮಾಡೋದಕ್ಕೆ ಗುತ್ತಿಗೆದಾರನಿಗೆ ಸಾಕಷ್ಟು ಸಮಯ, ದುಡ್ಡು ವ್ಯಯವಾಗುತ್ತಿದೆ. ನಾಲ್ವಾರ ಗ್ರಾಮದಿಂದ ಡಾಂಬರ್ ತಂದು ಕೆಲಸ ಮಾಡುವುದರಿಂದ ಭಾರಿ ಹೊಡೆತ ಬಿದ್ದಿದೆ. ಆದ್ರೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುವಾಗ ಮುಂದೆ ನಿಂತು ಗುತ್ತಿಗೆದಾರನಿಗೆ ಸಹಕಾರ ನೀಡುತ್ತಾ, ಕ್ವಾಲಿಟಿ ಕೆಲಸ ಮಾಡಿಸುವುದು ಸ್ಥಳೀಯ ಶಾಸಕರ ಹೊಣೆಗಾರಿಕೆ ಆಗಬೇಕು. ಆದ್ರೆ ತಮ್ಮವರಿಗೆ ಗುತ್ತಿಗೆ ಕೆಲಸ ಸಿಗಲಿಲ್ಲ ಎನ್ನುವ ಕಾರಣಕ್ಕೆ ದೂರದ ಊರಿನಿಂದ ಬಂದು ಗುತ್ತಿಗೆ ಪಡೆದು ಕೆಲಸ ಮಾಡುವವರಿಗೆ ಕಿರುಕುಳ ನೀಡೋದು ಎಷ್ಟು ಸರಿ ಎಂದು ಜನ ಮಾತಾಡುತ್ತಿದ್ದಾರೆ. ಈ ಬಗ್ಗೆ ಶಾಸಕರಿಗೆ ಕೇಳಿದ್ರೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ, ಇದು ಸುಳ್ಳು ಆರೋಪವಿದೆ. ಕೆಲಸ ಬೇಗ ಮುಗಿಯಲಿ ಅಂತಾನೆ ನಾನು ಒತ್ತಾಯ ಮಾಡುತ್ತಿದ್ದೇನೆ ಅಂತಾರೆ ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್.

ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ