ನನನ್ನು ಅರೆಸ್ಟ್ ಮಾಡಿಸುವ ಉದ್ದೇಶವಿದೆ: ಡಿಕೆ ಶಿವಕುಮಾರ್, ಖರ್ಗೆ ವಿರುದ್ಧ ಯತ್ನಾಳ್ ಆರೋಪ
ಯಾದಗಿರಿಯ ಶಹಾಪುರನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ಪರವಾಗಿ ಬೃಹತ್ ರೋಡ್ ಶೋ ಬಳಿಕ ಕಲಬುರಗಿಯಲ್ಲಿ ಪ್ರಚೋದನಾತ್ಮಕ ಹೇಳಿಕೆ ಕುರಿತು ಕೇಸ್ ದಾಖಲು ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಿಕೆ ಶಿವಕುಮಾರ್, ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಹೆಚ್ಚು ಕೇಸ್ ಹಾಕಿ ಅರೆಸ್ಟ್ ಮಾಡಬೇಕು ಎಂಬ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ.
ಯಾದಗಿರಿ, ಏಪ್ರಿಲ್ 27: ಡಿಕೆ ಶಿವಕುಮಾರ್ (DK Shivakumar), ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಹೆಚ್ಚು ಕೇಸ್ ಹಾಕಿ ಅರೆಸ್ಟ್ ಮಾಡಬೇಕು ಎಂಬ ಉದ್ದೇಶವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪಿಸಿದ್ದಾರೆ. ಶಹಾಪುರನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ಪರವಾಗಿ ಬೃಹತ್ ರೋಡ್ ಶೋ ಬಳಿಕ ಮಾತನಾಡಿದ ಅವರು, ಯತ್ನಾಳ್ ದಿನಾಂಕ 7ರ ವರೆಗೆ ಬಹಿರಂಗ ಪ್ರಚಾರಕ್ಕೆ ಬರಬಾರದು. ಜೈಲಿನಲ್ಲಿ ಇರಬೇಕು ಎಂದು ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ನೇರವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ ಖರ್ಗೆ ಅವರನ್ನು ನಾನೋಬ್ಬನೇ ಟಾರ್ಗೆಟ್ ಮಾಡುತ್ತಿದ್ದೇನೆ. ಕೆಲವೊಬ್ಬ ನಾಯಕರು ಹೊಂದಾಣಿಕೆ ಇರುವುದರಿಂದ ಯಾವುದೇ ರೀತಿ ನೇರವಾಗಿ ದಾಳಿ ಮಾಡುತ್ತಿಲ್ಲ. ನನ್ನ ಮೇಲೆ ಯಾರು ಯಾರು ವ್ಯವಸ್ಥಿತ ಕುಮ್ಮಕ್ಕು ಇದೆ ಎನ್ನುವುದನ್ನು ದಿನಾಂಕ 7ರ ನಂತರ ಹೇಳುತ್ತೇನೆ ಎಂದಿದ್ದಾರೆ.
ದಲಿತರಿಗೆ ಹಿಂದುಳಿದವರಿಗೆ ಕಾಂಗ್ರೆಸ್ ಬಾರಿ ಮೋಸ ಮಾಡಿದೆ
ಒಬಿಸಿ ಸೀಟ್ ಮುಸ್ಲಿಂ ಜಾಸ್ತಿ ಕೊಟ್ಟಿರುವ ವಿಚಾರವಾಗಿ ಮಾತನಾಡಿದ್ದು, ದಲಿತರಿಗೆ ಹಿಂದುಳಿದವರಿಗೆ ಕಾಂಗ್ರೆಸ್ ಬಾರಿ ಮೋಸ ಮಾಡಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಸಮಾಜಿಕ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರವಿದೆ. ಮುಸ್ಲಿಂ ಧರ್ಮಕ್ಕೆ ಮೀಸಲಾತಿ ಕೊಡಲು ಬರುವುದಿಲ್ಲ. ಅದಕ್ಕೆ ಮೋದಿ, ಅಮಿತ್ ಶಾ ಹೇಳಿದ್ದಾರೆ. ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಮೀಸಲಾತಿ ತೆಗೆದು ಹಿಂದುಳಿದ ದಲಿತರಿಗೆ ಹಂಚುತ್ತೇವೆ.
ಇದನ್ನೂ ಓದಿ: ಕುಮಾರಸ್ವಾಮಿ ಈಗ ಫ್ರೀಯಾಗಿದ್ದಾರೆ, ಎಲ್ಲ ವಿಷಯಗಳ ಬಗ್ಗೆ ಮಾತಾಡಲಿ: ಡಿಕೆ ಶಿವಕುಮಾರ್
ಶ್ಯಾಮ ಪ್ರೀಥ್ರೋಡಾ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಸಲಹೆಗಾರ. ದೇಶದಲ್ಲಿ ಆಸ್ತಿ ಸರ್ವೆ ಮಾಡಿ ಪಿತ್ರಾರ್ಜಿತ ಆಸ್ತಿಯಲ್ಲಿ 55 ಪರ್ಸೆಂಟ್ ಆಸ್ತಿ ಸರ್ಕಾರ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಕಾನೂನು ತರೋಕೆ ವ್ಯವಸ್ಥೆ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ ತಂದೆಯ ಆಸ್ತಿ ಮಕ್ಕಳಿಕೆ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಸಂಪ್ರದಾಯ ಮುರಿದು ಮುಸ್ಲಿಂ ಆಸ್ತಿಯಲ್ಲಿ ಪಾಲು ಕೊಡುವ ಕೆಲಸ ಕಾಂಗ್ರೆಸ್ ಮಾಡುವಂತದ್ದು. ಕರಾಳ ಶಾಸನ ತರಬೇಕು ಅಂತ ಕಾಂಗ್ರೆಸ್ ಮಾಡಿದ್ದು, ಅದಕ್ಕೆ ದೇಶದ ಜನ ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬರ ಪರಿಹಾರ ಹಣ ಸಾಲದು, ಹೋರಾಟ ಮುಂದುವರಿಯಲಿದೆ: ಸಿಎಂ, ಡಿಸಿಎಂ ಮತ್ತು ಕೃಷಿ ಸಚಿವ
ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸರಿಯಾದ ದಾಖಲೆ ಕೊಡದಿದಕ್ಕೆ ತಡವಾಗಿದೆ. ಇವತ್ತು ಬರ ಪರಿಹಾರ ಘೋಷಣೆ ಮಾಡಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಇದ್ದಾಗಲೂ ನಾವು 20 ಸಾವಿರ ರೂ. ಕೋಟಿ ಕಳಿಸಿದ್ದೇವು. ಅವರು 100 ಕೋಟಿ ರೂ. ಅಷ್ಟೇ ಕೊಟ್ಟಿದ್ದಾರೆ. ಪರಿಹಾರ ಹಣ ಇವರು ರೈತರಿಗೆ ಕೊಡುತ್ತಿಲ್ಲ. ಎಲ್ಲವನ್ನೂ ತೆಗೆದುಕೊಂಡು ಹೋಗಿ ಗ್ಯಾರಂಟಿಗೆ ಹಾಕುತ್ತಿದ್ದಾರೆ. ಸಿಎಂ ಸುಪ್ರೀಂ ಕೋರ್ಟ್ಗೆ ಲೆಟರ್ ಬರೀಲಿ. ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಿಂದೂಗಳ ಹತ್ಯೆ ಆಗುತ್ತಿದೆ ಎಂದ ಯತ್ನಾಳ್
ರಾಜ್ಯದಲ್ಲಿ ಹಿಂದೂಗಳ ಹತ್ಯೆ ಆಗುತ್ತಿದೆ. ಜಿಹಾದಿ ಫಯಾಜ್ನಿಂದ ನೇಹಾ ಕೊಲೆ ಆಯ್ತು. ಇದೀಗ ಮತ್ತೇ ಯಾದಗಿರಿಯಲ್ಲಿ ಅದೇ ಫಯಾಜ್ ಅನ್ನೋ ಹೆಸರಿನವನಿಂದ ರಾಕೇಶನ ಕೊಲೆ ಆಗಿದೆ. ಹೀಗಾಗಿ ಈ ಬಾರಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಬಿಜೆಪಿಗೆ ಮತ ಹಾಕಿ. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲ್ಲಿಸಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:03 pm, Sat, 27 April 24