ಜಾಮೀನು ಸಿಕ್ಕರೂ ರಾಗಿಣಿಗಿಲ್ಲ ಇಂದು ಬಿಡುಗಡೆ ಭಾಗ್ಯ, ಯಾಕೆ?

ಸುಪ್ರೀಂ ಕೋರ್ಟ್​ನಲ್ಲಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕರೂ ನಟಿಗೆ ಇಂದು ಬಿಡುಗಡೆ ಭಾಗ್ಯ ಇಲ್ಲ. ಕೋರ್ಟ್​​ ಆದೇಶದ ಪ್ರತಿ ಪಡೆದು ಪ್ರಕ್ರಿಯೆ ನಡೆಯುವುದಕ್ಕೆ ಕಾಲಾವಕಾಶದ ಅಗತ್ಯವಿರುವ ಹಿನ್ನೆಲೆಯಲ್ಲಿ ಇಂದು ನಟಿ ರಾಗಿಣಿ ದ್ವಿವೇದಿಗೆ ಬಿಡುಗಡೆ ಭಾಗ್ಯ ಇಲ್ಲ.

  • TV9 Web Team
  • Published On - 19:52 PM, 21 Jan 2021
ಜಾಮೀನು ಸಿಕ್ಕರೂ ರಾಗಿಣಿಗಿಲ್ಲ ಇಂದು ಬಿಡುಗಡೆ ಭಾಗ್ಯ, ಯಾಕೆ?
ರಾಗಿಣಿ ದ್ವಿವೇದಿ

ಬೆಂಗಳೂರು: ಸುಪ್ರೀಂ ಕೋರ್ಟ್​ನಲ್ಲಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕರೂ ನಟಿಗೆ ಇಂದು ಬಿಡುಗಡೆ ಭಾಗ್ಯ ಇಲ್ಲ. ಕೋರ್ಟ್​​ ಆದೇಶದ ಪ್ರತಿ ಪಡೆದು ಪ್ರಕ್ರಿಯೆ ನಡೆಯುವುದಕ್ಕೆ ಕಾಲಾವಕಾಶದ ಅಗತ್ಯವಿರುವ ಹಿನ್ನೆಲೆಯಲ್ಲಿ ಇಂದು ನಟಿ ರಾಗಿಣಿ ದ್ವಿವೇದಿಗೆ ಬಿಡುಗಡೆ ಭಾಗ್ಯ ಇಲ್ಲ.

ರಾಗಿಣಿ ಜೈಲಿನಿಂದ ಬಿಡುಗಡೆಯಾಗಲು ಆದೇಶದ ದೃಢೀಕೃತ ಪ್ರತಿ ಹಾಜರುಪಡಿಸುವುದು ಕಡ್ಡಾಯ. ಸುಪ್ರೀಂ ಕೋರ್ಟ್​ನಲ್ಲಿ ಪ್ರತಿ ಪಡೆದು ಮುಂದಿನ ಕ್ರಮ ಜರುಗಿಸಬೇಕಿದೆ. ಹೀಗಾಗಿ, ಕೋರ್ಟ್ ಷರತ್ತು ಪೂರ್ಣಗೊಳಿಸಿದ ಬಳಿಕ ನಾಳೆ ಜೈಲಿನಿಂದ ನಟಿ ರಾಗಿಣಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು.. 140 ದಿನಗಳ ಜೈಲುವಾಸ ಅಂತ್ಯ