ಒಂದು ವರ್ಷದಿಂದ ಆರೋಗ್ಯ ಇಲಾಖೆ ನೌಕರರಿಗಿಲ್ಲ ಸಂಬಳ: ಹಣವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಟ
ಯಾದಗಿರಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರು ಕಳೆದ ಒಂದು ವರ್ಷದಿಂದ ಸಂಬಳ ಪಡೆಯದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸುಮಾರು 120ಕ್ಕೂ ಹೆಚ್ಚು ನೌಕರರು ಸಂಬಳವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದು, ಸರ್ಕಾರದ ಹಸ್ತಕ್ಷೇಪ ಅಗತ್ಯವಿದೆ. ಇಲಾಖೆಯು 5 ಕೋಟಿಗೂ ಅಧಿಕ ಸಂಬಳ ಬಾಕಿ ಉಳಿಸಿಕೊಂಡಿದೆ.

ಯಾದಗಿರಿ, ಫೆಬ್ರವರಿ 21: ಅವರೆಲ್ಲ ಹೊಟ್ಟೆ ಪಾಡಿಗಾಗಿ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಾಯಿದ್ದಾರೆ. ಅಲ್ಪಸ್ವಲ್ಪ ಬರುವ ಸಂಬಳದಲ್ಲೇ ಕುಟುಂಬ ನಿರ್ವಹಣೆ ಮಾಡೋಣಾ ಅಂತ ಅಂದುಕೊಂಡಿದ್ರು. ಆದರೆ ಇಲಾಖೆ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಸಂಬಳ (salary) ಕೊಟ್ಟಿಲ್ಲ. ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟ ಎದುರಿಸುವಂತಾಗಿದೆ. ಕುಟುಂಬ ನಿರ್ವಹಣೆಗೆ ಸಾಲ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಯಾ ಪೈಸೆ ಸಂಬಳ ನೀಡಿದ ಆರೋಗ್ಯ ಇಲಾಖೆ
ರಾಜ್ಯಾದ್ಯಾಂತ ಆರೋಗ್ಯ ಇಲಾಖೆಯಲ್ಲಿ ಸಾವಿರಾರು ಜನ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ಇಂತಿಷ್ಟು ಸಂಬಳ ಬರುತ್ತೆ ಬದುಕು ಕಟ್ಟಿಕೊಳ್ಳೋಣ ಅಂತ ಆರೋಗ್ಯ ಇಲಾಖೆಗೆ ಸೇರಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಸಂಬಳ ಆಗದಕ್ಕೆ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಪರದಾಡುತ್ತಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ಒಂದು ವರ್ಷದಿಂದ ಒಂದು ನಯಾ ಪೈಸೆ ಸಂಬಳ ಕೂಡ ಆಗಿಲ್ಲ.
ಇದನ್ನೂ ಓದಿ: ದೂರು ಸ್ವೀಕರಿಸದಿದ್ದರೆ ಎದುರಾಳಿಯನ್ನು ಕೊಲ್ಲುವೆ: ಪೊಲೀಸ್ ಮಹಾನಿರ್ದೇಶಕರನ್ನೇ ಟ್ಯಾಗ್ ಮಾಡಿ ವ್ಯಕ್ತಿ ಟ್ವೀಟ್
ಸಂಬಳವಿಲ್ಲದೆ ನೌಕರರು ಪರದಾಡುತ್ತಿದ್ದಾರೆ. ಸ್ಥಿತಿವಂತವರು ಹೇಗೆ ಸಂಬಳವಿಲ್ಲದೆ ಇದ್ರು ಸಹ ಆರಾಮಾಗಿ ಜೀವನ ಸಾಗಿತ್ತಿದ್ದಾರೆ. ಆದ್ರೆ ಇದೆ ಇಲಾಖೆಯ ಸಂಬಳವನ್ನ ನಂಬಿಕೊಂಡು ಜೀವನ ಸಾಗಿಸುವ ನೂರಾರು ಜನ ನೌಕರರು ಕುಟುಂಬ ನಿರ್ವಹಣೆ ಮಾಡಲಾಗದೆ ಪರದಾಡುವಂತಾಗಿದೆ. ಅದರಲ್ಲೂ ಮಕ್ಕಳ ಶಾಲಾ ಪೀಸ್, ಮನೆ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಕಟ್ಟೋಕೆ ಆಗದೆ ಒದ್ದಾಡುತ್ತಿದ್ದಾರೆ.
ಇನ್ನು ಯಾದಗಿರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಮಾರು 120 ಕ್ಕೂ ಅಧಿಕ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸವನ್ನ ಮಾಡ್ತಾಯಿದ್ದಾರೆ. ಸುಮಾರು 76 ಜನ ಡಿ ಗ್ರೂಪ್ ದರ್ಜೆ ನೌಕರರು, 10 ಜನ ಕಂಪ್ಯೂಟರ್ ಆಪರೇಟರ್ಸ್, 18 ಜನ ಆಲೋಪತಿ ವೈದ್ಯರು ಹಾಗೂ 15 ಹೋಮಿಯೋಪತಿ ವೈದ್ಯರು ಕೆಲಸವನ್ನ ಮಾಡ್ತಾಯಿದ್ದಾರೆ. ಇವರೆಲ್ಲರಿಗೂ ಸಹ ಕಳೆದ ಒಂದು ವರ್ಷದಿಂದ ಇಲಾಖೆಯಿಂದ ಸಂಬಳ ಆಗಿಲ್ಲ. ಎಲ್ಲರ ಸಂಬಳ ಸೇರಿ ಸುಮಾರು ಇಲಾಖೆ 5 ಕೋಟಿಯಷ್ಟು ಸಂಬಳ ಬಾಕಿ ಉಳಿಸಿಕೊಂಡಿದೆ. ಕೇವಲ ಯಾದಗಿರಿ ಅಷ್ಟೇ ಅಲ್ಲದೇ ರಾಜ್ಯಾದ್ಯಾಂತ ಸುಮಾರು 21 ಕೋಟಿಯಷ್ಟು ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಬಂಳ ಬಾಕಿ ಉಳಿದಿದೆ. ಆದರೆ ಸಂಬಳವಿಲ್ಲದೆ ನಿತ್ಯ ಮನೆಯಿಂದ ಬಂದು ರೋಗಿಗಳಿಗಾಗಿ ದುಡಿಯುವಂತ ಕೆಲಸ ಮಾಡ್ತಾಯಿದ್ದಾರೆ.
ತಾಂತ್ರಿಕ ಕಾರಣವೆಂದ ಡಿಎಚ್ಒ ಡಾ.ಮಹೇಶ್ ಬಿರಾದಾರ್
ಸಾಕಷ್ಟ ಜನ ನೌಕರರಿಗೆ ಯಾಕಾದ್ರು ಈ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದೇನೆ ಅಂತ ಅಂದುಕೊಳ್ಳುತ್ತಿದ್ದಾರೆ. ಯಾಕೆಂದ್ರೆ ಕೈಯಲ್ಲಿ ಹಣವಿಲ್ಲ ಕುಟುಂಬ ನಿರ್ವಹಣೆ ಸಾಕಷ್ಟು ಕಷ್ಟವಾಗುತ್ತಿದೆ. ಸಾಕಷ್ಟು ಈ ತಿಂಗಳಾಗುತ್ತೆ ಮುಂದಿನ ತಿಂಗಳು ಸಂಬಳ ಆಗುತ್ತೆ ಅಂತ ಮಕ್ಕಳ ಪೀಸ್ ಸೇರಿದಂತೆ ಇನ್ನಿತರ ಖರ್ಚಿಗೆ ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದಾರೆ. ಇತ್ತ ಸಾಲಗಾರರ ಕಾಟ ಕೂಡ ನೌಕರರಿಗೆ ತಡೆಯೋಕೆ ಆಗುತ್ತಿಲ್ಲ, ಇತ್ತ ಇಲಾಖೆಯಿಂದ ಸಂಬಳ ಕೂಡ ಆಗುತ್ತಿಲ್ಲ. ಇಂತಹದರ ಮಧ್ಯೆ ಸಹ ಆಸ್ಪತ್ರೆಗೆ ಬಂದು ಕೆಲಸ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಬಾರಿ ಇಲಾಖೆ ಅಧಿಕಾರಿಗಳಿಗೆ ಕೇಳಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಬಜೆಟ್ ಬಂದಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಯಾದಗಿರಿ ಡಿಎಚ್ಒ ಡಾ.ಮಹೇಶ್ ಬಿರಾದಾರ್ಗೆ ಕೇಳಿದರೆ ತಾಂತ್ರಿಕ ಕಾರಣದಿಂದ ಸಂಬಳ ವಿಳಂಬವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಯಾದಗಿರಿಯಲ್ಲಿ 2 ವಾರದ ಅಂತರದಲ್ಲಿ 3 ನವಜಾತ ಶಿಶುಗಳ ಸಾವು, 130ಕ್ಕೆ ಏರಿಕೆ
ಒಟ್ನಲ್ಲಿ ಆರೋಗ್ಯ ಇಲಾಖೆಯನ್ನ ನಂಬಿಕೊಂಡು ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ ನೌಕರರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ನಾನಾ ಯೋಜನೆಗಳಿಗೆ ಕೋಟ್ಯಾಂತರ ರೂ. ಖರ್ಚು ಮಾಡುತ್ತೆ ಆದ್ರೆ ಈ ನೌಕರರಿಗೆ ಸಂಬಳ ಕೊಡೋಕೆ ಯಾಕೆ ಹಿಂದೆ ಮುಂದೆ ನೋಡ್ತಾಯಿದೆ. ಅದು ಏನೇ ಇರಲಿ ಆದಷ್ಟು ಬೇಗ ಸಂಬಳವನ್ನ ಮಾಡಿ ನೌಕರರಿಗೆ ಆರ್ಥಿಕ ಸಂಕಷ್ಟದಿಂದ ಹೊರ ತರಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.